ಕೆಪಿಸಿಸಿಯ ಬೇನಾಮಿ ಅಧ್ಯಕ್ಷೆಯ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ಡಿ.ಕೆ ಶಿವಕುಮಾರ್ ಅವರು ಸಚಿವನಾಗಿದ್ದ ಅವಧಿಯಲ್ಲಿ ನಡೆಸಿದ ಅವ್ಯವಹಾರಗಳ ಬಗ್ಗೆ ಬೆಳಕು ಚೆಲ್ಲಬೇಕೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಬೆಳಗಾವಿಯ “ಲಕ್ಷ್ಮಿ”ಗೆ ಮಂಗಳೂರು, ಉತ್ತರ ಕನ್ನಡ ಹಾಗೂ ಇನ್ನಿತರ ಜಿಲ್ಲಾ ಸಹಕಾರ ಬ್ಯಾಂಕ್‌ಗಳಿಂದ ನೂರಾರು ಕೋಟಿ ಸಾಲ ಕೊಡಿಸಿದ್ದು ಯಾರು? ಐಟಿ, ಇಡಿ, ಸಿಬಿಐ ದಾಳಿ ಮಾಡಿದಾಗಲೆಲ್ಲ ಬಿಜೆಪಿ ಮೇಲೆ ಬೊಟ್ಟುಮಾಡುವ ಡಿಕೆಶಿ ಅವರೇ, ಕೆಪಿಸಿಸಿ ಕಚೇರಿಯಲ್ಲೇ ಕಳಿತು ನಿಮ್ಮದೇ ಪಕ್ಷದ ಉಗ್ರಪ್ಪ ಹಾಗೂ ಸಲೀಮ್ ಅವರು ಪಿಸುಮಾತುಗಳನ್ನಾಡಿದ್ದು ಮರೆತಿರಾ? ನ್ಯಾಯಯುತ ಸಂಪಾದನೆ ಮಾಡಿದ್ದರೆ ನಿಮ್ಮ ಮೇಲೆ ಸ್ವಪಕ್ಷೀಯ ನಾಯಕರಿಂದ ಅಪವಾದ ಕೇಳಿ ಬರುತ್ತಿತ್ತೇ? ಕೇಂದ್ರೀಯ ತನಿಖಾ ಸಂಸ್ಥೆಗಳ ತನಿಖೆಯ ಪ್ರತಿ ಹಂತವನ್ನೂ ಬಿಜೆಪಿ ಮೇಲೆ ಹೊರಿಸುವುದೇಕೆ? ಕೆಪಿಸಿಸಿ ಅಧ್ಯಕ್ಷರು ಮತ್ತು ಅವರ ಹಿರಿಮೆ 317 ಬ್ಯಾಂಕ್ ಖಾತೆಗಳು, 200 ಕೋಟಿ ಅಕ್ರಮ ವರ್ಗಾವಣೆ, 800 ಕೋಟಿ ಬೇನಾಮಿ ಆಸ್ತಿ. ಇಂತಹ ವ್ಯಕ್ತಿ ತಾಳೆ ಮರದಡಿಯಲ್ಲಿ ಹಾಲು ಕುಡಿಯಲು ಸಾಧ್ಯವೇ? ಎಂದು ಪ್ರಶ್ನಿಸಿದೆ.