Friday, April 4, 2025

ಸಿಧು ಮೂಸೆವಾಲ ಅಂತ್ಯಕ್ರಿಯೆ : ಸಾವಿರಾರು ಮಂದಿ ಭಾಗಿ

ಚಂಡೀಗಡ್​​ : ಅಪರಿಚಿತರಿಂದ ಗುಂಡೇಟಿಗೆ ಬಲಿಯಾದ ಪಂಜಾಬಿ ಸುಪ್ರಸಿದ್ಧ ಗಾಯಕ ಹಾಗೂ ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅಂತ್ಯಸಂಸ್ಕಾರ ಇಂದು ಅವರ ಹುಟ್ಟೂರು ಮಾನ್ಸಾ ಜಿಲ್ಲೆಯ ಮೂಸಾ  ಗ್ರಾಮದಲ್ಲಿ ಭಾರೀ ಜನಸ್ತೋಮದ ನಡುವೆ ನೆರವೇರಿತು.

ಕುಟುಂಬಸ್ಥರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಅಂತ್ಯಸಂಸ್ಕಾರದ ವೇಳೆ ಪಾಲ್ಗೊಂಡರು. ಅನೇಕ ಮಂದಿ ಸಿಧು ಮೂಸೆವಾಲ ಪರ ಘೋಷಣೆ ಕೂಗಿದರು. ಸಿಧು ಮೂಸೆವಾಲ ಎಂದೇ ಖ್ಯಾತರಾಗಿದ್ದ ಶುಭ್ ದೀಪ್ ಸಿಂಗ್ ಸಿಧು ಅವರಿಗೆ ನೀಡಿದ್ದ ಭದ್ರತೆಯನ್ನು ಸರ್ಕಾರ ವಾಪಸ್ ಪಡೆಯುತ್ತಿದ್ದಂತೆ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದರು.

RELATED ARTICLES

Related Articles

a

TRENDING ARTICLES