ಹಾಸನ : ಕಾಡಿನಲ್ಲಿ ಬೇಟೆಯಾಡೋ ಹುಲಿಯನ್ನ ಕರೆತಂದು ಬೋನಲ್ಲಿ ಕೂಡಿ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ. ಬೋನಲ್ಲಿದ್ದರೂ ಹುಲಿ ಏನು ತಿನ್ನಬೇಕೋ ಅದೇ ತಿನ್ನೋದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ನಡೆದ ಬಸವಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ವೇದಿಕೆ ಮೇಲಿರೋ ಮುಖಂಡರಿಗೆ ಎದುರು ಇರೋರಿಗೆ ಒಂದು ಕಿವಿಮಾತು ಹೇಳ್ತೀನಿ. ಈ ಕಾರ್ಯಕ್ರಮ ಮಾಡೋಕೆ ನಮ್ಮ ಮುಖಂಡರು ಸಾಕಷ್ಟು ಯೋಚನೆ ಮಾಡಿದ್ರು. ಕಾಡಿನಲ್ಲಿ ಬೇಟೆಯಾಡೋ ಹುಲಿಯನ್ನ ಕರೆತಂದು ಬೋನಲ್ಲಿ ಕೂಡಿ ಹಾಕಿದ್ರೆ ಅದು ಹುಲ್ಲು ತಿನ್ನಲ್ಲ. ಬೋನಲ್ಲಿದ್ದರೂ ಹುಲಿ ಏನು ತಿನ್ನಬೇಕೋ ಅದೇ ತಿನ್ನೋದು. ಕಾಡಿನಿಂದ ಬೋನಿಗೆ ಬಂದರು ಹುಲಿ ತನ್ನ ಪ್ರವೃತ್ತಿ ಮರೆಯಲ್ಲ ಬೇಟೆಯಾಡೋದನ್ನ ಮರೆಯಲ್ಲ. ಸೂಚ್ಯವಾಗಿ ಯಡಿಯೂರಪ್ಪ ಶಕ್ತಿ ಇನ್ನೂ ಕುಂದಿಲ್ಲ ಎನ್ನೋ ಸಂದೇಶ ಕೊಟ್ಟರು.
ಅದಲ್ಲದೇ, ಯಾವ ರೀತಿ ಹುಲಿ ಬೇಟೆ ಯಾಡೊದನ್ನ ಮರೆಯೋದಿಲ್ಲವೋ ಅದೇ ರೀತಿ ನಮ್ಮ ಸಮಾಜ ಕೂಡ ಕರ್ನಾಟಕದಲ್ಲಿ ದೊಡ್ಡಮಟ್ಟದಲ್ಲಿ ಇದೆ. ಹಾಗಾಗಿ ನಾವು ಹುಲ್ಲು ತಿನ್ನುತ್ತಾ ಕೂರೋ ಅವಶ್ಯಕತೆ ಇಲ್ಲ ನಾನು ವೇದಿಕೆ ಮೂಲಕ ರಾಜಕೀಯ ಮಾತಾಡುತ್ತಿಲ್ಲ. ಆದರೆ ವಿಶೇಷವಾಗಿ ಯುವಕರು ಜಾಗೃತರಾಗಬೇಕು ಎಲ್ಲಾ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ ನಾಯಕ ಯಡಿಯೂರಪ್ಪ ಒಬ್ಬ ಬಡವರ ಮನೆ ಬಾಗಿಲಿಗೆ 108 ಆಂಬುಲೆನ್ಸ್ ಹೋಗಿ ನಿಲ್ಲುತ್ತೆ ಅಂದ್ರೆ ಅದಕ್ಕೆ ಯಡಿಯೂರಪ್ಪ ಕಾರಣ ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ಯಡಿಯೂರಪ್ಪನವರ ಹಾರಾಟವನ್ನು ಬಾಲ್ಯದಿಂದ ಹತ್ತಿರದಿಂದ ನೋಡಿದ್ದೇನೆ. ಯಡಿಯೂರಪ್ಪ ದೊಡ್ಡ ನಾಯಕನಾಗಿ ಬೆಳೆದು ಬಿಡ್ತಾನೆ ಎಂದು ಅವರ ಕಾರಿಗೆ ಎಲ್ಲರೂ ಕಲ್ಲು ಹೊಡೆಯೊ ಕೆಲಸ ಮಾಡಿದ್ದಾರೆ ಎಂದರು.
ಇನ್ನು, ಎಷ್ಟು ನೋವು ತಿಂದರೂ ಯಡಿಯೂರಪ್ಪ ಅದೇ ಕಲ್ಲನ್ನು ತಳಪಾಯ ಮಾಡಿ, ತಮ್ಮ ಹೋರಾಟ ಗಟ್ಟಿಮಾಡಿಕೊಂಡರು. ಯಡಿಯೂರಪ್ಪನವರು ಎಂದೂ ಸಿಎಂ ಅಥವಾ ಸಚಿವ ಆಗಬೇಕು ಎಂದು ಹೋರಾಟ ಮಾಡಿಲ್ಲ. ಯಡಿಯೂರಪ್ಪ ನವರು ತಮ್ಮ ನಾಲ್ಕು ದಶಕದ ರಾಜಕೀಯ ಹೋರಾಟದಲ್ಲಿ ಎಲ್ಲರ ಅಭಿವೃದ್ಧಿ ಮಾಡಿದ್ದಾರೆ. ಎಲ್ಲಿ ಹಿಂದುಳಿದ, ದಲಿತ ಜನರು ಕಣ್ಣೀರು ಹಾಕಿದ್ರು ಅಲ್ಲಿ ಯಡಿಯೂರಪ್ಪ ಇರುತ್ತಿದ್ದರು. ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ವಿಜಯೇಂದ್ರ ಗುಣಗಾನ ಮಾಡಿದ್ದಾರೆ.