Monday, December 23, 2024

ಡಿಕೆಶಿಗೆ ದೆಹಲಿ ಕೋರ್ಟ್​ನಿಂದ ಸಮನ್ಸ್

ನವದೆಹಲಿ : KPCC ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಡಿಯಿಂದ ಆರೋಪ ಪಟ್ಟಿ ದಾಖಲಾದ ಬೆನ್ನಲ್ಲೇ, 2018 ರಲ್ಲಿ ದೆಹಲಿಯ ವಿಶೇಷ ನ್ಯಾಯಾಲಯ ಇಂದು ಡಿ.ಕೆ.ಶಿವಕುಮಾರ್ ಮತ್ತಿತರರಿಗೆ ಸಮನ್ಸ್ ನೀಡಿದೆ.

ಜುಲೈ 1 ರಂದು ವಿಚಾರಣೆಗೆ ಹಾಜರಾಗುವಂತೆ ವಿಶೇಷ ನ್ಯಾಯಾಧೀಶ ವಿಕಾಸ್ ಧುಲೆ ಡಿಕೆ ಶಿವಕುಮಾರ್ ಅವರಿಗೆ ನಿರ್ದೇಶಿಸಿದ್ದಾರೆ. ಡಿಕೆ ಶಿವಕುಮಾರ್ ಮತ್ತಿತರರ ವಿರುದ್ಧ ವಿಶೇಷ ಪ್ರಾಸಿಕ್ಯೂಟರ್ ನಿತೇಶ್ ರಾಣಾ ಅವರ ಮೂಲಕ ಇಡಿ ಸಲ್ಲಿಸಿದ ಜಾರ್ಜ್ ಶೀಟನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡ ನಂತರ ಕೋರ್ಟ್ ಈ ಆದೇಶ ನೀಡಿದೆ. ಅಕ್ರಮ ಹಣ ವರ್ಗಾವಣೆ ಕೇಸ್ ನಲ್ಲಿ ಈ ಹಿಂದೆ 2019, ಸೆಪ್ಟೆಂಬರ್ ನಲ್ಲಿ ಡಿಕೆ ಶಿವಕುಮಾರ್ ಅವರನ್ನು ಇಡಿ ಬಂಧಿಸಿತ್ತು. ನಂತರ 2019, ಅಕ್ಟೋಬರ್ 23 ರಂದು ದೆಹಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.

RELATED ARTICLES

Related Articles

TRENDING ARTICLES