Monday, December 23, 2024

ರೋಹಿತ್ ಚಕ್ರತೀರ್ಥ ವಿರುದ್ಧ ‌ಜೋರಾದ ಹೋರಾಟ..!

ಬೆಂಗಳೂರು: 2017ರಲ್ಲಿ ಇಂದಿನ ಪಠ್ಯ ಪುಸ್ತಕ ಪುನರ್ ಪರಿಶೀಲನಾ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ನಾಡಗೀತೆಯನ್ನು ತಿರುಚಿ ಬರೆಯಲಾದ ಫೇಸ್ ಬುಕ್ ಪೋಸ್ಟ್ ಶೇರ್ ಮಾಡಿದ್ದರು. ಇದೀಗ ಕುವೆಂಪು ಬರೆದ ಪಠ್ಯವನ್ನು ಕೈಬಿಟ್ಟಿದ್ದಾರೆ ಅಂತ ಆರೋಪಿಸಲಾಗ್ತಿದೆ. ಅಲ್ಲದೆ, ತಕ್ಷಣವೇ ರೋಹಿತ್ ಚಕ್ರ ತೀರ್ಥರನ್ನು ಬಂಧಿಸಿ ವಿಚಾರಣೆ ನಡೆಸಿ ಅಂತ ಆಗ್ರಹಿಸಲಾಗುತ್ತಿದೆ.ಅಲ್ಲದೆ, ಪಠ್ಯ ಪುಸ್ತಕದಲ್ಲಿ ಕೋಮುವಾದ ತುಂಬುವ ಕೆಲಸ ಮಾಡಲಾಗಿದೆ. ಹಾಗೆಯೇ ಕುವೆಂಪುಗೆ ಅಗೌರವ ತೋರಲಾಗಿದೆ ಅಂತ ಆರೋಪಿಸಿ ಕುವೆಂಪು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಹಂಪಾ ನಾಗರಾಜಯ್ಯ ರಾಜೀನಾಮೆ ನೀಡಿದ್ದಾರೆ. ಹಾಗೆಯೇ ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಕೂಡ ರಾಜೀನಾಮೆ ‌ನೀಡಿದ್ದು, ಹಾಗೆಯೇ ಹಿರಿಯ ಸಾಹಿತಿ ಮೂಡ್ನಾಕೋಡು ಚಿನ್ನಸ್ವಾಮಿ‌ ಕೂಡ ತಮ್ಮ ಪಠ್ಯವನ್ನು ‌ಪುಸ್ತಕದಲ್ಲಿ ಹಾಕದಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಆರೋಪವೇನೋ‌ ಮಾಡುತ್ತದೆ. ಆದ್ರೆ, ನಿರ್ಮಲಾನಂದ ಸ್ವಾಮೀಜಿ‌ ಕೂಡ ಈ ವಿಚಾರವಾಗಿ ಧ್ವನಿ ಎತ್ತಿದ್ದು‌, ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಸ್ವಾಮೀಜಿಯನ್ನು ಸ್ವತಃ ಸಚಿವ ಬಿ.ಸಿ.ನಾಗೇಶ್ ಭೇಟಿಯಾಗಿ ಪಠ್ಯ ಪುಸ್ತಕ ನೀಡಿ ಕುವೆಂಪುಗೆ ಪುಸ್ತಕದಲ್ಲಿ ಅವಮಾನ ಮಾಡಲಿಲ್ಲ.ಹಾಗೆ ಕುವೆಂಪು ಬರೆದ ನಾಡಗೀತೆಗೆ ಅವಮಾನ ಮಾಡಿ ಬರೆದ ವ್ಯಕ್ತಿ ಮೇಲೆ ಕ್ರಮ ತೆಗೆದುಕೊಳ್ಳೋದಾಗಿ ಸ್ವಾಮೀಜಿಗೆ ಬಿ.ಸಿ.ನಾಗೇಶ್ ಭರವಸೆ ‌ನೀಡಿದ್ದಾರೆ.
ಮೊನ್ನೆ ರೋಹಿತ್ ಚಕ್ರತೀರ್ಥ ಪರ ಬ್ಯಾಟ್ ಬೀಸಿದ್ದ ಸಚಿವ ಬಿ.ಸಿ.ನಾಗೇಶ್ ಈಗ ಉಲ್ಟಾ ಹೊಡೆದಿದ್ದಾರೆ. ನಾನು ಪ್ರೊಫೆಸರ್ ಅಂತ ಒಂದು ವರ್ಡ್ ತಪ್ಪಾಗಿದೆ.ಅದನ್ನೇ ದೊಡ್ಡದು ಮಾಡಬೇಡಿ.ಅವ್ರು ಖಾಸಗಿ ಇನ್ಸ್ಟಿಟ್ಯೂಟ್ ನಲ್ಲಿ ಸಿಇಟಿ ಐಐಟಿ ಮ್ಯಾಥ್ಸ್ ಕೋಚಿಂಗ್ ಕೊಡ್ತಾ ಇದ್ರು ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ ರೋಹಿತ್ ಚಕ್ರತಿರ್ಥ ವಿದ್ಯಾರ್ಹತೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ವಿವಾದ ಇನ್ನೂ ದೊಡ್ಡದಾಗುತ್ತಿದ್ದು, ಬಸವಣ್ಣನವರ ಬಗೆಗಿನ ಪಠ್ಯ ಕಡಿತಗೊಳಿಸಲಾಗಿದೆ ಅಂತ ಆರೋಪಿಸಲಾಗುತ್ತಿದೆ. ಮೊದಲು ಇದ್ದ ಪಠ್ಯ ಪುಸ್ತಕ ವಿರೋಧಿ ಹೋರಾಟ ಬಲಗೊಳ್ಳುತ್ತಿದ್ದು, ಇದನ್ನೆಲ್ಲಾ ಸರ್ಕಾರ ಹೇಗೆ ಎದುರಿಸುತ್ತೆ‌ ಅನ್ನೋದನ್ನು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES