Monday, December 23, 2024

8 ದಿನ ಡೆಡ್​ಲೈನ್.. KGF 3/ ನರ್ತನ್ ಪ್ರಾಜೆಕ್ಟ್..?

ಕೆಜಿಎಫ್ ಚಾಪ್ಟರ್ ಒನ್ ಸಕ್ಸಸ್ ಬಳಿಕ ಯಶ್ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗಿದ್ರು. ಮತ್ತೆ ಕಿರಾತಕ ಚಿತ್ರದ ಶೂಟಿಂಗ್ ಶುರುವಾಗಿ, ನಿಂತೇ ಹೋಗಿತ್ತು. ಇದೀಗ ಚಾಪ್ಟರ್-2 ಬಳಿಕ ಮಗದೊಮ್ಮೆ ಕನ್ಫ್ಯೂಶನ್​ನಲ್ಲಿದ್ದಾರೆ ಮಾಸ್ಟರ್​ಪೀಸ್. ಹಾಗಾದ್ರೆ ಕೆಜಿಎಫ್ ಚಾಪ್ಟರ್-3 ಶುರುವಾಗುತ್ತಾ ಅಥ್ವಾ ನರ್ತನ್ ಪ್ರಾಜೆಕ್ಟ್ ಓಕೆ ಆಗುತ್ತಾ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ಯಶ್- ನರ್ತನ್ ಚಿತ್ರಕ್ಕೆ ಫಿಕ್ಸ್ ಆಗಿಲ್ಲ ಮುಹೂರ್ತ
  • ಅಂದು ಚಾಪ್ಟರ್-1 ಬಳಿಕ ರಾಕಿಗೆ ಇದೇ ಕನ್ಫ್ಯೂಶನ್
  • ಮಾನ್​ಸ್ಟರ್ ಟೆಕ್ನಿಷಿಯನ್ಸ್ ಮಾಸ್ಟರ್​ಪ್ಲಾನ್ ಏನು..?

ಕನ್ಫ್ಯೂಶನ್.. ಕನ್ಫ್ಯೂಶನ್.. ಕನ್ಫ್ಯೂಶನ್. ಯಶ್ ಅವಾಯ್ಡ್ ಇಟ್. ಬಟ್ ಕನ್ಫ್ಯೂಶನ್ ಲೈಕ್ಸ್ ಹಿಮ್. ಹಿ ಕಾಂಟ್ ಅವಾಯ್ಡ್. ಯೆಸ್.. ಇದು ಕೆಜಿಎಫ್ ಡೈಲಾಗ್ ಸ್ಟೈಲ್​ನಲ್ಲೇ ಹೇಳಬಹುದಾದ ಯಶ್ ಸದ್ಯದ ಪರಿಸ್ಥಿತಿ. ಕೆಜಿಎಫ್ ಚಾಪ್ಟರ್-2ಗೆ ವಿಶ್ವದಾದ್ಯಂತ ನಿರೀಕ್ಷೆಗೂ ಮೀರಿದ ಮನ್ನಣೆ ಸಿಕ್ಕಿತು. ರಾಕಿಭಾಯ್ ಗತ್ತು ಇಡೀ ವಿಶ್ವಕ್ಕೆ ಗೊತ್ತಾಗುವಂತಾಯ್ತು.

ಉಸಿರಾಡೋ ಗಾಳಿ, ತಿನ್ನೋ ಅನ್ನ, ಕಾಣೋ ಕನಸು ಎಲ್ಲವೂ ಸಿನಿಮಾನೇ ಆಗಿದ್ದಾಗ ಅದ್ರ ಪ್ರತಿಫಲ ಹೇಗಿರುತ್ತೆ ಅನ್ನೋದಕ್ಕೆ ಕೆಜಿಎಫ್ ಸಕ್ಸಸ್ ಪ್ರತ್ಯಕ್ಷ ಸಾಕ್ಷಿ. ವಿಶ್ವದಾದ್ಯಂತ 1500 ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್, ಬಾಲಿವುಡ್ ಒಂದರಲ್ಲೇ 500 ಕೋಟಿ ದಾಖಲೆ ಗಳಿಕೆ ಆದ ಬಳಿಕ, ಒಟಿಟಿಗೆ ರೆಂಟ್ ಆಫರ್​ನಲ್ಲಿ ರಾಕಿಭಾಯ್ ಕಾಲಿಟ್ಟರು. ಆಲ್ಮೋಸ್ಟ್ ಆಲ್ ಎಲ್ಲರಿಗೂ ಕೆಜಿಎಫ್​ನ ರಕ್ತಸಿಕ್ತ ಕಥೆ ತಲುಪಿದೆ. ಸಾಲದು ಅಂತ ಕ್ಲೈಮ್ಯಾಕ್ಸ್​ನಲ್ಲಿರೋ ಟ್ವಿಸ್ಟ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಸದ್ಯ ಯಶ್ ಕೆಜಿಎಫ್- 3 ಮಾಡ್ತಾರೆ. ಎಲ್ ಡೊರಾಡೋ ಕಥೆ ಇನ್ನೂ ಮುಗಿದಿಲ್ಲ ಅನ್ನೋದು ಒಂದು ಕಡೆ ಸುದ್ದಿಯಾದ್ರೆ, ಎರಡ್ಮೂರು ವರ್ಷದಿಂದ ಡೇಟ್ಸ್ ಪಡೆದು, ಕಾಯ್ತಾ ಕೂತಿರೋ ಮಫ್ತಿ ಡೈರೆಕ್ಟರ್ ನರ್ತನ್ ಪ್ರಾಜೆಕ್ಟ್ ಕೂಡ ಸೆಟ್ಟೇರಲಿದೆ ಅನ್ನೋದು ಮತ್ತೊಂದು ವದಂತಿ. ಹೌದು.. ನರ್ತನ್ ವೆಂಚರ್​​ಗೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟು ಬಹಳ ದಿನಗಳೇ ಆಗಿತ್ತು. ನೇವಿ ಆಫೀಸರ್ ಆಗಿ ಯಶ್ ಕಾಣಸಿಗಲಿದ್ದಾರೆ ಅಂತ ಎಲ್ಲೆಡೆ ಕೇಳಿಬಂದಿತ್ತು. ಆದ್ರೆ ಚಾಪ್ಟರ್-2 ಸಕ್ಸಸ್ ರಾಕಿಭಾಯ್​ನ ಮಗದೊಮ್ಮೆ ಕನ್ಫ್ಯೂಸ್ ಮಾಡಿದೆ.

ಮೊದಲ ಭಾಗ ಹಿಟ್ ಆದ ಬಳಿಕ ಹೇರ್ ಕಟ್ ಮಾಡಿಸಿ, ಮತ್ತೆ ಕಿರಾತಕ ಸಿನಿಮಾನ ನಿರ್ದೇಶಕ ಅನಿಲ್ ಹಾಗೂ ನಿರ್ಮಾಪಕ ಜಯಣ್ಣ ಜೊತೆ ಶುರು ಮಾಡಿದ್ರು ಯಶ್. ಆದ್ರೆ ಕೆಜಿಎಫ್-2 ಮಾಡೋ ಉದ್ದೇಶದಿಂದ ಅದನ್ನ ಅಲ್ಲಿಗೇ ಕೈಬಿಡಲಾಯ್ತು. ಇದೀಗ ಕೆಜಿಎಫ್-3 ಮೇಲಿನ ಎಕ್ಸ್​ಪೆಕ್ಟೇಷನ್ಸ್ ನರ್ತನ್ ಸಿನಿಮಾ ಮತ್ತಷ್ಟು ವಿಳಂಭವಾದ್ರೂ ಅಚ್ಚರಿಯಿಲ್ಲ. ಆದ್ರೆ ಯಶ್ ಮಾತ್ರ 8 ದಿನ ಟೈಂ ಕೇಳಿದ್ದು, ಅಷ್ಟರಲ್ಲಿ ಕೆಜಿಎಫ್-3 ಅಥ್ವಾ ನರ್ತನ್ ಸಿನಿಮಾ ಅನ್ನೋದ್ರ ಕ್ಲ್ಯಾರಿಟಿ ಸಿಗಲಿದೆ. ಮುಂದಿನ ತಿಂಗಳು ನರ್ತನ್ ಚಿತ್ರದ ಮುಹೂರ್ತ ಅನ್ನೋದೆಲ್ಲಾ ಅಂತೆ ಕಂತೆ ಅನ್ನೋದು ಫಿಲ್ಮಿ ಪವರ್​ಗೆ ಖಾತರಿ ಆಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES