ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಎನ್ ಸಿಬಿ ಕ್ಲೀನ್ ಚಿಟ್ ನೀಡಿದೆ. ಕ್ರೂಸ್ನಲ್ಲಿದ್ದ ಮತ್ತೊಬ್ಬ ಪ್ರಯಾಣಿಕ ಆರ್ಯನ್ ಖಾನ್ ಮತ್ತು ಮೋಹಕ್ ಜಸ್ವಾಲ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಡ್ರಗ್ಸ್ ಹೊಂದಿರುವುದು ಪತ್ತೆಯಾಗಿದೆ ಎಂದು ಎನ್ಸಿಬಿ ಹೇಳಿದೆ.
ಎನ್ಸಿಬಿ ತನಿಖೆಯ ಭಾಗವಾಗಿ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ 2021 ರಂದು ಬಂಧಿಸಲಾಯಿತು. ಜೊತೆಗೆ ಆರ್ಯನ್ ಖಾನ್ 20 ದಿನಗಳಿಗಿಂತ ಹೆಚ್ಚು ಜೈಲಿನಲ್ಲಿ ಕಳೆಯಬೇಕಾಯಿತು. ಎನ್ಸಿಬಿ ರಹಸ್ಯವಾಗಿ ಹೋಗಿ ಮುಂಬೈನಿಂದ ಗೋವಾಗೆ ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತು. ಏಜೆನ್ಸಿ ಕೊಕೇನ್, ಚರಸ್, MDMA ಮಾತ್ರೆಗಳು ಮತ್ತು MD ಅನ್ನು ದಾಳಿಯ ವೇಳೆ ವಶಕ್ಕೆ ತೆಗೆದುಕೊಂಡಿತ್ತು.
ಇತ್ತ, ಆರ್ಯನ್ ಖಾನ್ ಅವರನ್ನು ಬಂಧಿಸಿದ್ದ ‘ಕ್ರೂಸ್ ಡ್ರಗ್ಸ್’ ಪ್ರಕರಣದ ಬಗ್ಗೆ ಕಳಪೆ ತನಿಖೆ ನಡೆಸಿದ ಎನ್‌ಸಿಬಿ ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಹಣಕಾಸು ಸಚಿವಾಲಯ ಆದೇಶಿಸಿದೆ ಎನ್ನಲಾಗ್ತಿದೆ. ನಕಲಿ ಜಾತಿ ಪ್ರಮಾಣ ಪತ್ರ ನೀಡಿದ ಆರೋಪದ ಮೇಲೆ ವಾಂಖೆಡೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.. ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಮುಂಬೈನ ಎನ್ ಸಿಬಿ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ ಪ್ರಕರಣದಲ್ಲಿ ಪ್ರಧಾನವಾಗಿ ತನಿಖೆ ನಡೆಸಿ, ಆರ್ಯನ್ ಖಾನ್ ರನ್ನು ಬಂಧಿಸಿದ್ದ ಸಮೀರ್ ವಾಂಖೆಡೆ ವಿರುದ್ಧ ಕಳಪೆ ತನಿಖೆಯ ಆರೋಪವನ್ನು ಸರ್ಕಾರ ಮಾಡಿದೆ.