Wednesday, January 22, 2025

ಡಕೋಟ ಬಸ್​​ಗಳಿಗೆ ಬಿಎಂಟಿಸಿ ನೀಡ್ತಿದೆ ಹೊಸ ಸ್ವರ್ಶ…!

ಬೆಂಗಳೂರು: ಈಗಾಗಲೇ ಆರ್ಥಿಕವಾಗಿ ದಿವಾಳಿಯಾಗಿರುವ ಬಿಎಂಟಿಸಿ ಇದೀಗ ಗುಜರಿ ಬಸ್​​ಗಳಿಗೆ ಹೊಸ ಸ್ವರ್ಶ ಕೊಡಬೇಕು ಅಂತ ಮುಂದಾಗಿದೆ. ಇದಕ್ಕೆ ಸಾರಿಗೆ ಸಚಿವರೇ ಅಸ್ತು ಎಂದಿದ್ದು, ಹೊಸ ಬಸ್ ಖರೀದಿಯಿಂದ ಲಾಸ್ ಆಗಿರೋ ನಿಗಮ ಹಳೆಯ ಬಸ್​​ಗಳಿಗೆ ಹೊಸ ಟಚ್ ನೀಡೋಕೆ ಮುಂದಾಗಿದ್ದು, ಇಂತಹ ಬಸ್​​ಗಳಿಗೆ ಹೊಸ ಎಂಜಿನ್ ಅಳವಡಿಸಿ ಓಡಿಸಿದರೆ ನಷ್ಟದಿಂದ ಪಾರಾಗಬಹುದು ಅನ್ನೋ ಲೆಕ್ಕಾಚಾರಕ್ಕೆ ಬದಂತಿದೆ.

ಬಿಎಂಟಿಸಿ ಡಿಪೋಗಳಲ್ಲಿ ಹಾಳಾದ ಸ್ಥಿತಿಯಲ್ಲಿರುವ ಸಾಕಷ್ಟು ಗುಜರಿ ಬಸ್‌ಗಳಿಗೆ ಎಂಜಿನ್ ಮಾರ್ಪಡಿಸಲು ತೀರ್ಮಾನಿಸಲಾಗಿದೆ. 9 ಲಕ್ಷ ಕಿ.ಮೀ. ಮೈಲೇಜ್ ಕೊಡುತ್ತಿದ್ದರೂ ಅದೇ ಬಸ್​​ಗಳಿಗೆ ಹೊಸ ಎಂಜಿನ್ ಅಳವಡಿಸಿರೋದು ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ. ಗುಜರಿಯವರು ಹಳೆಯ ಬಸ್​​ಗಳನ್ನ ಖರೀದಿಗೆ ನಿರಾಕರಿಸಿದ ಕಾರಣ ಹೊಸ ಎಂಜಿನ್ ಆಳವಡಿಸ್ತಿದ್ದಾರಂತೆ.

ಗುಜರಿ ಬಸ್​​ಗಳನ್ನು ಓಡಿಸಬಾರದು. ಅದು ಪ್ರಯಾಣಿಕರಿಗೆ ಸುರಕ್ಷಿತ ಅಲ್ಲ ಅನ್ನೋ ಕಾರಣ RTO ನಿಯಮದಂತೆ ಸ್ಕ್ಯಾಫ್ ಮಾಡಬೇಕು. ಆದರೆ, ಇಂಥಾ ಹೊತ್ತಿನಲ್ಲಿ ಮುದುಕಿಗೆ ಶೃಂಗಾರ ಮಾಡಿದ ಹಾಗೆ, ಕೆಟ್ಟು ಮೂಲೆಯಲ್ಲಿ ನಿಂತ ಬಸ್​​ಗಳಿಗೆ ಹೊಸ ಎಂಜಿನ್ ಹಾಕಿ ಬಸ್ ಓಡಿಸೋದು ಎಷ್ಟರ ಮಟ್ಟಿಗೆ ಸರಿ. ಇದ್ರಿಂದ ನಿಗಮಕ್ಕೆ ಲಾಭ ಬರೋದಿರ್ಲಿ ಇನ್ನಷ್ಟು ನಷ್ಟ ಗ್ಯಾರೆಂಟಿ ಅನ್ನೋ ಅಪಸ್ವರವೂ ಕೇಳಿಬಂದಿದೆ.

ಒಟ್ಟಿನಲ್ಲಿ ಬಿಎಂಟಿಸಿ ಹೊಸ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೀಗಾಗಿ ಹೊಸ ಬಸ್​ಗಳೇ ಮೂಲೆ ಸೇರುತ್ತಿವೆ.ಆದ್ರೆ, ಬಿಎಂಟಿಸಿ ನಿರ್ಧಾರದಂತೆ ಗುಜರಿ ಬಸ್​​ಗಳು ರಸ್ತೆಗಿಳಿದರೆ ಅನಾಹುತ ಗ್ಯಾರೆಂಟಿ.

RELATED ARTICLES

Related Articles

TRENDING ARTICLES