Monday, December 23, 2024

ಇವರ ತೀಟೆ ತೀರಿಸಿಕೊಳ್ಳೋದಕ್ಕೆ ರೈತರನ್ನ ಬಲಿಕೊಡ್ತಾರೆ : ಕೆ.ಟಿ.ಶಾಂತಕುಮಾರ್

ತುಮಕೂರು: ಇವರು ಈ ರೀತಿ ಡೀಲ್ ಆಗದೇ ಇದ್ರೆ ನೌಕರರಿಗೆ ನ್ಯಾಯ ಸಿಗ್ತಾ‌ ಇತ್ತು ಎಂದು ತುಮಕೂರಿನಲ್ಲಿ ಕಾಂಗ್ರೆಸ್ ಮುಖಂಡ ಕೆ.ಟಿ.ಶಾಂತಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಮಾತನಾಡಿದ ಅವರು, ಪವರ್ ಟಿವಿ ಇಂತಹ ಪ್ರಕರಣಗಳನ್ನ ಬಯಲಿಗೆಳೆಯೋದರಲ್ಲಿ ಮುನ್ನಡೆಯಲಿದೆ. ಪವರ್ ಟಿವಿ ಅನ್ಯಾಯದ ವಿರುದ್ಧ ಹೋರಾಟ ಮಾಡ್ತಾ ಇರೋದು ಶ್ಲಾಘನೀಯ ನಾವು ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಅದಲ್ಲದೇ, ಬಸ್ ಕಂಡಾಕ್ಟರ್ ಡ್ರೈವರ್ ಗಳಿಗೆ ಅನ್ಯಾಯ ಮಾಡಿದ್ದಾರೆ. ಇದರಿಂದ ನೂರಾರು ಜನ ಬೀದಿ ಬಂದಿದ್ದಾರೆ. ಕೆಲಸ ಕಳೆದುಕೊಂಡು ನೇಣು ಹಾಕಿಕೊಂಡ್ರು. ಇದಕ್ಕೆ ಕಾರಣ ಕೋಡಿಹಳ್ಳಿ ಚಂದ್ರಶೇಖರ್. ಇವರು ಈ ರೀತಿ ಡೀಲ್ ಆಗದೇ ಇದ್ರೆ ನೌಕರರಿಗೆ ನ್ಯಾಯ ಸಿಗ್ತಾ‌ ಇತ್ತು ಎಪಿಎಂಸಿ, ತಿಪಟೂರು ಕೊಬ್ಬರಿ ವಿಚಾರವಾಗಿ ನಿರಂತರ ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಇನ್ನು, ಬಹುಶಃ ಅದ್ರಲ್ಲಿ ಏನಾಗಿದೆಯೋ ಗೊತ್ತಿಲ್ಲ. ಎರಡು ದಿನ ಮೂರು ದಿನಕ್ಕೆ ಪ್ರತಿಭಟನೆ ನಿಂತು ಹೋಯ್ತು. ಗೊತ್ತಿಲ್ಲ ಏನೆನೂ ಆಗಿದೆಯೋ ನಮ್ಮ ಜಿಲ್ಲೆಯ ರೈತರಿಗೆ ಕೊಬ್ಬರಿಗೆ ಬೆಂಬಲ ಬೆಲೆ ನೀಡಬೇಕು ಅನ್ನೋದು ನಮ್ಮ ಬೇಡಿಕೆ ಕೂಡ ಆದ್ರೆ ಈ ರೀತಿ ದುಡ್ಡಿಗಾಗಿ ಪ್ರತಿಭಟನೆ ನಡೆದ್ರೆ ಸಮಾಜ ಏನಾಗಬೇಕು ಇವರು ಶ್ರೀಮಂತರಾಗೋದಕ್ಕೆ ರೈತರನ್ನ ಯಾಕ್ ಬಲಿಕೊಡಬೇಕು ಇವರ ತೀಟೆ ತೀರಿಸಿಕೊಳ್ಳೀದಕ್ಕೆ  ರೈತರನ್ನ ಬಲಿಕೊಡ್ತಾವರೆ.  ಪವರ್ ಟಿವಿ ಈ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡ್ತಾ ಇದೆ ಇದನ್ನ ಮುಂದುವರೆಸಬೇಕು ಎಂದು ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES