ಬೆಂಗಳೂರು : ಭಾರತ ರಕ್ಷಣಾ ವೇದಿಕೆ ಮೂವರು ಸದ್ಯಸರು ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿ ಹಲ್ಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಡಿಸಿಪಿ ಶರಣಪ್ಪ ಪ್ರತಿಕ್ರಿಯಿಸಿದ್ದಾರೆ.
ನಗರದ ಗಾಂಧಿ ಭವನದಲ್ಲಿ ನಡೆದ “ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ”ಯಲ್ಲಿ ಭಾಗಿಯಾಗಿದ್ದ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎಸೆದು ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.ಇವರು ರೈತರ ಸಭೆಗೆ ಆಹ್ವಾನಿತರಾಗಿ ಈ ಮೂವರು ಬಂದಿದ್ದಾರೆ.
ಸಭೆಯಲ್ಲಿ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುದ್ಧವೀರ್ ಸಿಂಗ್ ಇವರು ಕನ್ನಡ ಬಿಟ್ಟು ಬೇರೆ ಭಾಷೆಗಳನ್ನು ಮಾತಾನಾಡುತ್ತಿದ್ದರು ಎಂದು ಮೈಕ್ ತೊಗೊಂಡು ಹೊಡೆದು, ಮಸಿ ಎರಚಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಪ್ರೆಸ್‌ಮೀಟ್ ತಡೆಯಲು ಗಲಾಟೆ ಮಾಡಿರೋದು ಸಹ ಬೆಳಕಿಗೆ ಬಂದಿದೆ.
ಇನ್ನು ಹಲ್ಲೆ ಎಸಗಿದವರ ಮೇಲೆ Ipc 355, 354, 324 ,504 , 506, 34 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಮತ್ತು ಸಿಸಿಟಿವಿ ಹಾಗೂ ಮೊಬೈಲ್ ದೃಶ್ಯಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
Ipc 355 – ವ್ಯಕ್ತಿಗೆ ಅವಮಾನ ಹಲ್ಲೆ, 354- ಲೈಂಗಿಕ ದೌರ್ಜನ್ಯ – ಅಸಭ್ಯ ವರ್ತನೆ, 324- ಅಪಾಯಕಾರಿ ಆಯುಧಗಳಿಂದ ಗಾಯ, ಮಾಡುವುದು, 504- ಶಾಂತಿ ಭಂಗ ಉಂಟು ಮಾಡುವುದು. 506- ಅಪರಾಧಿತ ಭಯೋತ್ಪಾದನೆಗೆ ದಂಡನೆ. 323- ಸ್ವ ಇಚ್ಚೆಯಿಂದ ಗಾಯ. 34- ಸಮಾನ ಉದ್ದೇಶದಿಂದ ಹಲವಾರು ವ್ಯಕ್ತಿಗಳಿಂದ ಕೃತ್ಯ.