Wednesday, January 22, 2025

ಕೆಂಪೇಗೌಡ ಸಭಾಂಗಣಕ್ಕೆ ಹೈಟೆಕ್ ಸ್ಪರ್ಶ

ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸುಪ್ರಿಂಕೋರ್ಟ್ ಹಸಿರು ನಿಶಾನೆ ನೀಡುತ್ತಿದ್ಧಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿರುವ ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ರೂಪ ಕೊಡೋದಕ್ಕೆ ಪಾಲಿಕೆ ಮುಂದಾಗಿದೆ. ಕಳೆದ 23 ವರ್ಷಗಳ ಹಿಂದೆ ಕಟ್ಟಿದ್ದ ಪಾಲಿಕೆ ಕೌನ್ಸಿಲ್ ಕಟ್ಟಡ ಸದ್ಯ ಹಳೆಯ ವಿನ್ಯಾಸದಲ್ಲಿದ್ದು, ಕೇವಲ 270 ಜನರು ಮಾತ್ರ ಕೂತುಕೊಳ್ಳುವ ಅವಕಾಶವಿತ್ತು. ಪಾಲಿಕೆ ಸದಸ್ಯರು, ಬೆಂಗಳೂರಿನ ಮಂತ್ರಿಗಳು, ಶಾಸಕರು, ನಾಮನಿರ್ದೇಶಿತ ಕೌನ್ಸಿಲರ್‌ಗಳು, ಎಂಪಿಗಳು, ಎಂಎಲ್‌ಸಿಗಳು ರಾಜ್ಯಸಭಾ ಸದಸ್ಯರು ಸೇರಿ 270 ಜನ ಕೂರೋದಕ್ಕೆ ಅವಕಾಶ ಇತ್ತು.ಆದ್ರೆ, ಈಗ ಸುಪ್ರೀಂ ಆದೇಶದಂತೆ ಈ ಬಾರಿ 243 ವಾರ್ಡ್‌ಗಳ ವಿಂಗಡಣೆಯಂತೆ ಚುನಾವಣೆ ನಡೆಯಬೇಕು, ಇದರಿಂದ ಪಾಲಿಕೆ ಸದಸ್ಯರ ಸಂಖ್ಯೆಯಲ್ಲಿ ಹಾಗೂ ನಾಮ ನಿರ್ದೇಶಿತರ ಸಂಖ್ಯೆ ಸೇರಿ 364 ಸದಸ್ಯರ ಜನಪ್ರತಿನಿದಿಗಳ ಸಂಖ್ಯೆ ಹೆಚ್ಚಾಗೋ ಹಿನ್ನೆಲೆಯಲ್ಲಿ ಪಾಲಿಕೆ ಕೆಂಪೇಗೌಡ ಸಭಾಂಗಣ ನವೀನ ರೀತಿ ಸಜ್ಜುಗೊಳಿಸಲು ಪಾಲಿಕೆ ಅಯುಕ್ತರು ಮುಂದಾಗಿದ್ದಾರೆ.

ಸದ್ಯ 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸವಾಗಲಿದ್ದು, ನೂತನವಾಗಿ ಆಯ್ಕೆಯಾದ ಸದಸ್ಯರ ಜೊತೆ 364 ಮಂದಿ ಕೂರುವಂತಹ ಹೈಟೆಕ್ ಕೌನ್ಸಿಲ್ ಹೌಸ್ ನಿರ್ಮಾಣಕ್ಕೆ ಬಿಬಿಎಂಪಿ ಛೀಪ್ ಎಂಜಿನಿಯರ್‌ಗಳು ಬ್ಲೂ ಪ್ರಿಂಟ್ ಸಿದ್ಧಪಡಿಸಿದ್ದಾರೆ. ಇದ್ರಿಂದ ಪ್ರತಿ ಅಸನವನ್ನೂ ಟೀಕ್ ವುಡ್‌ನಲ್ಲಿ ನಿರ್ಮಾಣ ಮಾಡಲಿದ್ದು, ಪ್ರತಿ ಸದಸ್ಯರ ಆಸದನದಲ್ಲಿ ಮೈಕ್ ಅಳವಡಿಕೆ ಜೊತೆಗೆ ಸೌಂಡ್ ಪ್ರೂಪ್ ಸಭಾಂಗಣ ವಾಗಲಿದೆಯಂತೆ.

ಒಟ್ನಲ್ಲಿ ಪಾಲಿಕೆ ಪೌರ ಸಭಾಂಗಣ ವಿನೂತ ರೀತಿ ನಿರ್ಮಾಣವಾಗ್ತಿರೋದು ಪಾಲಿಕೆಯ ಸೌಂದರ್ಯ ಹೆಚ್ಚಿಸಲಿದೆ. ಇನ್ನೂ ಪಾಲಿಕೆ ನೂತನವಾಗಿ ಆಯ್ಕೆ ಆಗಿ ಬರುವ ಸದಸ್ಯರು ಈ ಬಾರಿ ಹೊಸ ಕೆಂಪೇಗೌಡ ಸಭಾಂಗಣದಲ್ಲಿ ತಮ್ಮ ಕಾರ್ಯದಕ್ಷತೆ ಪ್ರದರ್ಶಿಸಬೇಕಾಗಿದೆ.

RELATED ARTICLES

Related Articles

TRENDING ARTICLES