Friday, November 22, 2024

ಪಠ್ಯ ಪುಸ್ತಕದಲ್ಲಿ ಭಾರತದ ಸೋಲಿನ ಇತಿಹಾಸ ಇದೆ : ಬಿ.ಸಿ.ನಾಗೇಶ್​

ಕೊಪ್ಪಳ : ಬ್ರಿಟಿಷರು ಗುರುಕುಲ ಶಿಕ್ಷಣ ಹಾಳು ಮಾಡಿ, ಮೆಕಾಲೆ ಶಿಕ್ಷಣ ಜಾರಿಗೆ ತಂದರು ಇಂಥ ಶಿಕ್ಷಣ ವ್ಯವಸ್ಥೆ ತೆಗೆದು, ಮಗುವಿನ ಅಗತ್ಯಕ್ಕೆ ತಕ್ಕ ಶಿಕ್ಷಣ ನೀಡಬೇಕಿದೆ ಎಂದು ಕೊಪ್ಪಳದಲ್ಲಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದ್ದಾರೆ.

ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಕಾರ್ಯಕ್ರಮದಲ್ಲಿ‌ ಮಾತನಾಡಿದ ಅವರು, ಪಠ್ಯಪುಸ್ತಕ ಪರಿಷ್ಕರಣಾ‌ ಸಮಿತಿ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಅವರು,ಈ ಹಿಂದಿನ ಎಲ್ಲ ಪಠ್ಯ ಪುಸ್ತಕದಲ್ಲಿ ಭಾರತರ ಸೋಲಿನ ಇತಿಹಾಸ ಇದೆ. ಭಾರತದ ಗೆಲುವಿನ ಇತಿಹಾಸವನ್ನೇ ಪಠ್ಯ ಪುಸ್ತಕದಲ್ಲಿ ಬರೆಯಲಿಲ್ಲ. ಮೊಗಲರು ಈ ದೇಶದ ದೇವಸ್ಥಾನದ ಮೇಲೆ ಆಕ್ರಮಣ ಮಾಡಿದಾಗ ಮಾತ್ರ ವಿರೋಧ ಮಾಡಿದ್ದಾರೆ ಎಂದರು.

ಅದಲ್ಲದೇ, ಭಾರತದ ಪ್ರಧಾನಿಗೆ ಅಮೇರಿಕ ಅಧ್ಯಕ್ಷರು ಭೇಟಿಗೂ ಅವಕಾಶ ನೀಡಿರಲಿಲ್ಲ. ಈಗ ಅಧ್ಯಕ್ಷರ ಕುಟುಂಬವೇ ಬಂದು ಭಾರತದ ಪ್ರಧಾನಿಗೆ ಸ್ವಾಗತ ಮಾಡುತ್ತೆ. ಈ ಹಿಂದೆ ಯಾವುದೇ ಕಾಯಿಲೆಗೆ ಪರಕೀಯರ ಬಳಿ ಭಿಕ್ಷಾ ಪಾತ್ರೆ ಹಿಡಿದು ವ್ಯಾಕ್ಸಿನ್ ಕೇಳಬೇಕಿತ್ತು. ಈಗ ನಾವೇ ಬೇರೆ ದೇಶಗಳಿಗೆ ವ್ಯಾಕ್ಸೀನ್ ನೀಡುತ್ತಿದ್ದೇವೆ. ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಕಾರ್ಯಕ್ರಮದಲ್ಲಿ‌ ಸಚಿವ ಬಿ.ಸಿ.ನಾಗೇಶ ಭಾಷಣ

RELATED ARTICLES

Related Articles

TRENDING ARTICLES