Wednesday, January 22, 2025

ಸಿಲಿಕಾನ್​ ಸಿಟಿಯಲ್ಲಿ ಮತ್ತೊಂದು ಆ್ಯಸಿಡ್ ದಾಳಿ

ಬೆಂಗಳೂರು: ಸ್ನೇಹಿತನಿಂದ ಸ್ನೇಹಿತನ ಮೇಲೆಯೇ ಆ್ಯಸಿಡ್ ಅಟ್ಯಾಕ್‌ ಮಾಡಿದ ಘಟನೆ ಕಬ್ಬನ್ ಪೇಟೆ 10ನೇ ಕ್ರಾಸ್​ನಲ್ಲಿ ನಡೆದಿದೆ.

ನಗರದ ಪಶ್ಚಿಮ ಬಂಗಾಳ ಮೂಲದ ‘ಜನತಾ ಅದಕ್’ ಎಂಬಾತನಿಂದ ಕೃತ್ಯ ನಡೆದಿದ್ದು, ಗಾಯಾಳು ಮತ್ತು ಆರೋಪಿ ಒಂದೇ ಕಡೆ ಕೆಲಸ ಮಾಡುತ್ತಿದ್ರು. ಆದರೆ ಭಾನುವಾರ ರಾತ್ರಿ ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ಡೈಲೂಟೆಡ್ ಸಲ್ಫ್ಯೂರಿಕ್ ಆ್ಯಸಿಡ್‌ ಎರಚಿ ಪರಾರಿಯಾಗಿದ್ದಾನೆ.

ಬೆಳ್ಳಿ ಪಾಲಿಶ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಮತ್ತು ಗಾಯಾಳು, ಬೆಳ್ಳಿ ಪಾಲಿಶ್ ಮಾಡಲು ತಂದಿದ್ದ ಡೈಲೂಟ್ ಆಸಿಡ್ ಎರಚಿದ್ದಾನೆ. ಗಾಯಾಳುವಿನ ಮುಖ ಮತ್ತು ಎದೆಗೆ ಗಂಭೀರ ಗಾಯಗೊಂಡಿದ್ದು, ಶೇಕಡಾ 30% ರಷ್ಟು ಗಾಯ, ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿ ಜನತಾ ಅದಕ್ ಬಂಧಿಸಿದ ಪೊಲೀಸರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಮೇಲಿನ ಆಸಿಡ್ ದಾಳಿ ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದೆ.

RELATED ARTICLES

Related Articles

TRENDING ARTICLES