Wednesday, January 22, 2025

ಜಾಕಿ ಫ್ಲೇವರ್​​ನಲ್ಲಿ ಅಪ್ಪು ಅಭಿಮಾನಿ ‘ಬಾಂಡ್ ರವಿ’

ಅಣ್ಣಾ ಬಾಂಡ್ ಹಾಗೂ ಜಾಕಿ ಸ್ಟೈಲ್​ನಲ್ಲಿ ಬಾಂಡ್ ರವಿ ಆ್ಯಕ್ಷನ್ ಧಮಾಕ ಸಖತ್ ಜಬರ್ದಸ್ತ್ ಆಗಿದೆ. ಯಾರು ಗುರು ಈ ಮಾಸ್ ಹೀರೋ ಅಂತ ಎಲ್ರೂ ಬಾಯ್ಮೇಲೆ ಬೆರಳಿಡೋ ರೇಂಜ್​ಗೆ ಫಾರೆಸ್ಟ್​ನಲ್ಲಿ ಗುದ್ದಾಡ್ತಿದ್ದಾರೆ ಬಾಂಡ್. ಇಷ್ಟಕ್ಕೂ ಬಾಂಡ್ ರವಿ ಯಾರು..? ಪವರ್​ಸ್ಟಾರ್​ ಅಪ್ಪುಗೂ ಈ ಬಾಂಡ್​ಗೂ ಏನು ಸಂಬಂಧ ಅನ್ನೋದ್ರ ಜೊತೆ ಆ್ಯಕ್ಷನ್ ಸೀಕ್ವೆನ್ಸ್ ಎಕ್ಸ್​ಕ್ಲೂಸಿವ್ ಮೇಕಿಂಗ್ ನಿಮ್ಮ ಮುಂದೆ.

  • ಹಚ್ಚ ಹಸಿರ ಫಾರೆಸ್ಟ್​ನಲ್ಲಿ ಹೈ ವೋಲ್ಟೇಜ್ ಮಾಸ್ ಫೈಟ್
  • ಚಿತ್ರದಲ್ಲೂ ಅಣ್ಣಾಬಾಂಡ್ ಫ್ಯಾನ್ ಈ ಬಾಂಡ್ ರವಿ..!
  • ಅಂದು ಅಪ್ಪು ಜೊತೆ ಫೈಟರ್.. ಇಂದು ಫೈಟ್ ಮಾಸ್ಟರ್

ರತ್ನನ್ ಪ್ರಪಂಚ ಸಿನಿಮಾ ನೋಡಿದ ಬಳಿಕ ಪ್ರಮೋದ್ ಅನ್ನೋ ನಟನ ಕ್ಯಾಲಿಬರ್ ಏನು ಅನ್ನೋದು ಇಡೀ ಕರುನಾಡಿಗೆ ಗೊತ್ತಾಯ್ತು. ಆ ಪ್ರತಿಭೆಗೆ ಸಿಕ್ಕ ಅಭೂತಪೂರ್ವ ವೇದಿಕೆಯೇ ಈ ಬಾಂಡ್ ರವಿ. ಯೆಸ್.. ರೀಸೆಂಟ್ ಆಗಿ ಧ್ರುವ, ವಿನೋದ್ ಪ್ರಭಾಕರ್ ಮುಂದಾಳತ್ವದಲ್ಲಿ ಸೆಟ್ಟೇರಿದ್ದ ಬಾಂಡ್ ರವಿ, ಈಗಾಗ್ಲೇ ಶೇಕಡಾ 80ರಷ್ಟು ಶೂಟಿಂಗ್ ಮಾಡಿ ಮುಗಿಸಿದೆ. ಎಸ್ ಮಹೇಂದರ್ ಶಿಷ್ಯ ಪ್ರಜ್ವಲ್ ಇದಕ್ಕೆ ಆ್ಯಕ್ಷನ್ ಕಟ್ ಹೇಳ್ತಿದ್ದು, ರೀಸೆಂಟ್ ಆಗಿ ನಡೆದ ಫೈಟ್ ಸೀಕ್ವೆನ್ಸ್​ಗೆ ವಿನೋದ್​ ಮಾಸ್ಟರ್ ಆ್ಯಕ್ಷನ್ ಕಂಪೋಸ್ ಮಾಡಿದ್ರು.

ಉಡಾಳ್ ಬಾಬು ಅಂತ ಕರೆಸಿಕೊಳ್ತಿದ್ದ ಪ್ರಮೋದ್, ಈ ಚಿತ್ರದ ಬಳಿಕ ಬಾಂಡ್ ರವಿ ಅಂತ ಕರೆಸಿಕೊಳ್ಳೋದ್ರಲ್ಲಿ ಡೌಟೇ ಇಲ್ಲವಂತೆ. ಕಾರಣ ಇಲ್ಲಿ ಪಕ್ಕಾ ಅಪ್ಪು ಅಭಿಮಾನಿಯಾಗೇ ಸಿನಿಮಾದುದ್ದಕ್ಕೂ ಬಾಂಡ್ ರವಿ ಮಿಂಚಲಿದ್ದಾರೆ. ಅಲ್ಲದೆ, ಈ ಸಿನಿಮಾಗೆ ಸ್ಫೂರ್ತಿಯೇ ಅವ್ರು ಅಂತಾರೆ ಪ್ರಮೋದ್. ಕಾಜಲ್ ಅನ್ನೋ ಕರಾವಳಿ ಬ್ಯೂಟಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸ್ತಿದ್ದು, ಮುಂಬೈನಲ್ಲೇ ಹುಟ್ಟಿ ಬೆಳೆದಿರೋದ್ರಿಂದ ಈಗೀಗ ಕನ್ನಡ ಕಲೀತಾ ಇದ್ದಾರೆ. ವಿನಯ್​ರಾಜ್​ರ ಪೆಪೆಯಲ್ಲೂ ಈಕೆಯೇ ನಾಯಕಿ. ಚಿತ್ರದ ಕಥೆ ಪ್ರಾಮಿಸಿಂಗ್ ಆಗಿದ್ದು, ಪಾತ್ರ ಕೂಡ ನೋಡುಗರ ಮನಮುಟ್ಟಲಿದೆಯಂತೆ.

ವಿನೋದ್ ಮಾಸ್ಟರ್ ಫೈಟ್ ಕಂಪೋಸ್ ಮಾಡ್ತಿದ್ದು, ಹೆಚ್​ಎಂಟಿಯ  ಹಸಿರ ಬನದಲ್ಲಿ ಚಿತ್ರಿತವಾಗ್ತಿದೆ. ಜಾಕಿ ಸಿನಿಮಾದಲ್ಲಿ ಅಪ್ಪು ಜೊತೆ ಫೈಟರ್ ಆಗಿ ಕಾಣಿಸಿಕೊಂಡಿದ್ದ ವಿನೋದ್ ಅವ್ರು, ಇಂದು ಈ ಫಾರೆಸ್ಟ್ ಫೈಟ್ ಮಾಡೋಕೆ ಅವ್ರೇ ಸ್ಫೂರ್ತಿ ಅಂತಾರೆ. ಇನ್ನು ಮೆಲೋಡಿ ಕಿಂಗ್ ಮನೋಮೂರ್ತಿಯ ಆಪ್ತರಾಗಿರೋ ನರಸಿಂಹಮೂರ್ತಿ ಅವ್ರು ಇದಕ್ಕೆ ಬಂಡವಾಳ ಹಾಕಿದ್ದು, ಸಿನಿಮಾ ಬಗ್ಗೆ ಎಕ್ಸ್​ಕ್ಲೂಸಿವ್ ಅಪ್ಡೇಟ್ಸ್ ನೀಡಿದ್ರು.

ಒಟ್ಟಾರೆ ಆದಷ್ಟು ಬೇಗ ಶೂಟಿಂಗ್ ಮುಗಿಸಿ, ಪ್ರೇಕ್ಷಕರ ಮುಂದೆ ಬರೋ ಧಾವಂತದಲ್ಲಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES