ಬೆಳಗಾವಿ : ಮಂಗಳೂರು ಮಳಲಿ ಮಸೀದಿ ಬಳಿ ಮಂದಿರವಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಜಿಲ್ಲೆಗೂ ಮಸೀದಿ ವರ್ಸಸ್ ಮಂದಿರ ವಿವಾದ ಕಾಲಿಟ್ಟಿದೆ.
ರಾಮದೇವ ಗಲ್ಲಿಯ ಶಾಹಿ ಮಸೀದಿ ಈ ಹಿಂದೆ ಮಂದಿರವಾಗಿತ್ತು ಎಂದು ಬಿಜೆಪಿ ಶಾಸಕ ಅಭಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಶಾಹಿ ಮಸೀದಿಯಲ್ಲಿ ದೇಗುಲದ ಗರ್ಭಗುಡಿಯ ಬಾಗಿಲು ಇದೆ. ಸಣ್ಣ ಬಾಗಿಲು ದೇವಸ್ಥಾನಗಳ ಹೊರತು ಬೇರೆ ಕಡೆ ಇರುವುದಿಲ್ಲ. ದೇವಾಲಯವನ್ನು ಶಾಹಿ ಮಸೀದಿಯಾಗಿ ಪರಿವರ್ತಿಸಲಾಗಿದೆ. ಶಾಹಿ ಮಸೀದಿ ಬಗ್ಗೆ ಹಿರಿಯರು ನನ್ನ ಗಮನಕ್ಕೆ ತಂದಿದ್ದಾರೆ ಎಂದು ತಿಳಿಸಿದ್ದಾರೆ.
ಶಾಹಿ ಮಸೀದಿ ಬಗ್ಗೆ ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ ಶಾಸಕ ಅಭಯ್ ಪಾಟೀಲ್, ಶಾಹಿ ಮಸೀದಿ ಸರ್ವೆ ಮಾಡುವಂತೆ ಬೆಳಗಾವಿ ಡಿಸಿಗೆ ಹೇಳಿದ್ದೇನೆ. ಶಾಹಿ ಮಸೀದಿ ಪಕ್ಕದಲ್ಲಿ ಹನುಮಾನ್ ಮಂದಿರವಿದೆ. ಹನುಮಾನ್ ಮಂದಿರದ ಪಕ್ಕದಲ್ಲಿದ್ದ ದೇಗುಲದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಇನ್ನು, ಶಾಹಿ ಮಸೀದಿ ಬಗ್ಗೆ ಎಲ್ಲಾ ಸಂಘಟನೆಗಳ ಗಮನಕ್ಕೂ ತರುತ್ತೇನೆ ಎಂದು ಹೇಳಿದ್ದಾರೆ.