Thursday, January 23, 2025

ಜೂ. ಮೊನಾಲಿಸಾ- ಗಿರಿಯ ಲವ್ವಿ ಡವ್ವಿಗೆ ಪ್ರೇಕ್ಷಕ ಫಿದಾ

ಕಳೆದ ವರ್ಷ ಗರುಡ ಗಮನ ವೃಷಭ ವಾಹನ ಅನ್ನೋ ಸೆನ್ಸೇಷನಲ್ ಸಿನಿಮಾ ಮಾಡಿ, ದೇಶಾದ್ಯಂತ ಟಾಕ್ ಕ್ರಿಯೇಟ್ ಮಾಡಿದ ರಿಷಬ್ ಶೆಟ್ರು, ಈ ವರ್ಷ ಜೂನಿಯರ್ ಮೊನಾಲಿಸಾ ಜೊತೆ ಡುಯೆಟ್ ಹಾಡ್ತಿದ್ದಾರೆ. ಹರಿಕಥೆ ಅಲ್ಲ ಇದು ಗಿರಿಕಥೆ ಅಂತ ಕಲರ್​ಫುಲ್ ಕನ್ಯೆ ಜೊತೆ ಸರಸ ಸಲ್ಲಾಪ ಮಾಡ್ತಿದ್ದಾರೆ. ಇವ್ರ ಸ್ಟೈಲು, ಮ್ಯಾನರಿಸಂ ಕಣ್ಮನ ತಣಿಸುವಂತಿದೆ.

  • ಗಿರಿ ಕನ್ಯೆಯ ಅಂದ ಚೆಂದಕ್ಕೆ ಸ್ಯಾಂಡಲ್​ವುಡ್ ಬೆರಗು..!
  • ಜೂ- 23ಕ್ಕೆ ಥಿಯೇಟರ್ ಅಂಗಳಕ್ಕೆ ಹರಿಕಥೆ ಅಲ್ಲ ಗಿರಿಕಥೆ
  • ಇದು ರಿಷಬ್ ಶೆಟ್ರ ಮತ್ತೊಂದು ಹೊಚ್ಚ ಹೊಸ ಪ್ರಯೋಗ

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಿಷಬ್ ಶೆಟ್ಟಿ ಮಗದೊಮ್ಮೆ ನಾಯಕನಟನಾಗಿ ಹೊಸ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಹೌದು.. ಕಳೆದ ವರ್ಷ ರಾಜ್ ಬಿ ಶೆಟ್ಟಿ ಜೊತೆ ಗರುಡ ಗಮನ ವೃಷಭ ವಾಹನ ಸಿನಿಮಾ ಮಾಡಿ, ಬಾಲಿವುಡ್​ ಮಂದಿಯೂ ಹೊಗಳುವಂತೆ ಮಾಡಿದ್ರು ಶೆಟ್ರು.

ಈ ವರ್ಷ ಹರಿಕಥೆ ಅಲ್ಲ ಗಿರಿಕಥೆ ಅಂತ ಮತ್ತೊಂದು ವಿನೂತನ ಪ್ರಯೋಗದೊಂದಿಗೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಲು ಬರ್ತಿದ್ದಾರೆ. ಪಕ್ಕಾ ಎಂಟರ್​ಟೈನಿಂಗ್ ಆಗಿರೋ ಈ ಸಿನಿಮಾದಲ್ಲಿ ಶೆಟ್ರ ಮ್ಯಾನರಿಸಂ ಹಾಗೂ ಎಕ್ಸ್​ಪ್ರೆಶನ್ಸ್ ನೋಡುಗರ ಕಣ್ಮನ ತಣಿಸಲಿದೆ. ಅದಕ್ಕೆ ಜೂನಿಯರ್ ಮೊನಾಲಿಸಾ ಸಾಂಗ್ ಬೆಸ್ಟ್ ಎಗ್ಸಾಂಪಲ್.

ಯೆಸ್.. ರೀಸೆಂಟ್ ಆಗಿ ರಿಲೀಸ್ ಆದ ಈ ಹಾಡು ಸೂಪರ್ ಹಿಟ್ ಆಗಿದೆ. ತಪಸ್ವಿನಿ ಪೂಣಚ್ಚ ಜೊತೆ ರಿಷಬ್ ಶೆಟ್ರ ಕೆಮಿಸ್ಟ್ರಿ ಸಖತ್ ಆಗಿಯೇ ವರ್ಕೌಟ್ ಆಗಿದೆ. ಎಂಎಲ್​ಎ ಮಗಳನ್ನ ಪಟಾಯಿಸೋಕೆ ಗೆಳೆಯನೊಟ್ಟಿಗೆ ಶೆಟ್ರು ಮಾಡೋ ಪ್ಲಾನ್​ಗಳು ಈ ಹಾಡಿನಲ್ಲಿದ್ದು, ನೋಡೋಕೆ ಸಖತ್ ಫ್ರೆಶ್ ಫೀಲ್ ಕೊಡ್ತಿವೆ.

ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ಪೋಣಿಸಿರೋ ಈ ಹಾಡಿಗೆ ವಾಸುಕಿ ವೈಭವ್ ಸಂಗೀತ ಸಂಯೋಜಿಸಿ, ಅವ್ರದ್ದೇ ಕಂಠದಲ್ಲಿ ಹಾಡಿದ್ದಾರೆ. ಕರಣ್ ಅನಂತ್ ಹಾಗೂ ಅನಿರುದ್ದ್ ಮಹೇಶ್​ ಜಂಟಿ ನಿರ್ದೇಶನದ ಹರಿಕಥೆ ಅಲ್ಲ ಗಿರಿಕಥೆಗೆ ಸಂದೇಶ್ ನಾಗರಾಜ್ ಬಂಡವಾಳ ಹಾಕಿದ್ದು, ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್​ನಡಿ ನಿರ್ಮಾಣವಾಗಿದೆ.

ಸಿನಿಮಾನ ಸದಾ ಡಿಫರೆಂಟ್ ಆಗಿ ಪ್ರಮೋಷನ್ಸ್ ಮಾಡೋ ರಿಷಬ್, ಗರುಡ ಗಮನ ಚಿತ್ರದ ಹರಿಕಥೆ ಅಲ್ಲ ಗುರು ಇದು, ಗಿರಿ ಕಥೆ ಅಂತ ವೆರೈಟಿ ಟೈಟಲ್​ನಿಂದ ಗಮನ ಸೆಳೆದಿದ್ದಾರೆ. ಅಂದಹಾಗೆ ಶೆಟ್ರಿಗೆ ಇಲ್ಲಿ ರಚನಾ ಅನ್ನೋ ಮತ್ತೊಬ್ಬ ನಟೀಮಣಿ ಕೂಡ ಜೋಡಿಯಾಗಿದ್ದು, ಡಬಲ್ ರೊಮ್ಯಾನ್ಸ್​ನ ಝಲಕ್ ಸದ್ಯದಲ್ಲೇ ರಿವೀಲ್ ಆಗಲಿದೆ. ಮ್ಯೂಸಿಕಲಿ ಸಖತ್ ಸದ್ದು ಮಾಡ್ತಿರೋ ಈ ಚಿತ್ರ, ಇದೇ ಜೂನ್ 23ಕ್ಕೆ ಪ್ರೇಕ್ಷಕರ ಮುಂದೆ ಅದೃಷ್ಟ ಪರೀಕ್ಷೆಗೆ ಬರ್ತಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES