ಬೆಂಗಳೂರು : ಪ್ರಾದೇಶಿಕ ಪಕ್ಷ ನಮ್ಮದು ನಮಗೆ ಬೆಂಬಲ ನೀಡಿ ನಿಮ್ಮ ಜೊತೆ ಇರ್ತೀವಿ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 32 ವೋಟು ನಮ್ಮ ಬಳಿ ಇದೆ. ಮೊದಲ ಪ್ರಾಶಸ್ತ್ಯಕ್ಕೆ ಅದು ಆಗುತ್ತದೆ. ಕೋಮುವಾದಿಗಳನ್ನು ದೂರ ಇಡಬೇಕಂದು ಒಂದು ರಾಷ್ಟ್ರೀಯ ಪಕ್ಷ ಹೇಳುತ್ತಿದೆ. ಆದರೆ, ಅವರ ಬಳಿ ಬಹುಮತ ಇಲ್ಲ ಎಂದರು.
ಇನ್ನು ಮಾಜಿ ಪ್ರಧಾನಿ ದೇವೆಗೌಡರು ಶುಕ್ರವಾರ ಸೋನಿಯಾ ಗಾಂಧಿ ಮತ್ತು ಕೆ ಸಿ ವೇಣುಗೋಪಾಲ ಜೊತೆ ಮಾತಾಡಿದ್ದಾರೆ. ಕುಪೇಂದ್ರ ರೆಡ್ಡಿ ಅವರು ಡಿ ಕೆ ಶಿವಕುಮಾರ್,ಮಲ್ಲಿಕಾರ್ಜುನ ಖರ್ಗೆ ,ಹರಿಪ್ರಸಾದ್, ರಾಮಲಿಂಗ ರೆಡ್ಡಿ ಇವರೆಲ್ಲರೂ ಭೇಟಿ ಮಾಡಿದ್ದಾರೆ.
ಮಾಜಿ ಸಚಿವ ಸಿದ್ದರಾಮಯ್ಯ ಅವರುಸಹ ಭೇಟಿ ಮಾಡಲು ಅನುಮತಿ ಕೇಳಿದರು. ನಾವು ಅರ್ಜಿ ಹಾಕೋದಾದರೆ ಶುಕ್ರವಾರವೇ ಹಾಕುತ್ತಿದ್ದೇವು. ಆದರೆ ಕಾಂಗ್ರೆಸ್ ಜೊತೆ ಮಾತಾಡಿ ಹಾಕೋಣ ಅಂತ ಇಂದು ಹಾಕಿದ್ದೇವೆ ಎಂದು ತಿಳಿಸಿದರು.
ನಾವು ಸೋನಿಯಾ ಗಾಂಧಿ ಸೇರಿದಂತೆ ಎಲ್ಲರಿಗೂ ಮನವಿ ಮಾಡುತ್ತೇನೆ. ಕಾಂಗ್ರೆಸ್ ನಮ್ಮ ಬೆಂಬಲ ಕೇಳಿಲ್ಲ. ನಮ್ಮದು 35 ವೋಟು ಇದ್ದರೆ ಅವರಲ್ಲಿ 22 ಇದೆ.