Wednesday, January 22, 2025

ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ : ಸಲೀಂ ಅಹ್ಮದ್

ಬೆಂಗಳೂರು: ಹಿಜಾಬ್ ಮತ್ತು ಅಜಾನ್ ವಿಚಾರವನ್ನ ಎತ್ತಿ ಜನರ ಗಮನ ಬೇರೆ ಕಡೆ ಸೆಳೆಯುವ ಕೆಲಸ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಕಳೆದುಕೊಂಡ ಬಳಿಕ ಈಶ್ವರಪ್ಪಗೆ ಕೆಲಸ ಇಲ್ಲವಾಗಿದೆ. ದೊಡ್ಡ ಸ್ಥಾನದಲ್ಲಿ ಇರುವ ಈಶ್ವರಪ್ಪ ಈ ಹೇಳಿಕೆ ಕೊಡಬಾರದು. ಸಾಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ. ಸಮಾಜದಲ್ಲಿ ಹುಳಿಹಿಂಡುವ ಕೆಲಸ ಮಾಡ್ತಿದ್ದಾರೆ ಇಂತಹ ಕೆಲಸ ಯಾರು ಮಾಡಬಾರದು ಮಾಡಬಾರದು ಎಂದರು.

ಅದಲ್ಲದೇ, ಬಿಜೆಪಿ ಅವರು ಮೊದಲು 40% ಕಮಿಷನ್ ಆರೋಪ ಸರಿ ಮಾಡಲಿ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಲುಗಿದೆ. ರೈತರ ಸಮಸ್ಯೆ ಬೇಕಿಲ್ಲ, ಬೆಲೆ ಏರಿಕೆ ಬಗ್ಗೆ ಮಾತನಾಡ್ತಿಲ್ಲ. ಹಿಜಾಬ್ ಮತ್ತು ಅಜಾನ್ ವಿಚಾರ ವನ್ನ ಎತ್ತಿ ಜನರ ಗಮನ ಬೇರೆ ಕಡೆ ಸೆಳೆಯುವ ಕೆಲಸ ಮಾಡ್ತಿದ್ದಾರೆ. ಬಿಜೆಪಿ ಅವರು ಸರ್ವೇ ಮಾಡಿದ್ದಾರೆ ಅದರಲ್ಲಿ 70 ಸೀಟ್ ಬರಲ್ಲ ಅಂತ ರಿಪೋರ್ಟ್ ಸಿಕ್ಕಿದೆ. ಹೀಗಾಗಿ ಜನರ ಮುಂದೆ ಭಾವನಾತ್ಮಕ ವಿಚಾರಗಳನ್ನ ಪ್ರಸ್ತಾಪ ಮಾಡುವ ಕೆಲಸ ಮಾಡ್ತಿದ್ದಾರೆ. ಜನರು ಬುದ್ಧಿವಂತರಿದ್ದಾರೆ.ಇದಕ್ಕೆ ಸೊಪ್ಪು ಹಾಕಲ್ಲ. ಮುಂದಿನ ಚುನಾವಣೆಯಲ್ಲಿ ಜನರ ಇವರಿಗೆ ಬುದ್ದಿ ಕಲಿಸುತ್ತಾರೆ ಎಂದು ಸಲೀಂ ಅಹಮದ್ ಹೇಳಿದರು.

RELATED ARTICLES

Related Articles

TRENDING ARTICLES