Sunday, November 3, 2024

ಸಾರಿಗೆ ನೌಕರರ ಮುಷ್ಕರ ನಿಲ್ಲಿಸಲು 35 ಕೋಟಿ ಡೀಲ್..!

ಬೆಂಗಳೂರು: ಹೇಳಿಕೊಳ್ಳೋಕೆ ರೈತ ಹೋರಾಟಗಾರ. ಇದು ಸಾಲದ್ದು ಅಂತ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಬೇರೆ. ವಿಚಿತ್ರ ಅಂದ್ರೆ, ರೈತರಿಗಾಗಲಿ. ಕೆಎಸ್‌ಎರ್‌ಟಿಸಿ ಸಿಬ್ಬಂದಿಗಾಗಲಿ ಈತ ನ್ಯಾಯ ಕೊಡಿಸೋ ಬದ್ಲು ಅವರಿಗೇ ವಂಚಿಸಿಬಿಟ್ಟ.

ಸಾರಿಗೆ ನೌಕರರ ಮುಷ್ಕರ ನಿಲ್ಲಿಸೋಕೆ 35 ಕೋಟಿ ಡೀಲ್‌ ಮಾಡಿಕೊಂಡ ಕೋಡಿಹಳ್ಳಿ ಚಂದ್ರಶೇಖರ್‌ ಅಲಿಯಸ್‌ ಕೋಚಂ ಕುರಿತು ಪವರ್‌ ಮೆಗಾ ಎಕ್ಸ್‌ಪೋಸ್‌ ಮೂಲಕ ಮುಖವಾಡ ಕಳಚಿತ್ತು ಪವರ್‌ ಟಿವಿ. ಹೋರಾಟಗಾರನ ಅಸಲಿ ಮುಖ ಪರಿಚಯವಾಗುತ್ತಿದ್ದಂತೆ ರಾಜ್ಯಾದ್ಯಂತ ಪ್ರತಿಭಟನೆ ಕಾವು ಜೋರಾಗಿದೆ. ಕೋಡಿಹಳ್ಳಿ ಡೀಲ್​ ಬಗ್ಗೆ ಮೆಗಾ ಸ್ಟಿಂಗ್ ಬಗ್ಗೆ ಪವರ್ ಟಿವಿಗೆ ಮಾಜಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಪ್ರಬಲ ಸಾಕ್ಷ್ಯ ನೀಡಿದ್ದಾರೆ.

ಮುಷ್ಕರದ ವೇಳೆ ನೌಕರರ ದಿಕ್ಕು ತಪ್ಪಿಸಲಾಗಿದೆ. ಹಣ ಕೊಟ್ಟರೆ ಮುಷ್ಕರ ಹಿಂಪಡೆಯುವುದಾಗಿ ಬೇಡಿಕೆ ಇಟ್ಟಿದ್ರು.. ಇಬ್ಬರು ನನ್ನ ಬಳಿ ಬಂದು ಹಣದ ಬೇಡಿಕೆ ಇಟ್ಟಿದ್ರು. ಸಾರಿಗೆ ನೌಕರರು ಒಟ್ಟು 10 ಬೇಡಿಕೆ ಇಟ್ಟಿದ್ರು. ಅದರಲ್ಲಿ 9 ಬೇಡಿಕೆಗಳನ್ನ ಈಡೇರಿಸಲು ಸಿದ್ಧರಿದ್ವಿ. ಆದ್ರೆ, ಕೋಡಿಹಳ್ಳಿಗೂ ಸಾರಿಗೆ ನೌಕರರಿಗೂ ಸಂಬಂಧ ಇರಲಿಲ್ಲ. ಆದ್ರೆ, ನೌಕರರ ದಿಕ್ಕು ತಪ್ಪಿಸಿ ಒಕ್ಕೂಟ ಮಾಡಿ ಮುಷ್ಕರ ಮಾಡಿ, ಮುಷ್ಕರದ ಹಾದಿ ತಪ್ಪಿಸಿದ್ದಾರೆ ಎಂದು ಪವರ್ ಟಿವಿಗೆ ಮಾಜಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.. ಪವರ್‌ ಟಿವಿಯ ಪವರ್‌ಫುಲ್‌ ಸ್ಟಿಂಗ್‌ಗೆ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ ಕೋಚಂ ವಿರುದ್ಧ ಕಿಡಿಕಾರಿದೆ.

ದೆಹಲಿಯ ರಾಕೇಶ್ ಟಿಕಾಯತ್, ಕರ್ನಾಟಕದ ಕೋಡಿಹಳ್ಳಿ ಚಂದ್ರಶೇಖರ್ ಇವರು ರೈತ ಹೋರಾಟಗಾರರಲ್ಲ, ಡೀಲ್ ಹೋರಾಟಗಾರರು. ಹಸಿರು ಶಾಲು ಹೊದ್ದುಕೊಂಡು ರೈತ ನಾಯಕನಂತೆ ಬಿಂಬಿಸುವವರು. ಡೀಲಚಂದ್ರ ನಿಧಾನವಾಗಿ ಕಾರ್ಮಿಕ ಹೋರಾಟಗಾರನಾಗಿ ಬದಲಾದ. ಈ ಹಠಾತ್ ಬದಲಾವಣೆಯ ಹಿಂದೆ ಡೀಲ್ ಕಾರುಬಾರು ಇದೆ ಎಂದು ಪವರ್ ಟಿವಿಯ ಪವರ್ಫುಲ್ ಸ್ಟಿಂಗ್ ಆಪರೇಶನ್ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್.
ರೈತರ ಹೋರಾಟ ನಿಲ್ಲಿಸಲು 3 ಸಾವಿರ ಕೋಟಿ ಡೀಲ್‌ ಪ್ರಸ್ತಾಪಿಸಿ ಕಳ್ಳ ನಾಯಕ ಭಾಗ-2 ಪವರ್‌ ಟಿವಿ ಸ್ಟಿಂಗ್‌ ಆಪರೇಷನ್ ಪ್ರಸಾರವಾಗಿತ್ತು. ಸ್ಟಿಂಗ್‌ ಪ್ರಸಾರವಾಗ್ತಿದ್ದಂತೆ ಬೆಂಗಳೂರಿನತ್ತ ರಾಷ್ಟ್ರೀಯ ನಾಯಕರು ದೌಡಾಯಿಸಿದ್ದಾರೆ. ಕನ್ನಡದ ಹೆಮ್ಮೆಯ ನ್ಯೂಸ್ ಚಾನೆಲ್​​​​ನ ಪವರ್​ಫುಲ್​ ವರದಿಗೆ ದಂಗಾಗಿದ್ದಾರೆ ದಿಲ್ಲಿ ನಾಯಕರು. ಹೀಗಾಗಿ, ಬೆಂಗಳೂರಿನಲ್ಲಿ ಮೇ 30ರಂದು ರಾಷ್ಟ್ರೀಯ ರೈತ ನಾಯಕರು ಸ್ಪಷ್ಟನೆ ನೀಡಲು ಬರ್ತಿದ್ದಾರೆ. ಆತ್ಮಾವಲೋಕನ ಸಭೆಯಲ್ಲಿ ರೈತ ನಾಯಕಿ ಕವಿತಾ ಕುರುಗಂಟಿ ಭಾಗವಹಿಸಲಿದ್ದಾರೆ.

ರಾಷ್ಟ್ರಾದ್ಯಂತ ಕಿಚ್ಚು ಹೊತ್ತಿಸಿರುವ ಪವರ್‌ಟಿವಿ ಪವರ್‌ಫುಲ್‌ ಸ್ಟಿಂಗ್‌ ಕಳ್ಳನಾಯಕನಿಗೆ ಎಲ್ಲೆಡೆ ಛೀಮಾರಿ ಹಾಕ್ತಿದ್ದಾರೆ. ರೈತರು ನೊಂದು ಪವರ್‌ ಟಿವಿಗೆ ಕರೆ ಮಾಡ್ತಿದ್ದಾರೆ. ಮನೆ ಮಠ ಬಿಟ್ಟು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೆಲಸವನ್ನು ಕಳೆದುಕೊಂಡು ಸಾರಿಗೆ ನೌಕರರು ಕಣ್ಣೀರಿಡುತ್ತಿದ್ದಾರೆ. ಡೀಲ್‌ಹಳ್ಳಿ ಶೇಖರ್‌ ಭ್ರಷ್ಟಾಚಾರದ ವಿರುದ್ಧ ಸಿಬಿಐ ತನಿಖೆ ನಡೆದು ತಕ್ಕ ಶಿಕ್ಷೆ ಆಗಲಿ ಅನ್ನೋದು ಕುಲಕೋಟಿ ಕನ್ನಡಿಗರ ಆಶಯ.

RELATED ARTICLES

Related Articles

TRENDING ARTICLES