Wednesday, January 22, 2025

ರೀಲ್ಸ್​ನಲ್ಲಿ ರೋಣನ ಆಟ.. ಜಾಕ್ವೆಲಿನ್​ಗೆ ಕನ್ನಡ ಪಾಠ

ವಿಕ್ರಾಂತ್ ರೋಣ ಸಿಗ್ನೇಚರ್ ಸ್ಟೆಪ್ಸ್​​ಗೆ ಭಾರತೀಯ ಚಿತ್ರರಂಗ ಸ್ಟನ್ ಆಗಿದೆ. ಸಿನಿರಸಿಕರಿಗೆ ಮತ್ತು ನೀಡಿದೆ ಲಂಕನ್ ಬ್ಯೂಟಿಯ ಗ್ಲಾಮರ್ & ಕಿಚ್ಚನ ಕರಾಮತ್ತು. ಸದ್ಯ ಮಿಲಿಯನ್ ಗಟ್ಟಲೆ ವೀವ್ಸ್​ನಿಂದ ಯೂಟ್ಯೂಬ್ ಧೂಳೆಬ್ಬಿಸ್ತಿರೋ ಪ್ಯಾನ್ ವರ್ಲ್ಡ್​ ರೋಣ ರೀಲ್ಸ್​ಗೆ ಲಗ್ಗೆ ಇಟ್ಟಿದ್ದಾರೆ. ಅವ್ರ ರೀಲ್ಸ್ ಆಟದ ಜೊತೆ ಜಾಕ್ವೆಲಿನ ಕನ್ನಡದ ಪಾಠ ಕೂಡ ತೋರಿಸ್ತೀವಿ.

  • ಎಲ್ಲೆಲ್ಲೂ ಗಡಾಂಗ್​ ರಕ್ಕಮ್ಮ ಸೌಂಡ್.. ಕಿಚ್ಚ ಬ್ರ್ಯಾಂಡ್
  • ವಿಕ್ರಾಂತ್ ರೋಣ ಸಿಗ್ನೇಚರ್ ಸ್ಟೆಪ್ಸ್​ಗೆ ಫ್ಯಾನ್ಸ್ ಫಿದಾ..!
  • ಪಂಚಭಾಷೆಯಲ್ಲಿ ಅಜನೀಶ್ ಟ್ಯೂನ್​ಗಳು ಹಂಗಾಮ

ಬರೀ ಟೀಸರ್​​ಗಳಿಂದ ಸದ್ದು ಮಾಡ್ತಿದ್ದ ವಿಕ್ರಾಂತ್ ರೋಣ ಚಿತ್ರ ಇದೀಗ ಗಡಾಂಗ್ ರಕ್ಕಮ್ಮನ ಗಾನಬಜಾನದಿಂದ ಸೌಂಡ್ ಮಾಡ್ತಿದೆ. ಯೆಸ್.. ರೀಸೆಂಟ್ ಆಗಿ ರಿವೀಲ್ ಆದ ರೋಣ ಆಲ್ಬಮ್​ನ ಫಸ್ಟ್ ಸಾಂಗ್​​ಗೆ ಎಲ್ಲೆಡೆಯಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ. ಹೆಂಗೆಳೆಯರು ರಕ್ಕಮ್ಮ ಹಾಡಿಗೆ ಹುಚ್ಚೆದ್ದು ಕುಣೀತಾ ಇದ್ದಾರೆ. ಅಷ್ಟರ ಮಟ್ಟಿಗೆ ಗುಂಗಿಡಿಸಿದೆ ಆ ರಂಗೀನ್ ಸಾಂಗ್.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಪೋರಿ, ಪಡ್ಡೆ ಹುಡ್ಗರ ಪ್ಯಾರಿ ಜಾಕ್ವೆಲಿನ್ ಫರ್ನಾಂಡಿಸ್ ಮಾಡ್ತಿರೋ ಮೋಡಿಗೆ ಎಲ್ರೂ ಸುಸ್ತಾಗಿದ್ದಾರೆ. ಹೌದು. ಪಕ್ಕಾ ಡ್ಯಾನ್ಸಿಂಗ್ ನಂಬರ್ ಆಗಿರೋ ರಾರಾ ರಕ್ಕಮ್ಮ ಹಾಡು ಎಲ್ಲೆಲ್ಲೂ ಗುನುಗುವಂತಾಗಿದೆ. ಸೋಶಿಯಲ್ ಮೀಡಿಯಾದ ಮೂಲೆ ಮೂಲೆಯಲ್ಲೂ ಹಲ್​ಚಲ್ ಎಬ್ಬಿಸ್ತಿದೆ.

ಅಜನೀಶ್ ಲೋಕನಾಥ್ ಟ್ಯೂನು, ನಿರ್ದೇಶಕ ಅನೂಪ್ ಭಂಡಾರಿ ಅವ್ರದ್ದೇ ಲೈನು ಹಾಡಿನ ಗಮ್ಮತ್ತು ಹೆಚ್ಚಿಸಿದೆ. ಹಾಡು ಎಲ್ಲಾ ಭಾಷೆಗಳಲ್ಲಿ ಧೂಳೆಬ್ಬಿಸ್ತಿರೋ ಹಿನ್ನೆಲೆಯಲ್ಲಿ ಕಿಚ್ಚ ಬಿಡುವು ಮಾಡಿಕೊಂಡು, ಆ ಸಂತೋಷವನ್ನು ಹಂಚಿಕೊಳ್ಳೋಕೆ ಜಾಕ್ವೆಲಿನ್​ಗೆ ವಿಡಿಯೋ ಕಾಲ್ ಮಾಡಿದ್ರು. ಆಗ ರಕ್ಕಮ್ಮ ಹಾಡು ರೀಲ್ಸ್ ಆಗ್ತಿರೋ ಹಿನ್ನೆಲೆ, ಕಿಚ್ಚನನ್ನ ರೀಲ್ಸ್ ಮಾಡಲು ಪುಸಲಾಯಿಸಿದ್ರು ಬಿಟೌನ್ ಬ್ಯೂಟಿ.

ಆದ್ರೆ ಅದಕ್ಕೆ ಓಕೆ ಅಂದ ಕಿಚ್ಚ, ಅದಕ್ಕೂ ಮುನ್ನ ತಾವು ಹೇಳಿಕೊಡೋ ಕನ್ನಡವನ್ನ ತಾವೊಮ್ಮೆ ಪುನರುಚ್ಚರಿಸಬೇಕು ಅಂತ ಕನ್ನಡ ಪಾಠ ಮಾಡಿದ್ರು. ಅಭಿನಯ ಚಕ್ರವರ್ತಿ ನುಡಿದಂತೆ ಯಥಾವತ್ ಉಚ್ಚರಣೆ ಮಾಡೋ ಮೂಲಕ ಜಾಕ್ವೆಲಿನ್ ಕನ್ನಡ ಪ್ರೇಮ ಮೆರೆದರು. ಆಕೆಯ ಆ್ಯಕ್ಸೆಂಟ್​ನಲ್ಲಿ ಕನ್ನಡ ಕೇಳೋದೇ ಮಜಾ ಅನಿಸುತ್ತೆ. ಅದೇನೇ ಇರಲಿ, ಇಲ್ಲಿನ ಕನ್ನಡ ನಟೀಮಣಿಯರೇ ಠಸ್ಸು ಪುಸ್ಸು ಅಂತ ಇಂಗಲೀಸು ಪುಂಗೋವಾಗ, ಆ ಪರಭಾಷಾ ಚೆಲುವೆ ಕನ್ನಡವನ್ನು ಹೇಳೋದು ಕೇಳೋಕೆ ಪರಮಾನಂದ ಅನಿಸಿದೆ.

ಜಾಕ್ವೆಲಿನ್ ಕನ್ನಡ ಮಾತನಾಡಿದ ಬಳಿಕ ಆಕೆಯ ಚಾಲೆಂಜ್ ಸ್ವೀಕರಿಸಿರೋ ನಮ್ಮ ಮಾಣಿಕ್ಯ, ಸಿಗ್ನೆಚರ್ ಸ್ಟೆಪ್​ನ ರೀಲ್ಸ್ ಮಾಡೋ ಮೂಲಕ, ಇದು ನನ್ನ ಮೊದಲ ರೀಲ್ಸ್ ಅಂತ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. ಒಟ್ಟಾರೆ ಶಾಲಾ- ಕಾಲೇಜು ಮಕ್ಕಳನ್ನ ಮಂತ್ರಮುಗ್ಧಗೊಳಿಸಿರೋ ರೀಲ್ಸ್, ಇದೀಗ ಕಿಚ್ಚನನ್ನೂ ಆವರಿಸಿರೋದ ಖುಷಿಯ ವಿಚಾರ. ಕಿಚ್ಚನ ಆಫ್​ ಸ್ಕ್ರೀನ್ ಸ್ಟೆಪ್ಸ್ ನೋಡಿ ಫ್ಯಾನ್ಸ್ ದಿಲ್​ಖುಷ್ ಆಗಿದ್ದಾರೆ. ಸಿನಿಮಾ ಹಾಡಿಗಿಂತ ಜೋರಾಗಿ ರೀಲ್ಸ್ ಸ್ಟೆಪ್ಸ್ ವೈರಲ್ ಆಗ್ತಿದೆ.

ಜಾಕ್ ಮಂಜು ನಿರ್ಮಾಣದ ಈ ಸಿನಿಮಾ ಪ್ಯಾನ್ ಇಂಡಿಯಾದಾದ್ಯಂತ ಜುಲೈ ತಿಂಗಳಾಂತ್ಯಕ್ಕೆ ತೆರೆಗಪ್ಪಳಿಸಲಿದೆ. ಭಾರತದ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಅವತರಣಿಕೆಗಳ ಜೊತೆಗೆ ಇಂಗ್ಲಿಷ್​ಗೂ ಡಬ್ ಆಗಿ ವಿದೇಶಿಗರನ್ನ ಎಂಟರ್​ಟೈನ್ ಮಾಡಲಿದೆ. ಸದ್ಯ ಪೋಸ್ಟ್​ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗ್ತಿದ್ದು, ಕಿಚ್ಚನ ನಟನಾ ಸಾಮರ್ಥ್ಯ ಇದೇ ಮೊದಲ ಬಾರಿ ವಿಶ್ವಕ್ಕೆ ಗೊತ್ತಾಗಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES