Monday, December 23, 2024

ಮಗಳ ಶವದ ಜೊತೆ ನಾಲ್ಕು ದಿನ ಕಳೆದ ತಾಯಿ

ಮಂಡ್ಯ: ಮಗಳ ಶವದ ಜೊತೆ ನಾಲ್ಕು ದಿನ ಕಳೆದ ಘಟನೆ ಮಂಡ್ಯದ ಹಾಲಹಳ್ಳಿಯಲ್ಲಿ ನಡೆದಿದೆ.

ಹಾಲಹಳ್ಳಿ ಬಡಾವಣೆಯ ರೂಪ (30) ನಾಲ್ಕು ದಿನದ ಹಿಂದೆಯೇ ಸಾವನ್ನಪ್ಪಿದ್ದು, ಮಗಳ ಶವದ ಮುಂದೆಯೇ ತಾಯಿ ನಾಗಮ್ಮ ಮಲಗಿದ್ದಾರೆ.

ಕಳೆದ 10 ವರ್ಷದ ಹಿಂದೆ ಮದುವೆಯಾಗಿದ್ದ ರೂಪಗೆ ಇಬ್ಬರು ಮಕ್ಕಳು ಸಹ ಇದ್ದರು. ಆದರೆ ಕೌಟುಂಬಿಕ ಕಲಹದಿಂದ 5 ವರ್ಷಗಳ ಹಿಂದೆ ಗಂಡ ಮತ್ತು ಮಕ್ಕಳನ್ನು ಬಿಟ್ಟು, ತಾಯಿ ನಾಗಮ್ಮ ಮನೆಯಲ್ಲಿ ವಾಸವಾಗಿದ್ದರು. ಅಲ್ಲದೇ ರೂಪ ಹೋಂ ಗಾರ್ಡ್​ ಕೆಲಸಕ್ಕೆ ಸಹ ಹೋಗುತ್ತಿದ್ದರು.

ನಾಗಮ್ಮ ಮನೆಯ ಬಾಗಿಲನ್ನು ಹೊಡೆದು ನೋಡಿದಾಗ ರೂಪ ಶವ ಕೊಳೆತ ಸ್ಧಿತಿಯಲ್ಲಿದ್ದು, ಆ ಶವದ ಪಕ್ಕ ತಾಯಿ ನಾಗಮ್ಮ ಕುಳಿತಿರುವ ದೃಶ್ಯ ಕಂಡ ಜನರು ಬೆಚ್ಚಿ ಬಿದ್ದಿದ್ದಾರೆ. ನಂತರ ಪೊಲೀಸರಿಗೆ ಸ್ಧಳೀಯರು ಮಾಹಿತಿ ನೀಡಿದ್ದಾರೆ. ಆದರೆ ರೂಪ ಸಾವು ಹೇಗೆ ಆಗಿದೆ ಎಂದು ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಂಡ್ಯ ಪೂರ್ವ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES