Wednesday, January 22, 2025

ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲ ಈ ಅಂಗನವಾಡಿ

ರಾಮನಗರ : ಇದು ಪ್ಲೇ ಹೋಮ್​, ಪ್ರೀ ನರ್ಸರಿಗಳದ್ದೇ ಕಾಲ. ಸರ್ಕಾರಿ ಅಂಗನವಾಡಿ ಅಂದ್ರೆ ಮೂಗು‌ ಮುರಿಯುವವರೆ ಹೆಚ್ಚು. ಆದ್ರೆ ರಾಮನಗರ ತಾಲ್ಲೂಕಿನ ಚೌಡೇಶ್ವರಿಪುರ ಎಂಬ ಪುಟ್ಟ ಗ್ರಾಮದಲ್ಲಿ ಹೈಟೆಕ್ ಆಗಿ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಈ ಅಂಗನವಾಡಿ ಯಾವುದೇ ಖಾಸಗಿ ಪ್ಲೇ ಹೋಂಗಳಿಗೇನು ಕಮ್ಮಿ ಇಲ್ಲ.

ಈ ಅಂಗನವಾಡಿಯಲ್ಲಿ LED ಟಿವಿ ಪರದೆ ಮೇಲೆ ಸ್ಮಾರ್ಟ್ ಕ್ಲಾಸ್ ಮಾಡಲಾಗುತ್ತಿದೆ. ಸುಸಜ್ಜಿತವಾದ ಅಡುಗೆ ಮನೆ ಹಾಗು ಹಚ್ಚ ಹಸಿರಿನ ಲಾನ್ ಇದ್ದು ಆಕರ್ಷಕ ಆಟದ ಸಲಕರಣೆಗಳಿವೆ. ವಿದ್ಯುತ್ ಸಮಸ್ಯೆ ಆಗಬಾರದು ಅಂತಾ ಯುಪಿಎಸ್ ವ್ಯವಸ್ಥೆಯನ್ನ ಸಹ ಮಾಡಲಾಗಿದೆ. ಗ್ರಾ.ಪಂ.ಸದಸ್ಯರ ಇಚ್ಛಾಶಕ್ತಿಯಿಂದ ಇಂದು ಸ್ಮಾರ್ಟ್ ಅಂಗನವಾಡಿ ನಿರ್ಮಾಣವಾಗಿದೆ.

ಅಂದಹಾಗೇ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ 20 ಲಕ್ಷ ವೆಚ್ಚದಲ್ಲಿ ಈ ಸ್ಮಾರ್ಟ್ ಅಂಗನವಾಡಿ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲೆ ಹೈಟೆಕ್ ಅಂಗನವಾಡಿ ಎಂಬ ಕೀರ್ತಿಗೆ ಪಾತ್ರವಾಗಿದೆ. ಜಿ.ಪಂ ಸಿಇಒ ಇಕ್ರಂ ಅವರ ಇಚ್ಛಾಶಕ್ತಿಯಿಂದ ಇದು ಕಾರ್ಯಗತವಾಗಿದೆ. ರಾಜ್ಯದ ಅಂಗನವಾಡಿಗಳ ಬಗ್ಗೆ ರಿಸರ್ಚ್ ಮಾಡುತ್ತಿರುವ ತಂಡ ಕೂಡ ಈ ಅಂಗನವಾಡಿಗೆ ಭೇಟಿ ಕೊಟ್ಟು ಸಂತಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರ ಅಂದ್ರೆ ತಿರುಗಿಯೂ ನೋಡದ ಜನ್ರೆ ಹೆಚ್ಚು. ಹೀಗಿರೋ ಕಾಲಘಟ್ಟದಲ್ಲಿ ಸರಕಾರಿ ಅಂಗನವಾಡಿಯನ್ನ ಸ್ಮಾರ್ಟ್ ಆಗಿ ನಿರ್ಮಾಣ ಮಾಡಿ ನಾವು ಖಾಸಗಿಯವರಿಗಿಂತ ಕಡಿಮೆ ಇಲ್ಲಾ ಎಂಬುದನ್ನ ಪ್ರೂವ್​ ಮಾಡಿದ್ದಾರೆ.

RELATED ARTICLES

Related Articles

TRENDING ARTICLES