Monday, December 23, 2024

ಜೆಡಿಎಸ್​ ಪಕ್ಷ ಅಧಿಕಾರಕ್ಕೆ ಬರಬೇಕು : ಹೆಚ್.ಡಿ.ರೇವಣ್ಣ

ಮೈಸೂರು: 1994 ರಲ್ಲಿ ಸಿ ಎಂ ಇಬ್ರಾಹಿಂ ಜೆಡಿಎಸ್ ನಲ್ಲಿದ್ದಾಗ 118 ಸ್ಥಾನ ಬಂದಿತ್ತು. ಆ ವೇಳೆ ಹೆಚ್ ಡಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು‌ ಎಂದು ಮೈಸೂರಿನಲ್ಲಿ ಹೆಚ್.ಡಿ.ರೇವಣ್ಣ ಹೇಳಿದರು.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಎಲ್ಲಿರ್ತಾರೆ ಆ ಪಕ್ಷ ಅಧಿಕಾರಕ್ಕೆ ಬರ್ತದೆ. ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಪಕ್ಷ ಜೆಡಿಎಸ್ ಪಕ್ಷ. ಕುಮಾರಸ್ವಾಮಿರವರು 20 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಅತ್ಯಂತ ಹೆಚ್ಚು ಅಭಿವೃದ್ಧಿ ಮಾಡಿದ್ದರು. ಅತೀ ಹೆಚ್ಚು ಶಾಲಾ ಕಾಲೇಜುಗಳನ್ನು ತೆರೆದಿದ್ದು, ಕುಮಾರಸ್ವಾಮಿ. ಕಳೆದ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದ್ದಾರೆ ಎಂದರು.

ಅದಲ್ಲದೇ, ರಾಜ್ಯದ ನೆಲ,ಜಲದ ವಿಚಾರದಲ್ಲಿ ಹೋರಾಟ ಮಾಡಿದವರು ಹೆಚ್ ಡಿ ದೇವೇಗೌಡರು. ಕೃಷ್ಣಾ ನದಿ ನೀರನ್ನು ರೈತರಿಗೆ ತಲುಪಿಸಿದರು. 5 ವರ್ಷ ಜೆಡಿಎಸ್ ಗೆ ಸಂಪೂರ್ಣ ಅಧಿಕಾರ ನೀಡಿದರೆ ಎಲ್ಲಾ ನದಿಗಳ ಸಮಸ್ಯೆಗಳನ್ನು ಬಗೆಹರಿಸುತ್ತೇವೆ. ನನಗೆ ಅಧಿಕಾರಕ್ಕಿಂತ ಜೆಡಿಎಸ್ ಪಕ್ಷ ಅಧಿಕಾರಕ್ಕೆ ತರಬೇಕು‌. ಇಬ್ರಾಹಿಂ ರವರು ನಮ್ಮ ಮನೆಯವರು ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಮರಿತಿಬ್ಬೇಗೌಡ ರವರನ್ನು ಗೆಲ್ಲಿಸಿ ಉಪಸಭಾಪತಿ ಮಾಡಿಲ್ವಾ ಅವರ ಬಗ್ಗೆ ಹೆಚ್ಚು ಮಾತನಾಡಲ್ಲಾ ಜಿ ಟಿ ದೇವೇಗೌಡರು ನಮ್ಮ ಕುಟುಂಬದವರಿದ್ದ ಹಾಗೆ ಅವರು ಎಲ್ಲೂ ಹೋಗಲ್ಲಾ, ನಮ್ಮ ಜೊತೆಗೆ ಇರುತ್ತಾರೆ. ಭವಾನಿ ರೇವಣ್ಣ ರವರು ಎಲ್ಲೂ ನಿಲ್ಲುವುದಿಲ್ಲ. ಅವರು ಮನೆಯಲ್ಲಿದ್ದಾರೆ, ಮುಂದೆ ಟಿಕೆಟ್ ನೀಡಿದರೆ ನೋಡೋಣ ಎಂದು ಹೇಳಿದರು.

ಇನ್ನು, ಮೈಸೂರು-ಬೆಂಗಳೂರು 4 ಪಥದ ರಸ್ತೆ ಮಾಡಿದ್ದು ನಾವು. ರಸ್ತೆ ಪಕ್ಕದಲ್ಲಿದ್ದ ರೈತರ ಜಮೀನನ್ನು ವಶಪಡಿಸಿಕೊಂಡಿದ್ದು ನಾವು ಅದರ ಪಾತ್ರ ನಮ್ಮದು. ದಶಪಥ ರಸ್ತೆ ಯಾರೋ ಕ್ರೆಡಿಟ್ ಪಡಿತಿದ್ದಾರೆ ಎಂಬ ವಿಚಾರ ನಾವು ಅವರ ಹಾಗೆ ಬೊಬ್ಬೆ ಹೊಡೆಯುವುದಿಲ್ಲ. ನಾವು ಸಿದ್ದರಾಮಯ್ಯರವರ ಬಗ್ಗೆ ಮಾತನಾಡುವುದಿಲ್ಲ, ಅವರ ಪಕ್ಷದ ಬಗ್ಗೆ ಅವರು ಮಾತನಾಡ್ತಾರೆ. 50 ವರ್ಷದಲ್ಲಿ ಮಾತನಾಡದೆ ಇದ್ದುದನ್ನು ಕುಮಾರಸ್ವಾಮಿ ಮಾಡಿ ತೋರಿದ್ದಾರೆ ಎಂದರು.

RELATED ARTICLES

Related Articles

TRENDING ARTICLES