ಬೆಂಗಳೂರು: ಅಧಿಕೃತವಾಗಿ ಮುಂಗಾರು ಆರಂಭಗೊಳ್ಳಲು ಮಳೆಗಾಲಕ್ಕೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇವೆ. ಇದ್ರಿಂದ ಪ್ರತಿ ವರ್ಷ ಮಳೆ ಬಂದ್ರೆ ಸಾಕು ಒಂದಲ್ಲಾ ಒಂದು ಅನಾಹುತಗಳು ಬೆಂಗಳೂರಿನಲ್ಲಿ ನಡೆಯುತ್ತಲೇ ಇರ್ತಾವೆ. ಇದಕ್ಕೆ ಉದಾಹರಣೆ ಅಂದ್ರೆ ಕಳೆದ ವರ್ಷ ಒಂದೇ ತಿಂಗಳಲ್ಲಿ ಮೂರು ಕಟ್ಟಡಗಳು ಕುಸಿದು ಬಿದ್ದಿದ್ದು, ಹತ್ತಾರು ಜನರನ್ನು ಬಲಿ ಪಡೆದುಕೊಂಡಿದ್ವು. ಆದ್ರೆ, ಆ ರೀತಿಯ ದುರ್ಘಟನೆಗಳು ನಡೆದಾಗ ಮಾತ್ರ ಶಿಥಿಲಾವಸ್ತೆಯಲ್ಲಿರುವ ಕಟ್ಟಡಗಳನ್ನು ನೆಲಸಮ ಮಾಡ್ತೇವೆ. ಅದಕ್ಕೆ ಪಟ್ಟಿ ಸಿದ್ಧಪಡಿಸಲಾಗಿದೆ. ಸರ್ವೇ ಕೂಡಾ ಮುಗಿದಿದೆ ಅನ್ನೋ ಸಬೂಬನ್ನು ನೀಡುತ್ತಲೇ ಇದ್ರು.ಆದ್ರೆ,ಈವರೆಗೂ ಅಪಾಯದ ಅಂಚಿನಲ್ಲಿರುವ ಒಂದೇ ಒಂದು ಕಟ್ಟಡವನ್ನೂ ತೆರವು ಮಾಡಿದ ಉದಾಹರಣೆಗಳೇ ಇಲ್ಲ. ಇದ್ರಿಂದ ನೂತನವಾಗಿ ಬಂದಿರುವ ಆಯುಕ್ತ ತುಷಾರ್ ಗಿರಿನಾಥ್ ಫುಲ್ ಅಲಾಟ್ ಆಗಿದ್ದು, ಪ್ರತಿ ಶನಿವಾರ ಅಪಾಯದ ಅಂಚಿನಲ್ಲಿರುವ ಕಟ್ಟಡಗಳನ್ನು ತೆರವು ಮಾಡೋಕೆ ಸೂಚಿಸಿದ್ದಾರೆ. ಇದ್ರಿಂದ ಅಧಿಕಾರಿಗಳು ಈಗ ಮತ್ತೊಮ್ಮೆ ಸರ್ವೇ ಮಾಡೋಕೆ ಮುಂದಾಗಿದ್ದಾರೆ.
ಇನ್ನು ಸಿಲಿಕಾನ್ ಸಿಟಿಯಲ್ಲಿ ಮಳೆಗಾಲದಲ್ಲಿ ಜೋರು ಮಳೆಯೊಂದಿಗೆ ಬಿರುಗಾಳಿ ಕೂಡಾ ಬರುವ ವಾಡಿಕೆ. ಇದರಿಂದ ಎಷ್ಟೋ ಮರದ ರೆಂಬೆ ಕೊಂಬೆಗಳು ಧರೆಗುರುಳಿ ಎಷ್ಟೋ ವಾಹನಗಳು ಜಖಂ ಆಗುವುದರ ಜೊತೆಗೆ ಸಾಕಷ್ಟು ಜನ ಜೀವನ ಕೂಡಾ ಕಳೆದುಕೊಂಡಿವೆ. ಇದ್ರಿಂದ ಕಟ್ಟಡಗಳ ಜೊತೆ ಟೊಳ್ಳು ಬಿದ್ದಿರುವ ಒಣ ಮರದ ರೆಂಬೆ ಕೊಂಬೆಗಳನ್ನೂ ತೆರವುಗೊಳಿಸಿ ಅಂತ ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡೋದು ನಮ್ಮ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಾಡಿಕೆ.ಆದ್ರೆ, ಈಗ ಮಳೆಗಾಲಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರೋದ್ರಿಂದ ಈಗಲೇ ಎಚ್ಚೆತ್ತುಕೊಂಡ್ರೆ ಜನರ ಜೀವವು ಉಳಿಯುತ್ತೆ. ಸತ್ತ ಮೇಲೆ ಕೊಡುವ ಪರಿಹಾರ ಕೂಡಾ ಉಳಿಯುತ್ತೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ.