Wednesday, January 22, 2025

PSI ಮರುಪರೀಕ್ಷೆ ನಿರ್ಧಾರ ವಿರೋಧಿಸಿ ಪ್ರತಿಭಟನೆ

ಬೆಂಗಳೂರು: 30 ರಿಂದ 35 ಅಭ್ಯರ್ಥಿಗಳು ಮಾಡಿದ ತಪ್ಪಿಗೆ ಪ್ರಮಾಣಿಕ ಅಭ್ಯರ್ಥಿಗಳು ಬದುಕು ಬೀದಿಗೆ ಬಂದಿದೆ. ಕಳೆದ ತಿಂಗಳು ಉಪವಾಸ ಸತ್ಯಗ್ರಹ ಮಾಡಿ PSI ಅಭ್ಯರ್ಥಿಗಳು ಪ್ರೊಟೆಸ್ಟ್ ನಡೆಸಿದ್ದರು. ಆದ್ರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಇವತ್ತು ಮತ್ತೆ ಸಮತಾ ಸೈನಿಕ ದಳ ನೇತೃತ್ವದಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸಿದ್ದಾರೆ. ಸುಮಾರು 300 ಕ್ಕೂ ಹೆಚ್ಚು ಪ್ರಾಮಾಣಿಕ ಅಭ್ಯರ್ಥಿಗಳು ನಗರದ ಫ್ರಿಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ರು .

ಪ್ರಾಮಾಣಿಕವಾಗಿ ಹಗಲು ಇರುಳು , ಕಷ್ಟ ಪಟ್ಟು ಓದಿದ PSI ಅಭ್ಯರ್ಥಿಗಳಿಗೆ ಶಿಕ್ಷೆ ಆಗ್ತಿದೆ.ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳ್ದಂಗೆ. ಮೋಸ ಮಾಡಿದವರ ಜೊತೆ ಪ್ರಾಮಾಣಿಕರಿಗೂ ಶಿಕ್ಷೆ ಆಗ್ತಿದೆ. ನಾವು ನಿಯತ್ತಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದೇವೆ. ಸರ್ಕಾರ ಮರು ಪರೀಕ್ಷೆಯ ಆದೇಶವನ್ನ ರದ್ದು ಮಾಡಬೇಕು ಅಂತ ಆಗ್ರಹಿಸಿದರು. ಪಿಎಸ್ಐ ಅಭ್ಯರ್ಥಿಗಳ ಪ್ರತಿಭಟನೆಗೆ ಡಾಕ್ಟರ್ ವೆಂಕಟಸ್ವಾಮಿ ಸಮತಾ ಸೈನಿಕ ದಳ , ಹಾಗೂ ಬಿ. ಟಿ ಲಲಿತಾ ನಾಯಕ್ ಅವರು ಕೂಡ ಪ್ರತಿಭಟನೆಗೆ ಸಾಥ್ ನೀಡಿದರು.

ಇನ್ನು ಇವತ್ತು ಫ್ರೀಡಂ ಪಾರ್ಕ್ ನಲ್ಲಿ ಮೂರು ಪ್ರೊಟೆಸ್ಟ್ ಗಳು ಇದ್ದ ಕಾರಣ ಸಿಎಂ ಫ್ರೀಡಂ ಪಾರ್ಕಿಗೆ ಆಗಮಿಸಿದ್ದರು. ಇದೇ ವೇಳೆ ಪಿಎಸ್ಐ ಅಭ್ಯರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕೂಡ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು. ಬಳಿಕ ಮಾತನಾಡಿ ಮನವಿಯನ್ನ ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತೇನೆ. ತನಿಖೆ ಮುಗಿಯುವವರೆಗೂ ಏನು ಹೇಳುವುದಕ್ಕೆ ಸಾಧ್ಯ ಇಲ್ಲ. ಈಗ ಯಾವುದೇ ಭರವಸೆ ಕೊಡಲು ಸಾಧ್ಯ ಇಲ್ಲ ಅಂತ ತಿಳಿಸಿದ್ರು.

ಅದಲ್ಲದೇ , ಪ್ರತಿಭಟನೆಯಲ್ಲಿ ಭಾಗಿಯಾದ ಅಭ್ಯರ್ಥಿಗಳು ನಾವು ನ್ಯಾಯಯುತವಾಗಿ ಇದ್ದೇವೆ. ಯಾರು ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರನ್ನು ಬಂಧಿಸಲಿ. ಮರುಪರೀಕ್ಷೆ ರದ್ದು ಮಾಡುವವರೆಗೂ ಕೂಡ ಪ್ರತಿಭಟನೆ ನಿಲ್ಲಿಸಲು ಅಂತ ಸರ್ಕಅರಕ್ಕೆ ಎಚ್ಚರಿಕೆ ನೀಡಿದ್ರು.

ಒಟ್ಟಿನಲ್ಲಿ ಎಲ್ಲಾ ಅಂದುಕೊಂಡತ್ತೆ ಆಗಿದ್ರೆ ಕೆಲವೇ ದಿನಗಳಲ್ಲಿ ಇವರೆಲ್ಲ ಖಾಕಿ ಧರಿಸಿ ಖಡಕ್ ಆಫೀಸರ್ ಆಗಿತ್ತಿದ್ರು . ಆದ್ರೆ ಈಗ ಇವರಿಗೆಲ್ಲಾ ದಿಕ್ಕು ತೋಚದಂತಗಿದೆ . ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಿದ್ದಾರೆ. ಸತ್ಯಾಸತ್ಯತೆ ಹೊರ ಬಂದ ಮೇಲೆ ಸರ್ಕಾರ ಯಾವ ನಿರ್ಧಾರವನ್ನ ತೆಗೆದುಕೊಳ್ಳುತ್ತೆ ಅಂತ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES