Saturday, January 18, 2025

ಸಿದ್ದರಾಮಯ್ಯಗೆ ಟಾಂಗ್​ ನೀಡಿದ ಪ್ರಹ್ಲಾದ್​​ ಜೋಶಿ

ಧಾರವಾಡ : ರಾಹುಲ್​ ಗಾಂಧಿಗೆ ಬುದ್ದಿ ಇಲ್ಲಾ ಅವರು ಏನೇನೋ ಮಾತಾಡ್ತಾರೆ, ನೀವು ಆಗಬೇಡಿ ಎಂದು ಸಿದ್ದರಾಮಯ್ಯಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟಾಂಗ್​ ಮಾಡಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಮೂಲ ಕೆದಕಿದ ಸಿದ್ದರಾಮಯ್ಯಗೆ ಇದಿರೇಟು ಕೊಟ್ಟ ಅವರು ಗೋಡ್ಸೆ ಆರ್ ಎಸ್ ಎಸ್ ನವರು, ಮಹಾತ್ಮ ಗಾಂಧಿಯನ್ನು ಕೊಂದವರು ಆರ್ ಎಸ್ ಎಸ್ ನವರು ಎಂದು ರಾಹುಲ್​ ಗಾಂಧಿ ಹೇಳಿದ್ದಕ್ಕೆ ಅವರ ಮೇಲೆ ಮಾನಹಾನಿ ಕೇಸ್ ಹಾಕಲಾಗಿದೆ ಎಂದರು.

ಅದಲ್ಲದೇ, ಈ ವಿಷಯದಲ್ಲಿ ರಾಹುಲ್ ಕೋರ್ಟಗೆ ಅಲೆದಾಡುತ್ತಿದ್ದಾರೆ. ಸರ್ದಾರ ವಲ್ಲಭಭಾಯಿ ಪಟೇಲರೆ, ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ಕಾರಣ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮುಸಲ್ಮಾನ ಮತಗಳಿಗಾಗಿ ಕಾಂಗ್ರೇಸ್ ನಾಯಕರು ಏನೇನೋ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES