Friday, November 22, 2024

ಸೈಟ್ ಪಡೆದವರು, ಪಡೆಯಲಿರುವವರಿಗೆ ಬಿಡಿಎ ಬಿಗ್ ಶಾಕ್ ..!

ಬೆಂಗಳೂರು: ಬಿಡಿಎ ಮೂಲ ಉದ್ದೇಶ ಬಡ ಹಾಗೂ ಮಧ್ಯಮ ವರ್ಗದವರಿಗೆ ಸ್ವಂತ ಸೂರು ಕಲ್ಪಿಸೋದು ಆದ್ರೆ, ಸೈಟ್ ಖರೀದಿಸಿದವರಿಗೆ ಪ್ರಾಧಿಕಾರ ಹೊಸ ಷರತ್ತು ಹಾಕ್ತಿದೆ‌. ಸೈಟ್ ಖರೀದಿಸಿದವರು, ಮುಂದೆ ಖರೀದಿಸುವವರು ಐದು ವರ್ಷದ ಒಳಗೆ ಮನೆ ನಿರ್ಮಾಣ ಮಾಡಬೇಕು ಅಂತ ಬಿಡಿಎ ಹೇಳ್ತಿದೆ. ಒಂದು ವೇಳೆ ಮನೆ ನಿರ್ಮಾಣ ಮಾಡಿಲ್ಲ ಅಂದ್ರೆ ಲಕ್ಷ ಲಕ್ಷ ದಂಡ ಪಾವತಿಸಬೇಕು ಎಂದು ಅಚ್ಚರಿಯ ನಿರ್ಧಾರವನ್ನು ಪ್ರಾಧಿಕಾರ ಕೈಗೊಂಡಿದೆ. ವಿದ್ಯುತ್, ರಸ್ತೆ, ನೀರು, ಒಳಚರಂಡಿ ಇತರೆ ಮೂಲಭೂತ ಸೌಲಭ್ಯವನ್ನು ಬಡಾವಣೆಗೆ ಒದಗಿಸದೇ ಇಂತಹ ನಿರ್ಧಾರ ಕೈಗೊಳ್ಳುವುದು ಎಷ್ಟು ಸರಿ ಅನ್ನೋದು ನಿವೇಶನ ಪಡೆದವರ ಆಕ್ರೋಶ.
ಬಿಡಿಎ ಬಡಾವಣೆಗಳಲ್ಲಿ ಸೈಟು ಪಡೆದವರು ಎರಡು ವರ್ಷಗಳಲ್ಲಿ ಮನೆ ಕಟ್ಲಿಲ್ಲ ಅಂದ್ರೆ ದಂಡ ಕಟ್ಟಲು ಸಿದ್ಧರಾಗಿ ಅಂತಾ ಮತ್ತೊಮ್ಮೆ ಬಿಡಿಎ ಸ್ಪಷ್ಟಪಡಿಸಿದೆ. ಬಿಡಿಎ ಇನ್ನೂ ಲೇಔಟ್‌ನಲ್ಲಿ ಮೂಲಭೂತ ಸೌಲಭ್ಯ ಒದಗಿಸಬೇಕಿದೆ. ಆದರೂ ಮನೆ ನಿರ್ಮಾಣ ಮಾಡಿಲ್ಲ ಅಂದ್ರೆ ಶುದ್ಧ ಕ್ರಯ ಪತ್ರ ಪಡೆಯುವ ವೇಳೆ ದಂಡ ವಿಧಿಸಲು ಅವಕಾಶ ಇದೆ ಅಂತಾ ಬಿಡಿಎ ನಿಯಮಾವಳಿ ಹೇಳುತ್ತಿದೆ. ಇದು ನಿವೇಶನದಾರರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು ನಿವೇಶನ ಖಾಲಿ ಬಿಟ್ಟರೆ ಎಷ್ಟು ದಂಡ ಕಟ್ಟಬೇಕು ಎಂಬುದನ್ನು ನೋಡೋದಾದ್ರೆ.

ನಿವೇಶನ : ವಿಸ್ತೀರ್ಣ ದಂಡ
30*40  : 60,000 ರೂ.
40*60  : 3.75 ಲಕ್ಷ ರೂ.
50*80  : 6 ಲಕ್ಷ ರೂ.

ಸೈಟಿಗೇ ಕಷ್ಟ ಪಟ್ಟಿದ್ದೇವೆ. ನಾಲ್ಕೈದು ಸಾರಿ ಅರ್ಜಿ ಹಾಕಿದ ಮೇಲೆ ನಿವೇಶನ ಸಿಕ್ಕಿದೆ. ಅದಕ್ಕೆ ನಾವು ಸಾಲ ಮಾಡಿಕೊಂಡಿದ್ದೇವೆ. ಈಗ ಮನೆಯನ್ನೂ ಕಟ್ಟಿಕೊಳ್ಳಿ ಎಂದರೆ ಹೇಗೆ..? ಸಾಲಗಳ ಮಧ್ಯೆ ಮನೆ ಕಟ್ಟುವುದು ಎಲ್ಲಿಂದ ಸಾಧ್ಯ..? ಬಿಡಿಎ ಕಾಲಾವಕಾಶ ಕೊಡಬೇಕು ಎಂದು ಅನ್ನೋ ಕೂಗು ಕೇಳಿ ಬಂದಿದೆ.ಮೂಲಭೂತ ಸೌಲಭ್ಯ ಒದಗಿಸಲು ಸರ್ಕಾರ ಕೋಟಿ ಕೋಟಿ ರೂಪಾಯಿ ಅನುದಾನ ನೀಡಿದೆ. ಇದರ ಅನ್ವಯ ಲೇಔಟ್‌ಗೆ ಬೇಕಾದ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪ ಸೇರಿ ಹಲವು ಮೂಲಭೂತ ಸೌಲಭ್ಯಗಳು ತ್ವರಿತವಾಗಿ ಒದಗಿಸುತ್ತಿಲ್ಲ. ಹೀಗಿದ್ದರೂ ಮನೆ ಕಟ್ಟಿ ಅಂತ ಟಾರ್ಚರ್ ಕೊಡೋದು ಎಷ್ಟು ಸರಿ ಅಂತಿದ್ದಾರೆ ನಿವೇಶನದಾರರು.

ಏನೇ ಆದರೂ ಲೇಔಟ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ‌.ಇದೀಗ ಬೇಗ ಮನೆ ಕಟ್ಟಿಲ್ಲ ಅಂದರೆ ದಂಡ ಹಾಕುತ್ತೇವೆ ಅಂತ ಬಿಡಿಎ ಹೇಳ್ತಿರೋದು ಬಡ ಹಾಗೂ ಮಧ್ಯಮ ವರ್ಗದವರ ಆತಂಕಕ್ಕೆ ಕಾರಣವಾಗಿದೆ.

RELATED ARTICLES

Related Articles

TRENDING ARTICLES