Sunday, November 24, 2024

40 ಸೆಟ್​.. 80 ಕೋಣ.. 400 ಮಂದಿ .. ದೇಸಿ ಕಂಬಳ

ಇಂಟರ್​​ನ್ಯಾಷನಲ್​​ ಲೆವೆಲ್​​ನಲ್ಲಿ ಕನ್ನಡ ಮಣ್ಣಿನ ದೇಸಿ ಕ್ರೀಡೆ, ಜಾನಪದ ಕಂಬಳ ಸೌಂಡ್ ಮಾಡಲಿದೆ. ಅಪ್ಪಟ ಕರಾವಳಿ ಗಂಡು ಕಲೆಯ ಜಬರ್ದಸ್ತ್​​ ಸ್ಟೋರಿ ಇದಾಗಿದೆ. ತುಳುನಾಡಿನ ಸಂಸ್ಕೃತಿಯ ಗತ್ತು ಚೀನಾ, ರಷ್ಯಾ, ದುಬೈಗೂ ಗೊತ್ತಾಗಲಿದೆ. ಯೆಸ್​​.. ಮೋದಿಗೂ ಮುಟ್ಟಲಿರೋ ಈ ಪ್ಯಾನ್ ಇಂಡಿಯಾ ಮೂವಿಯ ಗೈರತ್ತು ಇಲ್ಲಿದೆ.

  • ಪ್ರಧಾನಿ ಮೋದಿ ನೋಡಲೇಬೇಕಾದ ಸಿನಿಮಾ ಇದು..!

ನೀವೀಗ ನಾವು ಹೇಳೋಕೆ ಹೊರಟಿರೋ ಸ್ಟೋರಿಯನ್ನು ಕಿವಿಯರಳಸಿ ಕೇಳ್ಬೇಕು. ಕಣ್ಣರಳಿಸಿ ನೋಡ್ಬೇಕು. ನೇವೆಲ್ಲಾ ಖಂಡಿತ ಶಾಕ್​​ ಆಗ್ತೀರಾ. ಅರೇ ಕನ್ನಡ ಸಿನಿಮಾಗಳು ಹೋಗ್ತಾ ಇರೋ ಸ್ಪೀಡ್​​ ನೋಡಿದ್ರೆ ಒಂದು ಕ್ಷಣ ಬೆಚ್ಚಿ ಬೆರಗಾಗ್ತೀರಾ. ಬುಲೆಟ್​​ ಟ್ರೈನ್​ಗಿಂತ ಸ್ಪೀಡ್​​ ಆಗಿ, ವಿಶ್ವ ಸಿನಿದುನಿಯಾದ ಹುಬ್ಬೇರಿಸೋದ್ರ ಜೊತೆಗೆ ಸಂದೇಶ ಸಾರೋ ಸಿನಿಮಾ ಬರ್ತಿದೆ. ದೇಸಿ ಕ್ರೀಡೆ ಕಂಬಳದ ರೋಚಕ ಕಥೆ ಇದು.  ಇದರಲ್ಲಿ ಅಂತಾ ಸ್ಪೆಷಲ್​ ಏನಿದೆ ಅನ್ಕೋಬೇಡಿ. ಕಹಾನಿ  ಮೇ ಟ್ವಿಸ್ಟ್​​ ಇಲ್ಲೇ ಇರೋದು. ಈ ಸಿನಿಮಾ ಚಿತ್ರರಂಗದಲ್ಲಿ ಹೊಸ ಬೆಂಚ್​ ಮಾರ್ಕ್​ ಕ್ರಿಯೇಟ್​ ಮಾಡಲಿದೆ.

ಸಿಂಹದಮರಿ ಸೈನ್ಯ, ಮುತ್ತಿನ ಹಾರ, ಬಂಧನ ಹೀಗೆ ಮರೆಯಲಾಗದ ಸಿನಿಮಾಗಳನ್ನ ಕಟ್ಟಿಕೊಟ್ಟಂತಹ ನಿರ್ದೇಶಕ ಎಸ್.​​ವಿ. ರಾಜೇಂದ್ರಸಿಂಗ್​ ಬಾಬು, ನ್ಯಾಷನಲ್​​ ಲೆವೆಲ್​​ ಸಬ್ಜೆಕ್ಟ್​ಗೆ ಕೈಹಾಕಿದ್ದಾರೆ. ವೀರ ಕಂಬಳ ಸಿನಿಮಾ ಈಗಾಗ್ಲೇ ಸೆಟ್ಟೇರಿದ್ದು, ಸೆಪ್ಟೆಂಬರ್​ ವೇಳೆಗೆ ನಿಮನ್ನೆಲ್ಲಾ ಮಂತ್ರಮುಗ್ಧಗೊಳಿಸೋಕೆ ಬರ್ತಿದೆ. ಈ ಸಿನಿಮಾ ನೋಡಿ ರಷ್ಯಾ, ಫ್ರಾನ್ಸ್​, ದುಬೈ, ಅಮೇರಿಕಾ ದೇಶಗಳು ನಮ್ಮ ಕರುನಾಡನ್ನ ಹುಡಕಿ ಬರಲಿದ್ದಾರಂತೆ. ಕಂಬಳ ಕ್ರೀಡೆಯ ತಾಕತ್ತನ್ನು ಹಾಲಿವುಡ್​ ರೇಂಜ್​​ಗೆ ಹೇಳೋಕೆ ಹೊರಟಿದೆ ಚಿತ್ರತಂಡ.

ತುಳುನಾಡಿನ ದೇಸಿ ಪ್ರತಿಭೆ, ಕನ್ನಡದ ಹುಸೇನ್​​ ಬೋಲ್ಟ್​​ ಶ್ರೀನಿವಾಸಗೌಡ ಈ ಸಿನಿಮಾದಲ್ಲಿ ರಿಯಲ್​ ಹೀರೋ ಆಗಿ ಮಿಂಚಿದ್ದಾರೆ. ಸಿಕ್ಸ್​​ ಪ್ಯಾಕ್​​ ಧೀರ ಕೋಣಗಳನ್ನ ಪಳಗಿಸಿ, ಸಿಲ್ವರ್​ ಸ್ಕ್ರೀನ್​ ಮೇಲೆ ಧೂಳೆಬ್ಬಿಸ್ತಾರಂತೆ. ಜೊತೆಗೆ ಡೆಡ್ಲಿ ಆದಿತ್ಯನ ಗ್ಯಾಂಗ್​ಸ್ಟಾರ್ ಲುಕ್​ ನೋಡಿ, ಒಂದು ಕ್ಷಣ ಅವಕ್ಕಾಗಿ ಹೋಗ್ತಾರಂತೆ. ಥ್ರಿಲ್ಲರ್​ ಸಿನಿಮಾಗಳಲ್ಲಿ ಮಿಂಚ್ತಿದ್ದ ರಾಧಿಕಾ ನಾರಾಯಣ್,​​ ಕಮೀಷನರ್​​ ಆಗಿ ರೂಲ್​ ಮಾಡಲಿದ್ದಾರೆ. ಪ್ರತಿ ನಿತ್ಯ 40 ರಿಂದ 50 ಸೆಟ್​​ಗಳು, 80 ರಿಂದ 100 ಕೋಣಗಳು, ಸಾವಿರಾರು ಕಲಾವಿದರ ಸಮ್ಮುಖದಲ್ಲಿ ಕೆಜಿಎಫ್ ಲೆವೆಲ್​ನಲ್ಲಿ ಸಿನಿಮಾ ಮಾಡ್ತಿದ್ದಾರೆ.

ಈ ಸಿನಿಮಾ ಚಿತ್ರರಸಿಕರಿಗೆ ವ್ಹಾವ್​ ಫೀಲ್​ ಕೊಡೋದಂತೂ ಪಕ್ಕಾ ಆಗಿದೆ. ಪ್ರಧಾನಿಗೂ ಈ ಸಿನಿಮಾ ತೋರಿಸೋ ಪ್ಲ್ಯಾನ್​ ಮಾಡಿಕೊಂಡಿದೆ ಚಿತ್ರತಂಡ.  ಪ್ರಕಾಶ್​ ರಾಜ್​​ ಗೆಸ್ಟ್​​ ಅಪಿಯರೆನ್ಸ್​​ ಕೂಡ ಚಿತ್ರಕ್ಕಿದೆ. ಸಿಂಗರ್​ ಮಂಗ್ಲಿಯ ಕಂಠ ಬೀಳಲಿದೆ. ಕಂಬಳ ಕ್ರೀಡೆಯನ್ನ ನ್ಯಾಚುರಲ್​​ ಆಗಿ ತೋರಿಸೋಕೆ ಭಾರೀ ಮೊತ್ತದ ಸ್ಪೆಷಲ್​​ ಲೆನ್ಸ್​ ತರಿಸಿ, ಕ್ಯಾಮೆರಾಗೆ ಅಳವಡಿಸಲಾಗಿದೆ. ಅರುಣ್​ ರೈ  ತೋಡಾರ್​  ಚಿತ್ರಕ್ಕಾಗಿ ಕೋಟಿ ಕೋಟಿ ಹಣವನ್ನು ನೀರಿನಂತೆ ಸುರಿದಿದ್ದಾರೆ. ಎಲ್ಲೂ ಕಾಂಪ್ರಮೈಸ್​ ಆಗದೆ, ಹಾಲಿವುಡ್ ಸಿನಿಮಾ​​ ರೇಂಜ್​ಗೆ ವೀರ ಕಂಬಳ ಮೂಡಿ ಬರ್ತಿದೆ. ಮಣಿಕಾಂತ್​ ಕದ್ರಿ ಸಂಗೀತ. ವಿಜಯ್​​ಕುಮಾರ್​​ ಕೊಡಿಯಾಲ್​ಬೈಲ್​ ಸಂಭಾಷಣೆ ಇದೆ. ಒಟ್ನಲ್ಲಿ ಕಂಬಳದ ಕ್ರೇಜ್​​ ಕಣ್ಣಿಗೆ ರಾಚುವಂತೆ ಸೆಪ್ಟಂಬರ್​ ವೇಳೆಗೆ ನಿಮ್ಮೆದುರು ಬರಲಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES