Monday, December 23, 2024

ಬ್ಯಾಡ್ ಮ್ಯಾನರ್ಸ್​ ಅಡ್ಡಾದಲ್ಲಿ ಡಾಲಿ ಮೀಟ್ಸ್ ಸೂರಿ..!

ದುನಿಯಾ ಸೂರಿಗೆ ಇಂಟ್ರಡಕ್ಷನ್ ಬೇಕಾಗಿಲ್ಲ. ಜಾಕಿ, ಜಂಗ್ಲಿ, ಟಗರು, ಹೀಗೆ ಪಕ್ಕಾ ಸುಕ್ಕಾ ಕಥೆಗಳ ಸರದಾರ ಸೂರಿ. ಭೂಗತ ಲೋಕದ ಕರಾಳ ಸತ್ಯಗಳನ್ನು ಕಣ್ಣಿಗೆ ಕಟ್ಟಿದಂತೆ ತೋರಿಸೋ ಮಹಾನ್ ಮಾಂತ್ರಿಕ. ಯೆಸ್.. ಸಿನಿಸಂತ ಸೂರಿಯ ಮುಂದಿನ ಪ್ರಾಜೆಕ್ಟ್ ಬ್ಯಾಡ್ ಮ್ಯಾನರ್ಸ್. ಈ ಚಿತ್ರದ ಶೂಟಿಂಗ್ ಭರದಿಂದ ಸಾಗ್ತಿದ್ದು, ಆ ಅಡ್ಡೆಗೆ ನಟ ರಾಕ್ಷಸ ಡಾಲಿ ಎಂಟ್ರಿ ಕೊಟ್ಟಿದ್ದಾರೆ. ಅಸಲಿಗೆ ಡಾಲಿಗೆ ಅಲ್ಲೇನು ಕೆಲಸ ಅಂತೀರಾ..? ನೀವೇ ನೋಡಿ.

  • ಕಿಂಗ್​ ಮೇಕರ್​ ಸೂರಿಯ ಗರಡಿಗೆ ಮಂಕಿ ಟೈಗರ್​ ಭೇಟಿ

ಸಿನಿಕರಿಯರ್​​ನಲ್ಲಿ ಒಂದೇ ಪ್ಯಾಟ್ರನ್​​ ಸಿನಿಮಾಗಳ ನಡುವೆ ಹೊಸ ರೆವೆಲ್ಯೂಷನ್​​ ಕ್ರಿಯೇಟ್​ ಮಾಡಿದ್ದು ದುನಿಯಾ ಸೂರಿ. ಇವ್ರ ಮೇಕಿಂಗ್​ ಸ್ಟೈಲ್​​ ಚಿತ್ರರಸಿಕರಿಗೆ ಗುಂಗು ಹಿಡಿಸಿತು. ಇವ್ರ ಸಿನಿಮಾಗಳ ಶರಾಬಿನ ರಂಗಿಗೆ ಚಿತ್ರಪ್ರೇಮಿಗಳು ಕ್ಲೀನ್ ಬೋಲ್ಡ್​ ಆಗ್ತಾರೆ. ಸೂರಿ ಸಿನಿಮಾಗಳಂದ್ರೆ ಬೆಟ್ಟದಷ್ಟು ನಿರೀಕ್ಷೆ. ಪ್ರತಿಬಾರಿಯೂ ಹೊಸತನ, ಹೊಸ ಕಥೆ, ಹೊಸ ಕಲಾವಿದರನ್ನು ರಾ ಅಂಡ್​ ರಗಡ್​ ಲುಕ್​ನಲ್ಲಿ ತೆರೆಯ ಮೇಲೆ ತರ್ತಾರೆ ನಮ್​ ಕ್ರಿಯೇಟಿವ್​ ಡೈರೆಕ್ಟರ್​​ ಸೂರಿ.

ನಟ ಧನಂಜಯ​ ಕರಿಯರ್​ಗೆ ಬಿಗ್​ಬ್ರೇಕ್​​​ ತಂದು ಕೊಟ್ಟ ಸಿನಿಮಾ ಟಗರು. ಈ ಚಿತ್ರದಲ್ಲಿನ ಡಾಲಿ ಪಾತ್ರಕ್ಕೆ ಥಿಯೇಟರ್​ಗಳಲ್ಲಿ ಶಿಳ್ಳೆ, ಚಪ್ಪಾಳೆ ಬಿದ್ದಿತ್ತು. ​ ಸೂರಿಯ ಗರಡಿಯಲ್ಲಿ ಪಳಗಿರೋ ಡಾಲಿ ಇದೀಗ ಪ್ಯಾನ್​ ಇಂಡಿಯಾ ಸ್ಟಾರ್​ ಆಗಿದ್ದಾರೆ. ಸದ್ಯ ಸೂರಿ, ಅಭಿಷೇಕ್​ ಅಂಬರೀಶ್​ರ ಬ್ಯಾಡ್​ ಮ್ಯಾನರ್ಸ್​ಗೆ ಆ್ಯಕ್ಷನ್​ ಕಟ್​ ಹೇಳ್ತಿದ್ದಾರೆ. ಅಜಾನುಬಾಹು ಪ್ರತಿಭೆ ಅಭಿಷೇಕ್​ ಖಡಕ್​​ ಪೊಲೀಸ್​​ ಅಧಿಕಾರಿಯ ಪಾತ್ರದಲ್ಲಿ ಆರ್ಭಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್​ ಮೈಸೂರಿನಲ್ಲಿ ನಡೀತಿದ್ದು, ಶೂಟಿಂಗ್​ ಸೆಟ್​ಗೆ ಡಾಲಿ ಭೇಟಿ ಕೊಟ್ಟಿದ್ದಾರೆ. ಹರಟೆ ಹೊಡೆಯುತ್ತಾ  ಸೂರಿ ಅಭಿಷೇಕ್​​ ಜೊತೆ ಸಮಯ ಕಳೆದಿದ್ದಾರೆ.

  • ಮೇಕಿಂಗ್ ಹಂತದಲ್ಲೇ ಬ್ಯಾಡ್ ಮ್ಯಾನರ್ಸ್​ ಫೀವರ್
  • ಅಮರ್​ ಚಿತ್ರದ ನಂತ್ರ ಅಭಿಷೇಕ್​ ಪೊಲೀಸ್ ಖದರ್

ಸ್ಯಾಂಡಲ್​​ವುಡ್​​ನಲ್ಲಿ ಒಂದು ದೊಡ್ಡ ಬ್ರೇಕ್​​ಗಾಗಿ ವೆಯ್ಟ್ ಮಾಡ್ತಿರೋ​ ಅಂಬಿ ತನಯ ಅಭಿಷೇಕ್​ಗೆ, ದುನಿಯಾ ಸೂರಿ ಸಾಥ್​ ಕೊಟ್ಟಿದ್ದಾರೆ. ಸೂರಿಯ ಬ್ಯಾಡ್​​ ಮ್ಯಾನರ್ಸ್​ ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ಖಾಕಿ ಖದರ್ ತೋರಲಿದ್ದಾರೆ ಅಭಿ. ಈಗಾಗ್ಲೇ ಬ್ಯಾಡ್​​ ಮ್ಯಾನರ್ಸ್​ ಸ್ಯಾಂಪಲ್​ ವೀಡಿಯೋ, ಪೋಸ್ಟರ್​​ಗಳು ಸಿನಿಪ್ರಿಯರ ಎದೆಯಲ್ಲಿ ಕಿಚ್ಚು ಹೊತ್ತಿಸಿವೆ. ಚಿತ್ರದ ಬಹುತೇಕ ಶೂಟಿಂಗ್ ಮುಗಿದಿದ್ದು,​ ಅಂತಿಮ ಹಂತ ತಲುಪಿದೆ. ಇದೀಗ ಪ್ಯಾನ್​ ಇಂಡಿಯಾ ಹೀರೋ ಡಾಲಿ ಶೂಟಿಂಗ್​ ಸೆಟ್​ಗೆ ಭೇಟಿ ಕೊಟ್ಟಿರೋದ್ರಿಂದ ಚಿತ್ರದ  ಮೇಲಿನ ಕ್ಯೂರಿಯಾಸಿಟಿ ದುಪ್ಪಟ್ಟಾಗಿದೆ.

ಯ್ಯೂನಿಕ್​ ಮೇಕಿಂಗ್​  ಸ್ಟೈಲ್​​ ಮೂಲಕ ಚಿತ್ರಪ್ರೇಮಿಗಳ ಹೃದಯ ಗೆದ್ದಿರೋ ಸೂರಿಯ ಬ್ಯಾಡ್​ ಮ್ಯಾನರ್ಸ್​ ಚಿತ್ರದಲ್ಲಿ ಡಾಲಿ ಏನಾದ್ರು ನಟಿಸ್ತಿದ್ದಾರಾ ಅನ್ನೋ ಅನುಮಾನಗಳು ವ್ಯಕ್ತವಾಗ್ತಿವೆ. ಆದ್ರೆ ಇದೊಂದು ಕ್ಯಾಶುವಲ್ ಮೀಟ್ ಎಂದಿರೋ ಸೂರಿ-ಡಾಲಿ, ಅಂತೆ ಕಂತೆಗೆ ಫುಲ್​ಸ್ಟಾಪ್ ಇಟ್ಟಿದ್ದಾರೆ. ಚರಣ್​ ರಾಜ್​ ಸಂಗೀತ, ಮಾಸ್ತಿಯ ಸಂಭಾಷಣೆ ಚಿತ್ರದ ಗತ್ತು ಗೈರತ್ತನ್ನು ಡಬಲ್​ ಮಾಡಲಿದೆ. ಸುದೀರ್​ ಕೆಎಮ್​​ ನಿರ್ಮಾಣದಲ್ಲಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರ್ತಿದೆ. ಶೇಖರ್​ ಎಸ್​​ ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಒಟ್ಟಾರೆ ಸೂರಿಯ ನಿರ್ದೇಶನದ ಕರಾಮತ್ತಿನಲ್ಲಿ ಅಭಿಷೇಕ್​ ಅಂಬರೀಶ್​​ ಆ್ಯಕ್ಟಿಂಗ್​ ಖದರ್​ ನೋಡೋಕೆ ಹೆಚ್ಚು ದಿನ ಕಾಯಬೇಕಿಲ್ಲ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES