Monday, December 23, 2024

‘ನನ್ನ ಪತ್ನಿ ಕೈಗೆ ಸಿಕ್ಕಿದ್ದರಲ್ಲಿ ಬಾರಿಸ್ತಾಳೆ..ಕಾಪಾಡಿ’

ರಾಜಸ್ಧಾನ : ಪ್ರತಿನಿತ್ಯವು ನನ್ನ ಹಂಡತಿ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಾಳೆ. ಈ ಸಂಕಷ್ಟದಿಂದ ನನ್ನನ್ನು ಪಾರು ಮಾಡಿ ಎಂದು ಶಾಲಾ ಪ್ರಾಂಶುಪಾಲರೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ಘಟನೆ ರಾಜಸ್ಥಾನದ ಅಲ್ವಾರ್​ನಲ್ಲಿ ನಡೆದಿದೆ.

ಸಂತ್ರಸ್ತ ಪ್ರಾಂಶುಪಾಲರ ಹೆಸರು ಅಜಿತ್​ ಯಾದವ್​. ತನ್ನ ಹೆಂಡತಿ ದೌರ್ಜನ್ಯ ಎಸಗುವ CCTV ವಿಡಿಯೋ ಸಮೇತ ದೂರು ದಾಖಲಿಸಿದ್ದು, ರಕ್ಷಣೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅಜಿತ್​ ಮನವಿಯನ್ನು ಪುರಸ್ಕರಿಸಿರುವ ನ್ಯಾಯಾಲಯ ರಕ್ಷಣೆ ಒದಗಿಸುವಂತೆ ಆದೇಶಿಸಿದೆ. ದಂಪತಿಗೆ 6 ವರ್ಷದ ಒಂದು ಗಂಡು ಮಗುವಿದೆ. ಸದ್ಯ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

ಇನ್ನು, ಕಾರಣವಿಲ್ಲದೆ ನನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆಯನ್ನೆಲ್ಲಾ ಚಿಂದಿ ಮಾಡಿದ್ದಾಳೆ. ದಿನಬೆಳಗಾದರೂ ನನ್ನನ್ನು ಹಿಗ್ಗಾಮುಗ್ಗಾ ಥಳಿಸುತ್ತಿರುತ್ತಾಳೆ. ಕ್ರಿಕೆಟ್​ ಬ್ಯಾಟ್​, ಐರನ್​ ಪ್ಯಾನ್​ ಮತ್ತು ಇತರೆ ಪಾತ್ರೆಗಳಿಂದ ಬಾರಿಸುತ್ತಿರುತ್ತಾಳೆ. ಏಕೆ ಹೊಡೆಯುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದರೆ, ಅದಕ್ಕೆ ಉತ್ತರವಿಲ್ಲ. ಆಕೆಯ ಕಾಟ ತಡೆಯಲು ಆಗುತ್ತಿಲ್ಲ ಎಂದು ದೂರಿನಲ್ಲಿ ಅಜಿತ್​ ಉಲ್ಲೇಖಿಸಿದ್ದಾರೆ.

RELATED ARTICLES

Related Articles

TRENDING ARTICLES