Monday, December 23, 2024

‘ರಕ್ಕಮ್ಮ’ನಿಗೆ ಕನ್ನಡ ಕಲಿಸಿದ ಕಿಚ್ಚ!

ಬೆಂಗಳೂರು: ವಿಕ್ರಾಂತ್‌ ರೋಣ’.. ಸದ್ಯ ಕಿಚ್ಚ ಸುದೀಪ್ ಅಭಿನಯದ ಈ ಸಿನಿಮಾದ್ದೇ ಸದ್ದು… ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ತೆರೆಗೆ ಬರಲು ಸಜ್ಜಾಗಿದೆ.

ಅದಲ್ಲದೇ ಪ್ರಾರಂಭದಿಂದಲೂ ಭಾರೀ ಸೌಂಡ್ ಮಾಡುತ್ತಿದ್ದ ವಿಕ್ರಾಂತ್ ರೋಣನ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಜೋರಾಗ್ತಿದೆ. ಅದರಲ್ಲೂ ‘ರಾ ರಾ ರಕ್ಕಮ್ಮ’ ಹಾಡಂತೂ ಪಡ್ಡೆ ಹುಡುಗರ ನಿತ್ಯದ ಬಾಯಿಪಾಠದಂತೆ ಆಗಿದೆ! ‘ರಕ್ಕಮ್ಮನಾಗಿ’ ಸೊಂಟ ಬಳುಸಿಕಿ, ಕನ್ನಡಿಗರ ಎದೆಗೆ ಲಗ್ಗೆ ಇಟ್ಟಿರುವ ಶ್ರೀಲಂಕಾ ಸುಂದರಿ, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್‌ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳೂ ಸಹ ಕಾತರರಾಗಿದ್ದಾರೆ.

ಇನ್ನು, ಇಂತ ಹೊತ್ತಲ್ಲೇ ಜಾಕ್ವೆಲಿನ್ ಮುದ್ದು ಮುದ್ದಾಗಿ ಕನ್ನಡ ಮಾತನಾಡಿದ್ದಾರೆ. ಅಂದಹಾಗೆ ಈ ಸುಂದರಿಗೆ ಕನ್ನಡ ಕಲಿಸಿದ್ದು ನಮ್ಮ ಕಿಚ್ಚ ಸುದೀಪ್. ಇದೀಗ ಈ ವಿಡಿಯೋ ಇನ್ಸ್‌ಸ್ಟ್ರಾಗಾಮ್‌ನಲ್ಲಿ ಅಪ್ಲೋಡ್‌ ಆಗಿದ್ದು, ಸೋಶಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

RELATED ARTICLES

Related Articles

TRENDING ARTICLES