ಬೆಂಗಳೂರು: ಊರಿಗೆ ಬರ್ತೀನಿ ಅಪ್ಪಾ ಅಂತಾ ತಂದೆಗೆ ಕರೆ ಮಾಡಿದ್ದ ಯುವತಿ ಇದ್ದಕ್ಕಿದ್ದ ಹಾಗೆ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಗೋವಿಂದರಾಜನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತುಮಕೂರಿನ ಪಾವಗಡ ಮೂಲದವಳಾಗಿರೋ ಯುವತಿ ಪವಿತ್ರ ಪಬ್ಲಿಕ್ ಸರ್ವಿಸ್ ಕನಸು ಕಂಡಿದ್ಳು. ಅದಕ್ಕೆ ಅಂತಾ ಹಗಲು ರಾತ್ರಿ ಓದ್ತಿದ್ಳು. ಮಗಳ ಕನಸ್ಸಿಗೆ KSRTC ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ತಂದೆಯೂ ಅಷ್ಟೇ ಸಪೋರ್ಟ್ ಆಗಿ ಓದಿಸ್ತಿದ್ರು. ಇತ್ತೀಚಗೆ ಯುವತಿಗೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲೂ ಕೆಲಸ ಸಿಕ್ಕಿತ್ತು. ಇಷ್ಟೆಲ್ಲಾ ಸುಂದರವಾದ ಜೀವನ ಸಾಗಿಸುತ್ತಿದ್ದ ಯುವತಿ ಇದ್ದಕ್ಕಿದ್ದ ಹಾಗೆಯೇ ನೇಣಿಗೆ ಶರಣಾಗಿದ್ದಾಳೆ. ಇದಕ್ಕೆ ಕಾರಣ ಚೌಡೇಶ್ವರಿ ಪಿ.ಜಿ ಮಾಲೀಕರು ಅಂತಾ ಮೃತಳ ತಂದೆ ರಾಮಣ್ಣ ಆರೋಪಿಸಿದ್ದಾರೆ. ಜೊತೆಗೆ ಏಕಾಏಕಿ ಸಿಸಿ ಕ್ಯಾಮೆರಾ ತೆಗೆಸಿದ್ದು ಯಾಕೆ? ಇದರ ಹಿಂದೆ ಏನೋ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ 6 ತಿಂಗಳಿಂದ ಪವಿತ್ರಾ ಪಿ.ಜಿಯಲ್ಲಿ ವಾಸಿಸ್ತಿದ್ಳು. 1 ತಿಂಗಳ ಹಿಂದೆ ಪಿ.ಜಿ ಮಾಲೀಕರು ಖಾಲಿ ಮಾಡುವಂತೆ ಎಲ್ಲರಿಗೂ ತಿಳಿಸಿದ್ರು. ಪಿ.ಜಿಯಲ್ಲಿದ್ದ ಎಲ್ಲರೂ ಕೂಡ ಕಾಲಿ ಮಾಡಿದ್ರು. ಆದ್ರೆ ಮೃತ ಪವಿತ್ರಾ ಸೇರಿ 4 ಜನ ಯುವತಿಯರು ಭಾನುವಾರದವರೆಗೆ ಟೈಮ್ ಕೇಳಿದ್ರಂತೆ. ಕಾಲಿ ಮಾಡೋಕೆ ಮುಂದಾಗಿದ್ದ ಯುವತಿ ಬೆಳಗ್ಗೆ 8.30ಕ್ಕೆ ಅಪ್ಪನಿಗೆ ಕರೆ ಮಾಡಿ ಬರ್ತಿದಿನಿ. ಬ್ಯಾಗ್ ಕೂಡ ರೆಡಿ ಮಾಡಿದಿನಿ ಅಂತಾ ಹೇಳಿದ್ದಾಳೆ. ಆದ್ರೆ, ಇದ್ದಕ್ಕಿದ್ದಂತೆ ನೇಣಿಗೆ ಶರಣಾಗಿದ್ದಾಳೆ. ಆದ್ರೆ ಅವಳ ತಂದೆ ಮಾತ್ರ ನಮ್ಮ ಮೇಲೆ ಆಪಾದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಅಂತ ಪಿಜಿಯ ಮಾಲೀಕರಾದ ಮಂಗಳಾ ಮತ್ತು ಚಂದ್ರು ದಂಪತಿಗಳ ವಾದವಾಗಿದೆ.
ಒಟ್ಟಿನಲ್ಲಿ ಸದ್ಯ ಘಟನಾ ಸ್ಥಳಕ್ಕೆ ಗೋವಿಂದರಾಜ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಿ.ಜಿ ಮಾಲೀಕರ ವಿರುದ್ದ ಆರೋಪಿಸಿ ಮೃತಳ ತಂದೆ ಠಾಣೆಗೆ ದೂರು ನೀಡಿದ್ದಾರೆ. ಯುವತಿಯ ಸಾವಿಗೆ ನಿಜವಾದ ಕಾರಣ ಏನು ಅನ್ನೋದು ತನಿಖೆ ನಂತರವೇ ಹೊರ ಬೀಳಬೇಕಿದೆ.