ಬೆಂಗಳೂರು: ತೆಲಂಗಾಣಕ್ಕೆ ಪ್ರಧಾನಿ ಮೋದಿ ಬಂದಿದ್ರು. ಮೋದಿ ಬರೋದಕ್ಕೂ ಮುನ್ನವೇ ಪ್ರೋಟೊಕಾಲ್ನಂತೆ ಪ್ರಧಾನಿಯನ್ನ ರಿಸೀವ್ ಮಾಡದೇ ಕೆಸಿಆರ್ ದೇವೇಗೌಡರ ಭೇಟಿಗೆ ಬಂದಿದ್ರು. ಬಿಜೆಪಿ ವಿರುದ್ಧ ಪರ್ಯಾಯ ಶಕ್ತಿ ಅಗತ್ಯ ಅಂತ ಬಿಜೆಪಿ ವಿರುದ್ಧ ಕಿಡಿ ಕಾರುತ್ತಲೇ ಬರುತ್ತಿರೋ ಕೆ.ಸಿ.ಚಂದ್ರಶೇಖರ್ ರಾವ್, ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ದೇವೇಗೌಡರ ಮನೆಗೆ ಆಗಮಿಸಿದ ತೆಲಂಗಾಣ ಸಿಎಂ ಅವರನ್ನು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಸ್ವಾಗತಿಸಿದರು. ಹಾಗೇ ದೇವೇಗೌಡರ ಜೊತೆ ಕೆಸಿಆರ್ ಮೂರುಗಂಟೆಗಳ ಕಾಲ ಮಾತುಕಥೆ ನಡೆಸಿದ್ರು.
ಬಿಜೆಪಿ, ಮೋದಿ ಅಂದ್ರೆ ಸಿಡಿಮಿಡಿ ಅನ್ನುತ್ತಿರೋ ಕೆ.ಚಂದ್ರಶೇಖರ್ ರಾವ್ ಪರ್ಯಾಯ ಶಕ್ತಿಯ ಪ್ರಯತ್ನದಲ್ಲಿದ್ದಾರೆ. ಆಪ್ ಮುಖ್ಯಸ್ಥ ಆರವಿಂದ ಕೇಜ್ರಿವಾಲ್, ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಸೇರಿ ಹಲವು ನಾಯಕರೊಂದಿಗೆ ಒಂದು ಸುತ್ತಿನ ಮಾತುಕಥೆಯಾಗಿದ್ದು, ಬಿಜೆಪಿ ವಿರುದ್ದ ಹೋರಾಡಲು ಪರ್ಯಾಯ ಶಕ್ತಿ ಅಗತ್ಯ ಎಂಬ ನಿರ್ಧಾರಕ್ಕೆ ಬರಲಾಗಿದೆ. ಹಾಗೇ ಸಭೆಯಲ್ಲಿ ಮೊದಲಿಗೆ ಬೆಲೆ ಏರಿಕೆ ಸೇರಿದಂತೆ ಹಲವು ವಿದ್ಯಮಾನದ ಕುರಿತು ಚರ್ಚೆಯಾಗಿದೆ. ಹಾಗೇ ರಾಜ್ಯದಲ್ಲಿನ ಪರಿಸ್ಥಿತಿ ಬಗೆಗೂ ಕೆಸಿಆರ್‌ಗೆ ಎಚ್.ಡಿ.ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಅಲ್ಲದೇ ವಿಧಾನಸಭಾ ಚುನಾವಣಾ ಹತ್ತಿರ ಬರ್ತಿದೆ. ಹೀಗಾಗಿ ಪರ್ಯಾಯ ವ್ಯವಸ್ಥೆ, ಸ್ವರೂಪ, ನಾಯಕತ್ವ, ಕಾರ್ಯಸೂಚಿ ಬಗ್ಗೆ ಇನ್ನೊಂದು ಸಭೆ ಮಾಡಿ ನಿರ್ಧಾರ ಮಾಡಲು ತೀರ್ಮಾನಿಸಲಾಗಿದೆ. ಹಾಗೇ ದಸರಾ ಸಮಯದಲ್ಲಿ ನಿರ್ಧಾರ ಹೊರಬೀಳಬೇಕು. ಹೀಗಾಗಿ ಪರ್ಯಾಯ ಶಕ್ತಿಗೆ ಬಲ ತುಂಬಲು ದೇವೇಗೌಡರು ಕೆಲ ರಾಜ್ಯಗಳ ನಾಯಕರೊಂದಿಗೆ ಮಾತನಾಡಲು ಒಪ್ಪಿಕೊಂಡಿದ್ದಾರೆ. ಅಲ್ಲದೇ ಕೆಸಿಆರ್ ಕೂಡ ಕೆಲ ನಾಯಕರ ಜೊತೆ ಮಾತಾಡೋದಾಗಿ ಹೇಳಿದ್ದಾರೆ.
ಇನ್ನು, ದೇಶದ ಸಮಸ್ಯೆ ನಿವಾರಣೆಯಾಗಬೇಕಾದ್ರೆ ಬದಲಾವಣೆ ಅಗತ್ಯ. ಹೀಗಾಗಿ ಭಾರತ ಬದಲಿಸುವ ಪ್ರಯತ್ನ ಆಗುತ್ತಿದೆ ಅಂತ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ. ಪರ್ಯಾಯ ವ್ಯವಸ್ತೆ ನಿರ್ಮಾಣದ ಬಗ್ಗೆ ಪ್ರಾದೇಶಿಕ ಮುಖಂಡರ ಜೊತೆ ಚರ್ಚೆ ಮಾಡ್ತಿದ್ದಾರೆ. ಎರಡ್ಮೂರು ತಿಂಗಳಲ್ಲಿ ಪೈನಲ್ ಟಚ್ ಜೊತೆ ಉತ್ತಮ ನಿರ್ಧಾರ ಹೊರಬೀಳಲಿದೆ ಎಂದು ಎಚ್‌ಡಿಕೆ ಹೇಳಿದ್ದಾರೆ
ಇದು ತೃತಿಯ ರಂಗ ಅಲ್ಲ ಅನ್ನೋದ್ರ ಮೂಲಕ ಬಿಜೆಪಿ ವಿರುದ್ದದ ಶಕ್ತಿ ಅಂತ ಸಭೆ ಮೂಲಕ ಮುಖಂಡರು ಸಂದೇಶ ರವಾನಿಸಿದ್ದಾರೆ. ಇದು ಈ ಪರ್ಯಾಯ ವ್ಯವಸ್ಥೆ ಕಾಂಗ್ರೆಸ್‌ನ್ನು ಕೂಡ ಒಳಗೊಳ್ಳಲಿದೆಯಾ ಅನ್ನೋದು ಇನ್ನು ಸ್ಪಷ್ಟ ಆಗಿಲ್ಲ. ರಾಷ್ಟ್ರಪತಿ ಚುನಾವಣೆಯ ಬಗೆಗೂ ಚರ್ಚೆಯಾಗಿದ್ದು ಮುಂದೆ ಈ ಶಕ್ತಿ ಹೇಗೆ ಕಾಣಿಸಿಕೊಳ್ಳಲಿದೆ ಅನ್ನೋದನ್ನ ನೋಡಬೇಕಿದೆ.