ಬೆಂಗಳೂರು: ಮಿರಮಿರ ಅಂತ ಮಿಂಚುತ್ತಾ ಇರುವ ಮಾವಿನ ಹಣ್ಣುಗಳು. ತನ್ನ ಸುವಾಸನೆಯಿಂದಲೇ ಎಲ್ಲರ ಬಾಯಲ್ಲಿ ನೀರು ತೋರಿಸ್ತಾ ಇರೋ ತರಹೇವಾರಿ ಹಲಸಿನ ಹಣ್ಣುಗಳು. ಅದರಲ್ಲೂ ವೆರೈಟಿ ವೆರೈಟಿ ಮಾವು ಹಾಗೂ ಹಲಸಿನ ಹಣ್ಣಿಗೆ ಮನಸೋತು ಬ್ಯಾಗ್‌ಗಳಿಗೆ ತುಂಬಿಕೊಳ್ಳಲು ಇರೋ ಗ್ರಾಹಕರು. ಹೌದು, ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು ಮತ್ತು ಹಲಸಿನ ಮೇಳದಲ್ಲಿ ಕಂಡು ಬಂದ ದೃಶ್ಯಗಳಿವು.
ಇನ್ನು ಬಾದಾಮಿ, ರಸಪುರಿ, ಸೇಂದೂರಿ, ಅಮ್ರಪಾಲಿ, ಮಲ್ಲಿಕಾ ಹೀಗೆ ಹತ್ತು ಹಲವು ಹಣ್ಣುಗಳನ್ನು ಮೇಳದಲ್ಲಿ ಮಾರಾಟ ಮಾಡಲಾಯಿತು. ಅಂದ ಹಾಗೆ ಇವೆಲ್ಲವೂ ನೈಸರ್ಗಿಕವಾಗಿ ಮಾಗಿದ ಹಣ್ಣುಗಳಾಗಿದ್ದು, ಈ ಹಣ್ಣುಗಳು ಕಾಬೈಡ್ ಮುಕ್ತ ಹಣ್ಣುಗಳಾಗಿವೆ. 70 ರಿಂದ 200 ರೂ.ವರೆಗೆ ತರಹೇವಾರಿ ಮಾವುಗಳು ಲಭ್ಯವಾಗುತ್ತಿದ್ದ ವು. ಆದ್ರೆ, ಈ ಬಾರಿ ಇಳುವರಿ ಕಮ್ಮಿ ಪೂರ್ತಿ ಇಳುವರಿ ಸಿಕ್ಕಿದ್ರೆ ಮಾರಾಟ ಮಾಡಕ್ಕೆ ಕಷ್ಟ ಆಗುತ್ತಿತ್ತು.ಮಳೆಯಿಂದ ಹಣ್ಣುಗಳು ಜಾಸ್ತಿ ನಾಶ ಆಗಿವೆ ಅಂತ ರೈತರು ಹೇಳಿದರು.
ಇನ್ನು ಈ ಮೇಳದ ಅಂಗವಾಗಿ 10% ರಿಯಾಯಿತಿ ಕೂಡ ಕೊಡಲಾಗುತ್ತಿತ್ತು. ಭಾನುವಾರವಾದ ಕಾರಣ ಜನ ರಿಲ್ಯಾಕ್ಸ್ ಆಗಲು ಮಾಲ್, ಸಿನಿಮಾ ಕಡೆ ಹೋಗದೆ ಪಾರ್ಕ್‌ಗಳತ್ತ ಮುಖ ಮಾಡಿ ಮೇಳವನ್ನು ಮಸ್ತ್ ಮಜಾ ಮಾಡಿದ್ರು. ನೀವು ಕೂಡ ರುಚಿ ರುಚಿಯಾದ ಮಾವಿನ ಹಣ್ಣು ಹಾಗೂ ಹಲಸು ತಿನ್ನಬೇಕಾದ್ರೆ ಮೇಳಕ್ಕೆ ಒಮ್ಮೆ ಭೇಟಿ ಕೊಡಿ.