Monday, December 23, 2024

ಭಾರತದ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಬೇಕು : ಹೆಚ್ ಸಿ ಮಹದೇವಪ್ಪ

ಬೆಂಗಳೂರು : ಈ ರಾಜ್ಯದ ದುರ್ದೈವ ಬಿಜೆಪಿ ಸರ್ಕಾರ ಬಂದಿದೆ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಚಾರಿತ್ರಿಕ ಸಾಧಕರನ್ನು ಪುಸ್ತಕದಿಂದ ಕೈ ಬಿಟ್ಟಿದೆ. ಉತ್ತಮ ವಿಧ್ಯಾರ್ಥಿಗಳನ್ನು ತಯಾರು ಆಗ್ತಾ ಇದ್ರು. ಈಗ ಇತಿಹಾಸದ ನಾಯಕರನ್ನು ಕೈ ಬಿಟ್ಟಿದ್ದು ಸರಿಯಲ್ಲ. ಬಿಜೆಪಿ ಪ್ರಜಾಪ್ರಭುತ್ವ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದರು.

ಅದಲ್ಲದೇ, ಸಾಹಿತಿಗಳು ಕೂಡ ಪುಸ್ತಕದಲ್ಲಿ ನಮ್ಮ ಪಠ್ಯ ಸೇರಿಸಬೇಡಿ ಅಂತಿದ್ದಾರೆ. ಬಿಜೆಪಿಯವರು ಯಾವ ಸಮಾಜ ನಿರ್ಮಾಣ ಮಾಡ್ತಾ ಇದ್ದಾರೆ. ಭವಿಷ್ಯದ ಭಾರತದ ನಿರ್ಮಾಣಕ್ಕೆ ನೈತಿಕ ಶಿಕ್ಷಣ ಬೇಕು. ಸಮಾಜ ಒಡೆಯು ಶಿಕ್ಷಣ ನೀಡಬಾರದು. ಕೋಮುವಾದ ಬಿತ್ತುವ ಕೆಲಸ ಮಾಡಬಾರದು. ಸಾಹಿತಿಗಳ,ಚಿಂತಕರ ಸಲಹೆ ಪಡೆದು ಒಳ್ಳೆಯ ಪುಸ್ತಕ ಬರಲಿ ಇದನ್ನು ವಿಧ್ಯಾರ್ಥಿಗಳು ಓದಿ ಒಳ್ಳೆಯ ಸಮಾಜ ನಿರ್ಮಾಣ ಆಗಲಿ. ಸಿಎಂ ಬೊಮ್ಮಾಯಿ‌ ಎಚ್ಚೆತ್ತು ಸರಿಪಡಿಸುವ ಕೆಲಸ ಮಾಡಲಿ ಎಂದು ಮಹದೇವಪ್ಪ ಒತ್ತಾಯ ಮಾಡಿದ್ದಾರೆ.

RELATED ARTICLES

Related Articles

TRENDING ARTICLES