ಮಂಗಳೂರು : ಎರಡು ತಿಂಗಳು ಕೋರ್ಟ್ ಆದೇಶ ಉಲ್ಲಂಘಿಸಿದ ಆಡಳಿತ ಮಂಡಳಿ ವಿರುದ್ಧ ಕ್ರಮ ಆಗಬೇಕು ಎಂದು ಯೂನಿವರ್ಸಿಟಿ ರಿಜಿಸ್ಟರ್ ಕಿಶೋರ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಯೂನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರತಿಭಟನೆ ಸ್ಥಳಕ್ಕೆ ಯೂನಿವರ್ಸಿಟಿ ರಿಜಿಸ್ಟರ್ ಕಿಶೋರ್ ಕುಮಾರ್ ಭೇಟಿ ನೀಡಿದ್ದು, ಕಾಲೇಜಿನ ನಿಯಮ ಸರಿಪಡಿಸುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.
ಅದಲ್ಲದೇ, ಕಾಲೇಜಿನಲ್ಲಿ ಕಡ್ಡಾಯವಾಗಿ ಹಿಜಾಬ್ ನಿಯಮ ತರಬೇಕು. ಎರಡು ತಿಂಗಳು ಕೋರ್ಟ್ ಆದೇಶ ಉಲ್ಲಂಘಿಸಿದ ಆಡಳಿತ ಮಂಡಳಿ ವಿರುದ್ಧ ಕ್ರಮ ಆಗಬೇಕು. ವಿದ್ಯಾರ್ಥಿ ನಾಯಕನ್ನ ಕೂಡಲೇ ಬದಲಿಸಬೇಕು. ಈ ಕಾಲೇಜನ್ನು ಜೆಎನ್ಯು ಆಗಿ ಪರಿವರ್ತಿಸುವ ಶಂಕೆ ಇದೆ. ಕಮೂನಿಷ್ಟ್ ಶಕ್ತಿಗಳು ಇದರಿಂದ ಸಕ್ರಿಯವಾಗಿವೆ. ಕೆಲ ಪ್ರಾಧ್ಯಾಪಕರು ಇದಕ್ಕೆ ಕೈ ಜೋಡಿಸಿದ್ದಾರೆ. ಅಂತಹ ಪ್ರಾಧ್ಯಾಪಕರ ವಿರುದ್ಧ ಶೀಘ್ರವಾಗಿ ಕ್ರಮವಾಗಲಿ ಎಂದರು.
ಇನ್ನು, ರಿಜಿಸ್ಟರ್ಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು ಸಭೆ ಬಳಿಕ ಸಮಸ್ಯೆ ಬಗೆಹರಿಸುವದಾಗಿ ರಿಜಿಸ್ಟರ್ ಕಿಶೋರ್ ಕುಮಾರ್ ಭರವಸೆ ನೀಡಿದ್ದಾರೆ.