Thursday, January 23, 2025

ಜೂನ್ 9ಕ್ಕೆ ನಯನತಾರಾ-ವಿಗ್ನೇಶ್ ಮದುವೆ

ಕಳೆದ ಎರಡ್ಮೂರು ವರ್ಷಗಳಿಂದ ನಯನತಾರ ಮದುವೆಯ ವಿಚಾರ ಚರ್ಚೆ ಆಗುತ್ತಲೇ ಇದೆ. ಕೊನೆಗೂ ಈ ಎಲ್ಲ ಚರ್ಚೆಗೆ ಫುಲ್ ಸ್ಟಾಪ್ ಇಟ್ಟಿರುವ ಈ ತಾರೆ ಜೂನ್ 09 ರಂದು ನಯನತಾರಾ ಮತ್ತು ವಿಗ್ನೇಶ್ ಶಿವನ್ ಹಸೆಮಣೆ ಏರಲಿದ್ದಾರೆ.

ತಿರುಪತಿ ಬದಲಾಗಿ ಅವರು ಆಯ್ಕೆ ಮಾಡಿಕೊಂಡಿದ್ದು ತಮಿಳುನಾಡಿನ ಹೆಸರಾಂತ ರೆಸಾರ್ಟ್ ನಲ್ಲಿ ಈ ಜೋಡಿ ಮದುವೆಯಾಗಲಿದ್ದು, ಈ ಜೋಡಿಯ ಹೊಸ ಜೀವನಕ್ಕಾಗಿ ಮಹಾಬ್ಸ್ ರೆಸಾರ್ಟ್ ಶೀಘ್ರದಲ್ಲೇ ಸಿಂಗಾರಗೊಳ್ಳಲಿದೆ. ಈಗಾಗಲೇ ತಮ್ಮ ಮದುವೆಗೆ ಆಹ್ವಾನಿಸಲು ಅತಿಥಿಗಳ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿರುವ ಜೋಡಿ, ಅತ್ಯಾಪ್ತ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ. ಮದುವೆಯ ನಂತರ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಲ್ಲಿ ಸಿನಿಮಾ ರಂಗದ ನಟ, ನಟಿ, ತಂತ್ರಜ್ಞರಿಗೆ ಮತ್ತು ಆಪ್ತರಿಗೆ ಆಹ್ವಾನ ನೀಡಲಾಗುತ್ತದೆಯಂತೆ. ಈ ಆರತಕ್ಷತೆ ಕಾರ್ಯಕ್ರಮವು ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

RELATED ARTICLES

Related Articles

TRENDING ARTICLES