Monday, December 23, 2024

ಗೆಳೆಯ ಅನಿಲ್​ಗಾಗಿ ರಾಕಿಭಾಯ್ ಓಪನ್ ಟಾಕ್..!

ಎಷ್ಟೇ ಬೆಳೆದ್ರೂ ತನ್ನವರನ್ನ ಬಿಟ್ಟುಕೊಡಲ್ಲ ರಾಕಿಭಾಯ್ ಯಶ್. ಸದ್ಯ ತನ್ನೊಟ್ಟಿಗೆ ಕೆಲಸ ಮಾಡಿದ ರೈಟರ್, ಆತ್ಮೀಯ ಗೆಳೆಯ ಅನಿಲ್​​ ಹೊಸ ಪ್ರಯೋಗಕ್ಕೆ ಸಾಥ್ ನೀಡಿದ್ದಾರೆ. ಸಿನಿಮಾ ಸಖತ್ ವರ್ಕೌಟ್ ಆಗಲಿದೆ ಅಂತ ಭವಿಷ್ಯ ನುಡಿದಿದ್ದಾರೆ. ಮಾನ್​ಸ್ಟರ್ ರಾಕಿ ಜೊತೆ ಕೆಜಿಎಫ್ ಕಲಾವಿದರು ಕೂಡ ಬೆನ್ನು ತಟ್ಟಿದ್ದಾರೆ.

  • ರಿಲೀಸ್​ಗೂ ಮೊದ್ಲೇ ಭವಿಷ್ಯ ನುಡಿದ ನ್ಯಾಷನಲ್ ಸ್ಟಾರ್
  • ಬ್ಯೂಟಿ ಆಶಿಕಾ ಜೊತೆ KGF ಕಲಾವಿದರಿಂದ ಮೆಚ್ಚುಗೆ
  • ಕಾಣೆಯಾದವ್ರ ಜೊತೆ ಯಶ್ ಮಾತು, ಹಾಡು, ಹರಟೆ

ಕಾಣೆಯಾದವ್ರ ಬಗ್ಗೆ ಪ್ರಕಟಣೆ.. ಈ ವಾರ ತೆರೆಗೆ ಬರ್ತಿರೋ ಸಿನಿಮಾ. ಮಿಗಿಲಾಗಿ ಇದರಲ್ಲಿ ಕೆಲಸ ಮಾಡಿದ ಬಹುತೇಕ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು, ಒಂದಿಲ್ಲಾ ಒಂದು ಸಿನಿಮಾದಲ್ಲಿ ಕೆಜಿಎಫ್ ರಾಕಿಭಾಯ್​ಗೆ ಕನೆಕ್ಟ್ ಆಗಿದ್ದಾರೆ. ಹಾಗಾಗಿಯೇ ಈ ಟೀಂ ಜೊತೆ ಯಶ್ ಮುಕ್ತವಾಗಿ ಮಾತನಾಡಿ, ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಗೆದ್ದೇ ಗೆಲ್ಲುತ್ತೆ ಅಂತ ಭವಿಷ್ಯ ಕೂಡ ನುಡಿದಿದ್ದಾರೆ.

ಯೆಸ್.. ನೀವು ನೋಡ್ತಿರೋ ಈ ಫೋಟೋಸ್, ಕೆಜಿಎಫ್ ಚಾಪ್ಟರ್- 2 ಶೂಟಿಂಗ್ ಸಮಯದಲ್ಲಿ ಕ್ಲಿಕ್ಕಿಸಲಾಗಿದೆ. ಕಾಣೆಯಾದವ್ರ ಬಗ್ಗೆ ಪ್ರಕಟಣೆ ಸಿನಿಮಾ ಹಾಗೂ ಕೆಜಿಎಫ್ ಅಕ್ಕಪಕ್ಕದಲ್ಲಿ ಚಿತ್ರಿತವಾಗ್ತಿತ್ತು. ಆಗ ಖುದ್ದು ಯಶ್ ಅವ್ರೇ ನಿರ್ದೇಶಕ ಅನಿಲ್​ರನ್ನ ಕರೆಸಿಕೊಂಡು ಸಿನಿಮಾದ ಕಥೆ ಮೊದಲೇ ಕೇಳಿದ್ದರಿಂದ ಒಳ್ಳೆಯದಾಗಲಿದೆ ಎಂದಿದ್ದರಂತೆ. ಅದನ್ನ ಅನಿಲ್ ಅವ್ರು ಚಿಕ್ಕಣ್ಣ ಜೊತೆಗಿನ ಮಾತುಕತೆಯಲ್ಲಿ ರಿವೀಲ್ ಮಾಡಿದ್ರು.

ಆರ್ಮುಗಂ ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಚಿಕ್ಕಣ್ಣ ಹೀಗೆ ಎಲ್ಲಾ ಕಲಾವಿದರು ಯಶ್​ಗೆ ಆಪ್ತರೇ. ಅಷ್ಟೇ ಯಾಕೆ ನಿರ್ದೇಶಕ ಅನಿಲ್ ರಾಕಿಭಾಯ್​ರ ಅಚ್ಚುಮೆಚ್ಚಿನ ರೈಟರ್. ಈ ಹಿಂದೆ ಮಾಸ್ಟರ್​ಪೀಸ್ ಹಾಗೂ ಸಂತು ಸ್ಟ್ರೈಟ್ ಫಾರ್ವರ್ಡ್​ ಚಿತ್ರಗಳಿಗೂ ಅನಿಲ್ ಕೆಲಸ ಮಾಡಿದ್ರು. ಮತ್ತೆ ಕಿರಾತಕ ಸಿನಿಮಾನ ಯಶ್ ಜೊತೆ ಮಾಡೋಕೆ ಮುಂದಾಗಿದ್ದ ಅನಿಲ್​​ಗೆ ಕಾರಣಾಂತರಗಳಿಂದ ಆ ಚಿತ್ರ ಆರಂಭದಲ್ಲೇ ನಿಂತು ಹೋಯ್ತು.

ರಾಕಿಭಾಯ್ ಯಶ್ ಜೊತೆ ಕೆಜಿಎಫ್ ಕಲಾವಿದರು ಕೂಡ ಸಿನಿಮಾಗೆ ಬೆಸ್ಟ್ ವಿಶಸ್ ಹೇಳಿದ್ದಾರೆ. ಗರುಡ ರಾಮ್ ಹಾಗೂ ಆಂಡ್ರೂಸ್ ಅವಿನಾಶ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಇನ್ನು ಆಶಿಕಾ ರಂಗನಾಥ್ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡೋ ಮೂಲಕ ಸಿನಿಮಾದ ಗ್ಲಾಮರ್ ಹೆಚ್ಚಿಸಿದ್ದಾರೆ. ಶೂಟಿಂಗ್ ವೇಳೆಯ ಅಭೂತಪೂರ್ವ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ.

ಒಟ್ಟಾರೆ ಕಂಟೆಂಟ್ ಬೇಸ್ಡ್ ಸಿನಿಮಾಗಳನ್ನ ಕನ್ನಡ ಸಿನಿಪ್ರಿಯರು ಎಂದೂ ಕೈಬಿಟ್ಟಿಲ್ಲ. ಈ ಸಿನಿಮಾನ ಸಹ ಗೆಲ್ಲಿಸ್ತಾರೆ ಅನ್ನೋ ಭರವಸೆಯಲ್ಲಿ ಶುಕ್ರವಾರದಿಂದ ಥಿಯೇಟರ್ ಅಂಗಳಕ್ಕೆ ಬರ್ತಿದ್ದಾರೆ ಕಾಣೆಯಾದವ್ರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES