ಚಿಕ್ಕಬಳ್ಳಾಪುರ: ಕೋಡಿಹಳ್ಳಿ ಚಂದ್ರಶೇಖರ್ ಯಾವುದೇ ಪ್ರತಿಭಟನೆ, ಹೋರಾಟಕ್ಕೆ ಎಂಟ್ರಿಯಾದರೆ ಡೀಲ್ ಪಕ್ಕಾ ಆಗಿದೆ ಅಂತ ‘ಕೋಟಿ’ ಹಳ್ಳಿ ವಿರುದ್ಧ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೈತ ಮುಖಂಡ ಕಿಡಿಕಾಡಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಹಾಲು ಒಕ್ಕೂಟದ ಹೋರಾಟದಲ್ಲಿ ಡೀಲ್, ಶಾಶ್ವತ ನೀರಾವರಿಯಲ್ಲೂ ಡೀಲ್ ಆಗಿದೆ. ಜೈಲಿಗೆ ಹೋದ ಬಳ್ಳಾರಿಯ ಜನಾರ್ಧನ ರೆಡ್ಡಿಯನ್ನ ಜೈಲಿಗೆ ಹೋಗಿ ಭೇಟಿಯಾಗ್ತಾರಂದ್ರೆ ಇವರಿಗೇನೂ ಕೆಲಸ.? ಅಲ್ಲೂ ಡೀಲ್ ಮಾಡಿದ್ರಾ ಅಂತ ರೈತ ಮುಖಂಡರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅದಲ್ಲದೇ, ರೈತ ಬೆಂಗಳೂರಿನಲ್ಲಿ ಬಂಗಲೆ ಕಟ್ಟೋಕೆ ಸಾಧ್ಯವಾ? ಅವರ ವೇಷಭೂಷಣ, ಓಡಾಡೋ ಐಷಾರಾಮಿ ಕಾರುಗಳು, ವ್ಯವಹಾರಗಳು ನೋಡಿದರೆ ರೈತ ಸಮೂಹಕ್ಕೆ ಮಾಡಿದ ಅಪಮಾನವಾಗಿದೆ. ರೈತರ ಹೆಸರೇಳಿಕೊಂಡು ವಸೂಲಿಗೆ ಇಳಿದಿರುವ ಕೋಡಿಹಳ್ಳಿ ಚಂದ್ರಶೇಖರ್ ಕೂಡಲೇ ಹಸಿರು ಟವೆಲ್ ಹಾಕೋದು ಬಿಡಬೇಕು.ರೈತರ ಹೆಸರಿನಲ್ಲಿ ದಂಧೆ ಮಾಡೋ ಖಯಾಲಿ ಹಚ್ಚಿಕೊಂಡಿರುವ, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸಬೇಕು ಎಂದರು.
ಇನ್ನು, ಕೋಡಿಹಳ್ಳಿ ಚಂದ್ರಶೇಖರ್ ಬಣ್ಷ ಬಯಲು ಮಾಡಿದ ಪವರ್ ಟಿವಿ ವಾಹಿನಿಗೆ ಧನ್ಯವಾದ ಅರ್ಪಿಸಿದ ರೈತ ಮುಖಂಡರು. ರಾಷ್ಟ್ರೀಯ ನಾಯಕರುಗಳ ಬಗ್ಗೆಯೂ ಕೋಟಿ ಕೋಟಿ ಡೀಲ್ ನಲ್ಲಿ ಪ್ರಸ್ತಾಪಕ್ಕೆ ರೈತ ನಾಯಕರು ಕಿಡಿಕಾಡಿದ್ದಾರೆ. ಹಾಗೆನೇ ಕೋಡಿಹಳ್ಳಿ ಡೀಲ್ ಬಗ್ಗೆ ಸೋಮವಾರ ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಯಕರು ಸ್ಪಷ್ಟನೆ ನೀಡಲಿದ್ದಾರೆ.