Thursday, January 23, 2025

ಜೂ.21ರಂದು ಅರಮನೆ ಮುಂದೆ ಯೋಗ ದಿನಾಚರಣೆ

ಮೈಸೂರು : ಸಾಂಸ್ಕ್ರತಿಕ ನಗರಿ ಮೈಸೂರಿಗೆ ಮತ್ತೆ ಯೋಗ ಪ್ರದರ್ಶನದ ಯೋಗ ಬಂದೊದಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳುವ ವಿಶ್ವ ಯೋಗ ದಿನಾಚರಣೆಯ ಯೋಗ ಪ್ರದರ್ಶನಕ್ಕೆ ಮೈಸೂರಿನಲ್ಲಿ ಸ್ಥಳವನ್ನು ಆಯ್ಕೆ ಮಾಡಲಾಗಿದೆ.ನಗರದ ರೇಸ್‌ಕೋರ್ಸ್ ಹಾಗೂ ವಿಶ್ವ ಪ್ರಸಿದ್ಧ ಮೈಸೂರು ಅರಮನೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಭದ್ರತೆ ಸೇರಿ ಇತರೆ ಕಾರಣಗಳ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯವು ಪ್ರಧಾನಿ ಪಾಲ್ಗೊಳ್ಳುವ ಯೋಗ ಪ್ರದರ್ಶನಕ್ಕೆ ವಿಶ್ವ ವಿಖ್ಯಾತ ಮೈಸೂರು ಅರಮನೆಯನ್ನ (ಮುಂಭಾಗದ ಆವರಣ) ಆಯ್ಕೆ ಮಾಡಿದೆ. ಜೂನ್ 21 ರಂದು ಅರಮನೆಯಲ್ಲಿ ಯೋಗ ಪ್ರದರ್ಶನದ ಬೃಹತ್ ಕಾರ್ಯಕ್ರಮ ನೆರವೇರಲಿದೆ.

ವಿಶ್ವ ಯೋಗ ಪ್ರದರ್ಶನದ ಸಿದ್ಧತೆಗಳ ಕುರಿತು ವಿವರಿಸಲು ವಿಡಿಯೋ ಕಾನ್ಫ್ರೆನ್ಸ್ ನಡೆಯಿತು. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗಿಯಾಗಿ ನರೇಂದ್ರ ಮೋದಿ ಅವರಿಗೆ ಯೋಗ ದಿನಾಚರಣೆ ಸಿದ್ಧತೆಗಳ ಬಗ್ಗೆ ವಿವರಿಸಿದರು. ಹಾಗೆಯೇ ವಿಶ್ವ ಯೋಗ ದಿನಾಚರಣೆ ಬಗ್ಗೆ ಇಡೀ ವಿಶ್ವದಲ್ಲಿ ಪ್ರಚಾರ ಕೈಗೊಳ್ಳುವ ಕುರಿತಂತೆ ಕೂಡ ವಿವರಣೆ ನೀಡಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಡೆಯುವ ವಿಶ್ವ ಯೋಗ ದಿನದ ಅದ್ದೂರಿ ಆಚರಣೆಗೆ ಇಡೀ ಭಾರತದಲ್ಲಿ ಸಾಂಸ್ಕ್ರತಿಕ ನಗರಿ ಮೈಸೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಳೆದ ವರ್ಷ ಅತಿ ಹೆಚ್ಚು ಯೋಗ ಪಟುಗಳು ಭಾಗಿಯಾಗಿರುವುದಕ್ಕೆ ಮೈಸೂರು ಗಿನ್ನೆಸ್ ದಾಖಲೆ ಮಾಡಿತ್ತು. ಈ ಬಾರಿ ಕಳೆದ ವರ್ಷಕ್ಕಿಂತ ಹೆಚ್ಚು ಯೋಗ ಪಟುಗಳು ಭಾಗಿಯಾಗಿ ಮತ್ತೊಂದು ದಾಖಲೆಗೆ ಸಿದ್ಧಗೊಂಡಿದೆ.

RELATED ARTICLES

Related Articles

TRENDING ARTICLES