ಬೆಂಗಳೂರು : ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸಲು ನೋಂದಾಯಿತ ನಿರ್ಮಾಣ ಕಾರ್ಮಿಕರಿಗೆ ನೀಡುವ ರಿಯಾಯಿತಿ ಬಸ್ ಪಾಸ್ ಅನ್ನುಇಂದಿನಿಂದ ನೀಡದಂತೆ ಸರ್ಕಾರ ಆದೇಶವನ್ನು ಹೊರಡಿಸಲಾಗಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ‘ಸಹಾಯ ಹಸ್ತ’ ಬಸ್ ಪಾಸ್‌ಗಳನ್ನು ಉಚಿತವಾಗಿ ಸರ್ಕಾರದಿಂದ ನೀಡಲಾಗುತಿತ್ತು, ಆದರೆ ಈಗ ಇದಕ್ಕಿದ್ದ ಹಾಗೇ ಪಾಸ್‌ಗಳನ್ನು ನಿಲ್ಲಿಸಿರುವುದು ಸಾವಿರಾರು ಕಾರ್ಮಿಕರಿಗೆ ತೊಂದರೆ ಉಂಟಾಗಲಿದೆ.
ಬಿಎಂಟಿಸಿ ಸದ್ಯ ಲಾಸ್ ಆಗಿದ್ದು, ಹೀಗೆ ರಿಯಾಯಿತಿ ಬಸ್ ಪಾಸ್ ನೀಡುವುದರಿಂದ ಸಂಸ್ಥೆಗೆ ಹೆಚ್ಚಿನ ಹೊರೆ ಬೀಳುವುದನ್ನು ಮನಗಂಡು ಪಾಸ್ ಅನ್ನು ನಿಲ್ಲಿಸಲು ಬಿಎಂಟಿಸಿ ಮುಂದಾಗಿದೆ ಎಂದು ಮಾಹಿತಿ ತಿಳಿಸಲಾಗಿದೆ.
ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ ಉಚಿತವಾಗಿ ಸಿಗುತ್ತಿದ್ದ ಪ್ರಯಾಣ ಸೌಲಭ್ಯವನ್ನು ಬಿಎಂಟಿಸಿ ಅಧಿಕಾರಿಗಳು ಕಸಿದುಕೊಂಡಿದ್ದಾರೆ. ಸಾರಿಗೆ ನಿಗಮದ ಈ ನಿರ್ಧಾರಕ್ಕೆ ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.