ಮಂಡ್ಯ: ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಎಲ್ಲ ವರ್ಗಗಳಿಗೂ ಪ್ರಾತಿನಿಧ್ಯ ಕೊಟ್ಟಿದ್ದೇವೆ. ಎಲ್ಲರನ್ನೂ ಮುಟ್ಟುವ ಕೆಲಸ ನಮ್ಮ ಪಾರ್ಟಿ ಮಾಡಿದೆ. ಗೆಲ್ಲುವ ಪಾರ್ಟಿ ಆದರಿಂದ ಆಕಾಂಕ್ಷಿತರ ಸಂಖ್ಯೆ ಹೆಚ್ಚಿರುತ್ತೆ. ಕೆಲವೊಮ್ಮೆ ಆಯ್ಕೆ ಸಂದರ್ಭದಲ್ಲಿ ಗೊಂದಲ ಸಹಜ. ವಾಸ್ತವವಾಗಿ ಎಲ್ಲರ ಸಹಮತ ಪಡೆದೆ ಕೋರ್ ಕಮಿಟಿಯಲ್ಲಿ ಆಯ್ಕೆಯಾಗುತ್ತೆ ಎಂದು ಹೇಳಿದರು.
ಅದಲ್ಲದೇ, MLA ಚುನಾವಣೆಗೆ ಆಕ್ಟೀವ್ ಇರೋರು ಬೇಕಾಗುತ್ತೆ. ಇದಕ್ಕೆ ಅಷ್ಟು ಆಕ್ಟೀವ್ ಇಲ್ಲದಿದ್ದರೂ ಪರ್ವಾಗಿಲ್ಲ. ಹಾಗಾಗಿ ಆಕ್ಟೀವ್ ಇಲ್ಲದ ಜಗ್ಗೇಶ್ ರಾಜ್ಯಸಭೆಗೆ ಸೂಕ್ತ ಅಭ್ಯರ್ಥಿ. ಆಕ್ಟೀವ್ ಇರೋರಿಗೆ ಮುಂದಿನ MLA ಟಿಕೆಟ್ ಕೊಡ್ತೀವಿ ಎಂದರು.
ರಾಜ್ಯಸಭಾ ಚುನಾವಣೆ ತಂತ್ರಗಾರಿಕೆ ವಿಚಾರವಾಗಿ ಮಾತನಾಡಿದ ಅವರು, ನಮ್ಮಲ್ಲಿ 31 ಹೆಚ್ಚುವರಿ ಮತ ಉಳಿಯುತ್ತೆ. ಫಸ್ಟ್ ಪ್ರಿಫರೆನ್ಸ್ ಕೊಟ್ಟವರು, ಸೆಕೆಂಡ್ ಪ್ರಿಫರೆನ್ಸ್ ನಮಗೇ ಕೊಡಬಹುದು. ಜೆಡಿಎಸ್ ಕಾಂಗ್ರೆಸ್ ಅತೃಪ್ತರಿಂದ ಬಿಜೆಪಿಗೆ ವರದಾನ ಜೆಡಿಎಸ್ ನಲ್ಲಿ ಈಗಾಗಲೇ 6 ಅತೃಪ್ತರಿದ್ದಾರೆ. ಅವರೆಲ್ಲರೂ ಬಿಜೆಪಿ ಒಳ್ಳೆಯ ಪಾರ್ಟಿ ಅಂತಾ ತೀರ್ಮಾನ ಮಾಡಿದ್ದಾರೆ. ಸಿದ್ದು-ಡಿಕೆಶಿ ಜುಗಲ್ ಬಂಧಿ ಸಹ ವರ್ಕ್ ಔಟ್ ಆಗಲಿದೆ. ಇವರಿಬ್ಬರಿಗೂ ಬುದ್ಧಿ ಕಲಿಸುವ ಆಲೋಚನೆ ಆ ಪಕ್ಷದಲ್ಲಿ ನಡೆಯುತ್ತಿದೆ. ಅವೆಲ್ಲವೂ ಬಿಜೆಪಿ ಪಾಲಿಗೆ ವರದಾನವಾಗಲಿವೆ ಎಂದು ಹೇಳಿದರು.