Monday, December 23, 2024

ಭಾರತ ಎತ್ತರಕ್ಕೆ ಬೆಳೆಯಲು ಮೋದಿ ಕಾರಣ : ನಳಿನ್​ ಕುಮಾರ್ ಕಟೀಲ್​

ಧಾರವಾಡ : ನಮ್ಮಲ್ಲಿ ಯಾವುದೆ ಅಸಮಾಧಾನವಿಲ್ಲ, ನಮ್ಮ ಪಕ್ಷದ ನಿರ್ದಾರಕ್ಕೆ ಎಲ್ಲರೂ ಒಪ್ಪಿಕ್ಕೊಳ್ಳುತ್ತಾರೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ನಳಿನ್​ ಕುಮಾರ್ ಕಟೀಲ್​ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಮೂರು ಕಡೆ ನಾಮಪತ್ರ ಸಲ್ಲಿಸಲಿಕ್ಕೆ ಬಂದಿದ್ದೆನೆ, ಹನುಮಂತ ನಿರಾಣಿ, ಅರುಣ ಶಾಹಪೂರ ನಾಮಪತ್ರ ಸಲ್ಲಿಸಿದ್ದಾರೆ ಅಲ್ಲೂ ಭಾಗಿಯಾಗಿದ್ದೆ, ಧಾರವಾಡದಲ್ಲಿ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಸಿದ್ದಾರೆ, ಅವರು ಬಿಜೆಪಿ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ, ಈ ಭಾರಿ ನಾಲ್ಕು ಕ್ಷೆತ್ರಗಳಲ್ಲಿ ಬಿಜೆಪಿ ಗೆಲುವು ಪಕ್ಕಾ ಆಗಿದೆ ಎಂದರು.

ಅದಲ್ಲದೇ. ಮೈಸೂರು, ಬೆಳಗಾವಿ, ಧಾರವಾಡದಲ್ಲಿ ಒಳ್ಳೆಯ ವಾತಾವರಣ ಇದೆ ನಾಯಕರ ಸಭೆ ಕರೆಯಲಾಗಿದೆ ಸಭೆಯಲ್ಲಿ ಕಾರ್ಯತಂತ್ರ ದ ಬಗ್ಗೆ ಚರ್ಚೆ ಮಾಡಲಾಗುವುದು, ಮೋದಿ ಸರಕಾರಕ್ಕೆ 8 ವರ್ಷ ಹಿನ್ನಲೆ,ಜಗತ್ತಿನಲ್ಲಿ ಭಾರತಕ್ಕೆ ಹೆಚ್ಚು ಗೌರವವಿದೆ, ಪ್ರಧಾನಿ ಮೋದಿ ಅವರ ಆಡಳಿತವನ್ನ ಎಲ್ಲ ದೇಶಗಳು ನೋಡುತ್ತಿವೆ, ಭಾರತ ಎತ್ತರಕ್ಕೆ ಬೆಳೆಯಲೂ ಮೋದಿ ಕಾರಣ ಎಂದು ಹೇಳಿದರು.

ಮಸೀದಿಗಳ ವಿವಾದ ವಿಚಾರವಾಗಿ ಮಾತನಾಡಿದ ಅವರು, ಸಾರ್ವಜನಿಕ ವಿಚಾರಗಳಾಗಿವೆ,ಚರ್ಚೆ ಆಗ್ತಾ ಇದೆ, ನ್ಯಾಯಾಲಯದಲ್ಲಿದೆ ಕೋರ್ಟ ತಿರ್ಮಾನ ಮಾಡುತ್ತದೆ. ನಮ್ಮಲ್ಲಿ ಯಾವುದೆ ಅಸಮಾಧಾನವಿಲ್ಲ, ನಮ್ಮ ಪಕ್ಷದ ನಿರ್ದಾರಕ್ಕೆ ಎಲ್ಲರೂ ಒಪ್ಪಿಕ್ಕೊಳ್ಳುತ್ತಾರೆ, ಸದ್ಯ ವಿಧಾನ ಪರಿಷ್ಯತ್ ಚುಣಾವಣೆ ಇದನ್ನ ಗೆಲ್ಲಬೇಕು ಅದೆ ನಮ್ಮ ಗುರಿಯಾಗಿದೆ ಎಂದು ಧಾರವಾಡದಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಹೇಳಿದರು.

RELATED ARTICLES

Related Articles

TRENDING ARTICLES