ಬೆಂಗಳೂರು: ಕಳೆದ ಮೂರು ದಿನಗಳಿಂದ ಕಳ್ಳ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮುಖವಾಡವನ್ನ ಪವರ್ ಟಿವಿ ಎಳೆಎಳೆಯಾಗಿ ಕಳಚಿಟ್ಟಿದೆ. ತಮ್ಮ ವಿರುದ್ಧ ಕೇಳಿಬಂದ ಆರೋಪಗಳಿಗೆ ಉತ್ತರ ಕೊಡಲು ನಿನ್ನೆಯೇ ಪ್ರೆಸ್ ಮೀಟ್ ಕರೆದಿದ್ರು. ಆದ್ರೆ ನಿನ್ನೆ ಪಲಾಯನ ಮಾಡಿ ಇಂದು ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ರು. ಸುದ್ದಿಗೋಷ್ಠಿಯಲ್ಲಿ ಪವರ್ ಟಿವಿ ಪ್ರತಿನಿಧಿಗಳು ಹಾಕಿದ ಪ್ರಶ್ನೆಗೆ ಉತ್ತರವೇ ಕೊಡ್ಲಿಲ್ಲ. ನಾನು ಮುಖ್ಯಮಂತ್ರಿಗಳನ್ನ ಭೇಟಿ ಮಾಡಿ ತನಿಖೆಗೆ ಒತ್ತಾಯಿಸ್ತೀನಿ ಅಂತಾ ಸುದ್ದಿಗೋಷ್ಟಿಯುದ್ದಕ್ಕೂ ಅದನ್ನೇ ಹೇಳಿಕೊಂಡು ಬಂದ್ರು. ಸ್ಟಿಂಗ್‌ನಲ್ಲಿ ಇರೋದು ನಾನೇ. ಯಾರೋ ಬಂದು ಎಷ್ಟು ದುಡ್ಡು ಕೊಡಬೇಕು ಅಂತಾ ಕೇಳಿದ್ರು. ನಾನು ಹಣ ತೆಗೆದುಕೊಂಡಿದ್ರೆ, ನನಗೆ ಶಿಕ್ಷೆ ಕೊಡಲಿ ಅಂತಾ ಬಹಳಷ್ಟು ನಾಟಕ ಮಾಡಲು ಯತ್ನಿಸಿದ್ರು. ಈ ವಿಚಾರದ ಬಗ್ಗೆ ನೀವು ಆಗ್ಲೇ ಯಾಕೆ ತನಿಖೆಗೆ ಒತ್ತಾಯಿಸಿಲ್ಲಾ ಅಂತಾ ಪ್ರಶ್ನೆ ಮಾಡಿದ್ರೆ, ನಾನು ಪವರ್ ಟಿವಿಯವರಿಗೆ ಮಾತಾಡಲ್ಲ ಅಂತಾ ಹಿಟ್ ಅಂಡ್ ರನ್ ಮಾಡಿದರು.
ಇನ್ನು ಒಂದು ವರ್ಷ ಮೂರು ತಿಂಗಳ ಹಿಂದೆ ಈ ಮಾತುಕತೆ ನಡೆದಿರೋದು ಅಂತಾ ಕೋಡಿಹಳ್ಳಿ ಚಂದ್ರಶೇಖರ್ ಅವ್ರೇ ಒಪ್ಪಿಕೊಂಡಿದ್ದಾರೆ. ಆಗ ಅವ್ರಿಗೆ ಈ ವಿಚಾರದ ಅರಿವೇ ಇರಲಿಲ್ಲವಂತೆ. ಕಳೆದ ವರ್ಷ ಕ್ರೈಂ ಬ್ಯೂರೋ ಪೊಲೀಸರು ಈ ಸ್ಟಿಂಗ್ ವೀಡಿಯೋಗಳನ್ನ ತೋರಿಸಿದ್ರು ಅಂತಾ ಸುದ್ದಿಗೋಷ್ಠಿಯಲ್ಲಿ ಹೇಳಿದ್ರು.. ಆಗಲೇ ಈ ವ್ಯವಹಾರದ ಬಗ್ಗೆ ತನಿಖೆಗೆ ಯಾಕೆ ಒತ್ತಾಯ ಮಾಡ್ಲಿಲ್ಲ ಅಂತಾ ಪ್ರಶ್ನೆ ಕೇಳಿದ್ರೆ, ಉತ್ತರಿಸಲಾಗದೇ ತಬ್ಬಿಬ್ಬಾದ್ರು.
ಇನ್ನು ಹಣಕಾಸು ವರ್ಗಾವಣೆಯೇ ಆಗಿಲ್ಲ ಅಂದ್ಮೇಲೆ ನಾನು ಭ್ರಷ್ಟಾಚಾರ ಮಾಡೋಕೆ ಹೇಗೆ ಸಾಧ್ಯ ಅಂತಾ ಸಮರ್ಥಿಸಿಕೊಳ್ಳಲು ಮುಂದಾದ್ರು. ಸಾರಿಗೆ ನೌಕರರ ಪ್ರತಿಭಟನೆ ನಿಲ್ಲಿಸಲು 35 ಕೋಟಿ ಕೊಡಿ ಅಂತಾ ನಾನು ಕೇಳೇ ಇಲ್ಲ ಎಂದ್ರು. ಹಾಗಾದ್ರೆ ಸಿಎಂಎನ್ ಸಂಸ್ಥೆ ಮೂಲಕ ಮನಿ ಟ್ರಾನ್ಸಾಕ್ಷನ್ ಬಗ್ಗೆ ಯಾಕೆ ಮಾತಾಡಿದ್ರಿ ಎಂದ್ರೆ ಅದಕ್ಕೆ ಉತ್ತರವೇ ಇಲ್ಲ.
ಇನ್ನು ಕೇಂದ್ರ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ನಿಲ್ಲಿಸಲು 3000 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಸುದ್ದಿಗೋಷ್ಠಿಯಲ್ಲೇ ಕೋಚಂ ಎಗರಾಡಿದ್ರು. ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರವೇ ಕೊಡಲ್ಲ ಅಂತ ನುಣುಚಿಕೊಳ್ಳಲು ಯತ್ನಿಸಿದ್ರು. ಇದಕ್ಕೂ ಮುನ್ನ ಪವರ್ ಟಿವಿ ಪ್ರತಿನಿಧಿ, ಲೋಗೋ ಇಟ್ಟು ಪ್ರಶ್ನೆ ಮಾಡಿದಾಗ, ಅವ್ರ ಬೆಂಬಲಿಗರೂ ಕೂಡ ಆವಾಜ್ ಹಾಕಲು ಮುಂದಾದ್ರು. ಕೊನೆಗೆ ಯಾವ ಪ್ರಶ್ನೆಗೂ ಸಮರ್ಕವಾಗಿ ಸ್ಪಷ್ಟನೆ ಕೊಡದೇ ಬೆಂಬಲಿಗರ ದಂಡಿನೊಂದಿಗೆ ಕಾಲ್ಕಿತ್ತು ಹೊರಟರು.
ಅದಲ್ಲದೇ ಇಷ್ಟೆಲ್ಲಾ ಸಾಕ್ಷ್ಯಾಧಾರಗಳು ಇದ್ರೂ ಕೋಡಿಹಳ್ಳಿ ಚಂದ್ರಶೇಖರ್ ಹಸಿರು ಟವೆಲ್ ಕಳಚಲೇ ಇಲ್ಲ. ರೈತ ಮುಖಂಡರೆಲ್ಲಾ ಚೀ.. ಥೂ ಅಂದ್ರೂ ಸುಮ್ಮನೇ ಇದ್ರು. ನನ್ನ ಕರೆಸಿ, ಮಾತಾಡಿಸಿ, ರೆಕಾರ್ಡ್ ಮಾಡಿ ಬೇಕಾದಂತೆ ಬಳಸಿಕೊಂಡಿದ್ದಾರೆ ಅಂತ ನಮ್ಮ ಮೇಲೆಯೇ ದೂಷಣೆ ಮಾಡಲು ಯತ್ನಿಸಿದ್ರು. ಕೊನೆಗೆ ಯಾವುದೂ ವರ್ಕೌಟ್ ಆಗದೇ ಇದ್ದಾಗ, ಪವರ್ ಟಿವಿಗೆ ದೊಡ್ಡ ನಮಸ್ಕಾರ ಅಂತಾ ಕೈಮುಗಿದು, ಪ್ರೆಸ್ ಮೀಟ್ ಮೊಟಕುಗೊಳಿಸಿದರು.