Sunday, December 22, 2024

ಕಳ್ಳ ನಾಯಕನ ವಿರುದ್ಧ ವ್ಯಾಪಕ ಜನಾಕ್ರೋಶ : ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು: ಕೋಡಿಹಳ್ಳಿ ಚಂದ್ರಶೇಖರ್ ರೈತರ ಪರ, ನೊಂದವರ ಪರ ನಿಲ್ಲುವ ಪ್ರಾಮಾಣಿಕ ನಾಯಕ ಎಂದು ಬಿಂಬಿಸಿಕೊಂಡಿದ್ದ ವ್ಯಕ್ತಿ. ಏನೇ ಅನ್ಯಾಯವಾದರೂ ರೈತರ ಪರ ನಿಲ್ತಾರೆ ಅಂತಾನೆ ಜನರಲ್ಲಿ ನಂಬಿಕೆ ನೆಲೆಯೂರಿತ್ತು..ಆದ್ರೆ, ಈತ ತಾನೊಬ್ಬ ಹಸಿರು ಶಾಲು ಹಾಕಿಕೊಂಡು ರೈತ ನಾಯಕನ ಸೋಗಿನಲ್ಲಿ ಹಣ ಪೀಕೋ ಕೆಲಸ ಮಾಡ್ತಿದ್ದ. ಈ ಕಳ್ಳ ನಾಯಕನ ಬಂಡವಾಳವನ್ನ ನಿಮ್ಮ ಪವರ್​ ಟೀವಿ ಬಟಾಬಯಲು ಮಾಡಿದೆ. .ಇದಾಗಿದ್ದೇ ತಡ ರಾಜ್ಯದ ವಿವಿಧೆಡೆ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಜನ ಕೋಡಿಹಳ್ಳಿ ವಿರುದ್ಧ ದಂಗೆಯೆದ್ದಿದ್ದಾರೆ.

ನೋಡಿದ್ರಲ್ಲಾ ಇದು ರೈತ ನಾಯಕನ ಇನ್ನೊಂದು ಕರಾಳ ಮುಖ. ಪವರ್​​​​ ವರದಿ ಬೆನ್ನಲ್ಲೇ ಸಾರಿಗೆ ನೌಕರರು ಅಲರ್ಟ್ ಆಗಿದ್ದಾರೆ. ಡೀಲ್​ ವಿಚಾರವನ್ನ ಸಿಬಿಐ ತನಿಖೆಗೆ ವಹಿಸುವಂತೆ KSRTC ಸ್ಟಾಫ್ & ವರ್ಕರ್ಸ್​ ಫೆಡರೇಷನ್​ನಿಂದ ಸಿಎಂಗೆ ಪತ್ರ ಬರೆದಿದ್ದಾರೆ. ಪವರ್ ಟಿವಿ ವರದಿ ‘ಕಳ್ಳ ನಾಯಕ’ ಕಾರ್ಯಕ್ರಮನ್ನು ಉಲ್ಲೇಖಿಸಿ ಪತ್ರ ಬರೆಯಲಾಗಿದ್ದು, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇನ್ನು, ಡೀಲ್​ ನಾಯಕ’ನ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು,ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಾಳೆ ಏಕಕಾಲದಲ್ಲಿ ಪ್ರತಿಭಟನೆ ನಡೆಸಲು ರೈತ ಸಂಘ ಮುಂದಾಗಿದೆ.

ಪವರ್​ ಟಿವಿ ಸ್ಟಿಂಗ್​ ಆಪರೇಷನ್​ಗೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ. ಪವರ್ ಟಿವಿಗೆ ಮಾಜಿ ಸಾರಿಗೆ ಸಚಿವ ಸವದಿ ಪ್ರತಿಕ್ರಿಯೆ ನೀಡಿದ್ದು, ಸಾರಿಗೆ ಮುಷ್ಕರ ವೇಳೆ ನೌಕರರ ದಿಕ್ಕು ತಪ್ಪಿಸಲಾಗಿದೆ.ಮುಷ್ಕರ ಹಿಂಪಡೆಯುವುದಾಗಿ ನನ್ನ ಬಳಿ ಇಬ್ಬರು ಬಂದಿದ್ದರು

ಇನ್ನು, ಪವರ್​ನ ಈ ಪವರ್​ಫುಲ್​ ವರದಿ ರಾಜ್ಯಾದ್ಯಂತ ರೈತರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ರಾಜಕಾರಣಿಗಳು, ರೈತ ಮುಖಂಡರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

ಒಟ್ಟಾರೆ ಸ್ಟಿಂಗ್ ಆಪರೇಷನ್ ಕಿಂಗ್ ಪವರ್ ಟಿವಿ ಕಳ್ಳನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮುಖವಾಡ ಕಳಚಿದ್ದಕ್ಕೆ ವ್ಯಾಪಕ ಜನಮೆಚ್ಚುಗೆ ವ್ಯಕ್ತವಾಗಿದೆ.ವರದಿಯಿಂದಾಗಿ ರಾಜ್ಯಾದ್ಯಂತ ರೈತರು ಎಚ್ಚೆತ್ತುಕೊಳ್ಳುವಂತೆ ಮಾಡಿದೆ.

RELATED ARTICLES

Related Articles

TRENDING ARTICLES