ಬೆಂಗಳೂರು : ರೈತ ಮುಖಂಡ ಅಂತ ಹೇಳಿಕೊಂಡು, ರಾಜಕೀಯ ನಾಯಕರ ಜೊತೆ ನಿರಂತರ ಸಖ್ಯ ಬೆಳೆಸಿ, ಬೇಳೆ ಬೇಯಿಸಿಕೊಳ್ಳುತ್ತಿದ್ದ ಕೋಡಿಹಳ್ಳಿ ಚಂದ್ರಶೇಖರ್ ಮುಖವಾಡ ಕಳಚಿ ಬಿದ್ದಿದೆ. ರೈತ ಹೋರಾಟ ಅಂತ ಹೇಳಿ ರಾಜಕೀಯ ಪಕ್ಷಗಳ ಬೆಂಬಲ ಪಡೆದು ಡೀಲ್ ಮಾಡಿಕೊಳ್ಳುತ್ತಿದ್ದ ವಿಚಾರಗಳು ಹೊರ ಬರುತ್ತಿವೆ. ಇದರಿಂದಾಗಿ ಕಾಂಗ್ರೆಸ್ ನಾಯಕರು ಕೂಡ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಯಾವ ಕಾಂಗ್ರೆಸ್ ನಾಯಕರು ಕೂಡ ಡೀಲ್ ವಿಚಾರವಾಗಿ ಮಾತನಾಡಲು ಮುಂದೆ ಬರುತ್ತಿಲ್ಲ.. ಬದಲಿಗೆ ನಮಗೆ ಎಲ್ಲಿ ಸುತ್ತಿಕೊಳ್ಳುತ್ತೋ ಅಂತ ಹಿಂಜರಿಯುತ್ತಿದ್ದಾರೆ. ಎರಡು ದಿನಗಳಿಂದ ನಿಮ್ಮ ಪವರ್ ಟಿವಿ ಕಾಂಗ್ರೆಸ್ ನಾಯಕರನ್ನು ಮಾತನಾಡಿಸಲು ಪ್ರಯತ್ನ ಮಾಡ್ತು. ಆದ್ರೆ, ಸಿದ್ದರಾಮಯ್ಯ, ಡಿಕೆಶಿ, ಖರ್ಗೆ, ಖಾದರ್, ರೇವಣ್ಣ ಯಾರಿಂದ ಮಾತು ಬರುತ್ತಿಲ್ಲ. ಸಂಪೂರ್ಣ ಮಾಹಿತಿ ನಮಗಿಲ್ಲ. ವಿಷಯ ತಿಳಿದುಕೊಂಡು ಮಾತನಾಡ್ತಾನೆ ಅಂತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಕಾಂಗ್ರೆಸ್ ನಾಯಕರು ಹಲವು ಸಂದರ್ಭದಲ್ಲಿ ಕೋಡಿಹಳ್ಳಿ ಹೋರಾಟಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ರು. ಅದರಲ್ಲೂ ಸಾರಿಗೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾಗ ರಾಜ್ಯ ಸರ್ಕಾರ ಸಂಪೂರ್ಣ ಇಕ್ಕಟ್ಟಿಗೆ ಸಿಲುಕಿತ್ತು. ಬಸ್ ಸಿಗದೆ ಜನರು ಪರದಾಡ್ತಾ ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಾ ಇದ್ರು. ಈ ಸಂದರ್ಭದಲ್ಲಿ ಸಾರಿಗೆ ನೌಕರರ ಹೋರಾಟವನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮಾಡಿತ್ತು. ಇದು ಪರೋಕ್ಷವಾಗಿ ಕೋಡಿಹಳ್ಳಿ ಹೋರಾಟಕ್ಕೆ ಸಹಕಾರ ಕೂಡ ಸಿಕ್ಕಿತ್ತು. ಇದರ ಜೊತೆಗೆ ಮೂರು ರೈತ ಕಾಯ್ದೆಗಳ ವಿಚಾರವಾಗಿ ರೈತರ ಹೋರಾಟದಲ್ಲಿ ಕಾಂಗ್ರೆಸ್ ಭಾಗಿಯಾಗಿತ್ತು. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಹೋರಾಟಗಳಿಗೆ ಬೆಂಬಲ ಸೂಚಿಸಿದ್ರು. ಅಷ್ಟೇ ಅಲ್ಲದೆ ಕಾಂಗ್ರೆಸ್ ಮುಂದಿನ ಹೋರಾಟ ರೂಪಿಸುವ ಸಲುವಾಗಿ ಸಿದ್ದರಾಮಯ್ಯ ಒಂದು ತಂಡದ ಅಭಿಪ್ರಾಯ ಸಂಗ್ರಹ ಕೂಡ ಮಾಡ್ತಾ ಇದ್ರು. ಅದರಲ್ಲಿ ಕೋಡಿಹಳ್ಳಿ ಚಂದ್ರಶೇಖರ ಕೂಡ ಸದಸ್ಯರಾಗಿದ್ರು. ಹೀಗಾಗಿ ಯಾವೊಬ್ಬ ಕಾಂಗ್ರೆಸ್ ನಾಯಕರು ಕೋಡಿಹಳ್ಳಿ ಅಕ್ರಮದ ಬಗ್ಗೆ ಮಾತನಾಡುತ್ತಿಲ್ಲ. ಒಂದು ವೇಳೆ ಮಾತನಾಡಿದ್ರೆ ನಮ್ಮ ಬುಡಕ್ಕೆ ಬರುತ್ತೊ ಅಂತ ಫುಲ್ ಸೈಲೆಂಟ್ ಆಗಿದ್ದಾರೆ.
ಒಟ್ಟಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಡೀಲ್ ವಿಚಾರವಾಗಿ ಕಾಂಗ್ರೆಸ್ ಸೈಲೆಂಟ್ ಆಗಿದೆ. ಇತ್ತೀಚಿನವರೆಗೆ ಕಾಂಗ್ರೆಸ್ ಗೆ ಫೇವರ್ ಆಗಿ ಹೋರಾಟ ರೂಪಿಸ್ತಾ ಇದ್ರು. ಹೀಗಾಗಿ ಕೋಡಿಹಳ್ಳಿ ಅಕ್ರಮದ ವಿಚಾರವಾಗಿ ಕಾಂಗ್ರೆಸ್ ನಾಯಕರು ಸಾಫ್ಟ್ ಕಾರ್ನರ್ ತೋರಿಸ್ತಾ ಇದ್ದಾರೆ.