Monday, December 23, 2024

ನನ್ನತ್ರ 1 ಕೋಟಿ ರೂ. ಮನೆಯಿಲ್ಲ ಕೋಡಿಹಳ್ಳಿದು 15 ಕೋಟಿ ರೂ. ಮನೆ : ಯತ್ನಾಳ್​

ವಿಜಯಪುರ : ನಾ ಮೊದಲೇ ಹೇಳಿದ್ದೆ, ಆ ಕಾರ್ಮಿಕ ಸಂಘಟನೆಯಲ್ಲಿ ಕೆಲಸ ಮಾಡುವವರೇ ಅದರ ಅಧ್ಯಕ್ಷರಾಗಬೇಕು ಎಂದು ವಿಜಯಪುರ ನಗರದಲ್ಲಿ ಶಾಸಕ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಪೋಲಿಸ್ ಕಲ್ಯಾಣ ಸಂಘದಲ್ಲಿ ಕೋಡಿಹಳ್ಳಿ ಚಂದ್ರಶೇಖರ ಅಥವಾ ಯಾವನೋ ಒಬ್ಬ ಹಾದಿಗೆ ಹೋಗುವವನ್ನು ಮಾಡಿದ್ರೆ ಹೇಗೆ‌.ಹಿಂದೆ ನಾನು ರಸ್ತೆ ಸಾರಿಗೆ ಸಂಸ್ಥೆಯವರನ್ನು ಬೈದಿದ್ದೆ. ನಿಮ್ಮಲ್ಲಿ ಯಾರೋ ಒಬ್ಬರು ಕಂಡಕ್ಟರ್, ಮೇಸ್ತ್ರೀ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕಿತ್ತು ಎಂದಿದ್ದೆ. ಇಂದು 35 ಕೋಟಿ ಹಣ ಪಡೆದ ವಿಚಾರ ಮಾದ್ಯಮದಲ್ಲಿ (ಪವರ ಟಿವಿಯಲ್ಲಿ) ಬರುತ್ತಿದೆ. ಇಂದು ಒಳ್ಳೆಯ ಕೆಲಸ ಮಾದ್ಯಮಗಳು ಮಾಡುತ್ತಿವೆ ಎಂದರು.

ಅದಲ್ಲದೇ, ಇಂತಹ ಡೋಂಗಿ, ಹಸಿರು ಟಾವಲ್ ಹಾಕಿಕೊಂಡು, ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂದು ನಾಟಕ ಮಾಡುತ್ತಾರೆ. ಇನ್ನು ಕೆಲವರು ಕನ್ನಡ ಉಳಿಸುತ್ತೇವೆ ಎಂದು ಹೋರಾಟ ಮಾಡಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮಾಡುತ್ತಾರೆ. ಇಂತವರಿಗೆ ಮಂತ್ಲಿ ಇದೆ. ಈಗ ನೀವು ಒಬ್ಬ ಕೋಡಿಹಳ್ಳಿ ಯನ್ನು ತೆಗೆದಿದ್ದೀರಿ. ವಾಟಾಳ ನಾಗರಾಜ್ ಕೂಡಾ 15 ವರ್ಷದಿಂದ ಒಂದು ಹೊಟೇಲ್ ನಲ್ಲಿ ಫಿಕ್ಸ್ ಆಗಿದ್ದಾನೆ. ಆ ಹೊಟೇಲ್ ಮಾಲೀಕನ ಪರಿಸ್ಥಿತಿ ಹೇಗೆ ಕೋಡಿಹಳ್ಳಿ ಚಂದ್ರಶೇಖರ ಮನೆ ನೋಡಿದಾಗಲೇ ನನಗೆ ಅನಿಸಿತ್ತು ಎಂದು ಹೇಳಿದರು.

ಇನ್ನು, ನಾನು 30 ವರ್ಷ, 5 ಸಲ ಗೆದ್ದು ಬಂದರೂ ಸಹಿತ ಬೆಂಗಳೂರಿನಲ್ಲಿ 1 ಕೋಟಿ ರುಪಾಯಿಯ ಮನೆ ಕಟ್ಟಲು ಆಗಲಿಲ್ಲ. ಆದರೆ ಆತನದ್ದು 10, 15 ಕೋಟಿ ಮೌಲ್ಯದ ಮನೆಯಲ್ಲಿದ್ದಾನೆ. ಹಿಂದೆ ಡಿಕೆ ಶಿವಕುಮಾರ್ ಜೊತೆ ಮಾಡಿದಂತಹ ವ್ಯವಹಾರ ಕೂಡಾ ತೆಗೆದಿದ್ದೀರಿ. ಇನ್ನು ರಾಜಕಾರಣಿಯದ್ದು ತಗಿಯಿರಿ. ಹತ್ತತ್ತು ಸಾವಿರ ಕೋಟಿ ಲೂಟಿ ಮಾಡಿದ ರಾಜಕಾರಣಿಗಳನ್ನು ಕರ್ನಾಟಕದ ಭವಿಷ್ಯದ ರಾಜಕಾರಣಿ ಎಂದು ಕರೆಯುವದನ್ನು ಬಿಡರಿ. ಪ್ರಾಮಾಣಿಕರನ್ನು ಸಜ್ಜನರನ್ನು ಮಾದ್ಯಮದಲ್ಲಿ ತೋರಿಸಿ ಎಂದ ಶಾಸಕ ಯತ್ನಾಳ್​ ಅಭಿಪ್ರಾಯ ಪಟ್ಟರು.

RELATED ARTICLES

Related Articles

TRENDING ARTICLES