Friday, December 27, 2024

ದಾವೋಸ್ ಪ್ರವಾಸ ಬಗ್ಗೆ ಸಿಎಂ ಬೊಮ್ಮಾಯಿ ಸಂತಸ..!

ಬೆಂಗಳೂರು: ದಾವೋಸ್‌ನಲ್ಲಿ ನಡೆದ ಆರ್ಥಿಕ ಶೃಂಗ ಸಭೆ ಯಶಸ್ವಿಯಾಗಿದೆ ಎಂದು ಸಿಎಂ ಬೊಮ್ಮಾಯಿ ಹರ್ಷ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ದಾವೋಸ್ ಪ್ರವಾಸ ಕುರಿತು ಸಂಪೂರ್ಣ ಮಾಹಿತಿ ನೀಡಿದ ಸಿಎಂ ಬೊಮ್ಮಾಯಿ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಹಲವು ಜಾಗತಿಕ ಉದ್ದಿಮೆದಾರರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ ಎಂದು ಬೊಮ್ಮಾಯಿ ಸಂತಸ ವ್ಯಕ್ತಪಡಿಸಿದ್ರು.

ರೆನ್ಯೂ ಪವರ್ ಪ್ರೈ.ಲಿ, ಲುಕು ಗ್ರೂಫ್, ಜ್ಯುಬಿಲಿಯಂಟ್‌ ಗ್ರೂಪ್, ಹಿಟಾಜಿ ಎನರ್ಜಿ, ಸೀಮೆನ್ಸ್ ಸೇರಿ ಹಲವು ಕಂಪನಿಗಳು ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಸಕ್ತಿ ತೋರಿದೆ ಎಂದು ಸಿಎಂ ಹೇಳಿದ್ರು. ಇದು ರಾಜ್ಯಕ್ಕೆ ಸಾಕಷ್ಟು ಬಂಡವಾಳಕ್ಕೆ ದಾರಿ ಮಾಡುಕೊಡುತ್ತೆ ಎಂದು ಸಿಎಂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಇನ್ನು ರಾಜ್ಯದಲ್ಲಿ ಕೆಲ  ತಿಂಗಳಗಳಿಂದ ಹಿಜಾಬ್,ಅಜಾನ್ ಸೇರಿದಂತೆ ಹಲವು ಕೋಮು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ.ಇದರಿಂದ ಕೆಲ ಕಂಪನಿಗಳು ರಾಜ್ಯ ಬಿಟ್ಟು ಹೋಗುವುದಾಗಿ ಚರ್ಚೆಯಾಗಿತ್ತು. ಕೆಲ ಐಟಿ ತಜ್ಞರ ಕೂಡ ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಹೀಗಾಗಿ,ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಪ್ರಚೋದಿತ ವಿಚಾರಗಳಾದ ಹಿಜಾಬ್,ಅಜಾನ್ ಬಗ್ಗೆ ದಾವೋಸ್ ನಲ್ಲಿ ಯಾರು ಪ್ರಶ್ನೆ ಕೇಳಲಿಲ್ಲ ಎಂದು ಸಿಎಂ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ದೇ ನಾವು ಬೇರೆ ರಾಜ್ಯಗಳಿಗೆ ಕಂಪೇರ್ ಮಾಡೋದು ಬೇಡ. ನಾವು ಇಂಟರ್ ನ್ಯಾಷನಲ್ ಲೆವಲ್ ನಲ್ಲಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇನ್ನು ನವೆಂಬರ್ ನಲ್ಲಿ ನಡೆಯುವ ಗ್ಲೋಬಲ್ ಇನ್ವೆಸ್ ಮೀಟ್ ಗೆ ಹಲುವು ಉದ್ಯಮಿದಾರರಿಗೆ ಸರ್ಕಾರ ಆಹ್ವಾನ ನೀಡಿದೆ.. ನವೆಂಬರ್ ವೇಳೆಗೆ ಬೆಂಗಳೂರಿನ ಮೂಲ ಸೌರ್ಕಯ ಸಂಪೂರ್ಣ ಸರಿ ಮಾಡುವ ವಿಶ್ವಾಸವನ್ನ ಸಿಎಂ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ,ದಾವೋಸ್ ಪ್ರವಾಸ ಯಶ್ವಸಿಯಾಗಿದೆ ಎಂದು ಸಿಎಂ ಹೇಳುತ್ತಿದ್ದು, ನಿಜಕ್ಕೂ 65 ಸಾವಿರ ಕೋಟಿ ಬಂಡವಾಳ ಮುಂದಿನ ದಿನಗಳಲ್ಲಿ ಹೂಡಿಕೆಯಾಗಲಿದ್ಯಾ ಅನ್ನೋದನ್ನ ಕಾದು ನೊಡಬೇಕಿದೆ.

RELATED ARTICLES

Related Articles

TRENDING ARTICLES