Monday, December 23, 2024

ಪೋಷಕರೇ ಎಚ್ಚರ ಮಕ್ಕಳನ್ನ ಕಾಡ್ತಿದೆ ವೈರಲ್ ಫೀವರ್

ಬೆಂಗಳೂರು: ಸಿಲಿಕಾನ್​ ಸಿಟಿ ವಾತಾವರಣದಲ್ಲಿ ವೈಪರೀತ್ಯದಿಂದ ವೈರಲ್ ಫೀವರ್ ಮಕ್ಕಳಲ್ಲಿ ಹೆಚ್ಚಾಗಿ ಕಾಡುತ್ತಿದೆ.

ನಗರದಲ್ಲಿ ವಾತಾವರಣ ವೈಪರೀತ್ಯದಿಂದ ಮಕ್ಕಳಲ್ಲಿ ಹೆಚ್ಚಾದ ವೈರಲ್ ಫೀವರ್ ಟೆನ್ಷನ್ ಶುರುವಾಗಿದ್ದು, ವೈರಲ್ ಫೀವರ್ ಗೆ ಮಕ್ಕಳೇ ಟಾರ್ಗೆಟ್ ಆಗುತ್ತಿದ್ದಾರೆ. ಕೆಮ್ಮು, ನೆಗಡಿ ಕಫ ಮತ್ತು ಜ್ವರ ಹರಡುತ್ತಿದ್ದು, ವೈರಲ್ ಫೀವರ್ ಅಟ್ಟಹಾಸದಿಂದ ಆಸ್ಪತ್ರೆ ನತ್ತ ಪುಟಾಣಿಗಳು ಮುಖಮಾಡುತ್ತಿದ್ದಾರೆ.

ಅದಲ್ಲದೇ, ಒಂದು ಚೂರು ಮೈಮರೆತ್ರೂ ಕಂದಮ್ಮಗಳನ್ನ ಪ್ರಾಣಕ್ಕೆ ಆಪತ್ತಾಗುತ್ತಿದ್ದು, ವೈರಲ್ ಫೀವರ್ ಹೊಡೆತಕ್ಕೆ ಥಂಡಾ ಹೊಡೆದ ಜನ ಮಳೆ ನಿಂತ ಮೇಲೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.

ವೈರಲ್ ಫೀವರ್ ಗೆ ಮುಂಜಾಗ್ರತೆ ಹೇಗೆ..?

-ಜ್ವರದ ಲಕ್ಷಣಗಳು ಇದ್ದರೆ ಅಂತಹವರಿಂದ ದೂರ ಇರಿ.‌
-ಕೆಮ್ಮು ನೆಗಡಿ ಇದ್ದಾಗ ಅವರ ಸಂಪರ್ಕ ಮಾಡುವುದರಿಂದ ಸುಲಭವಾಗಿ ಹರಡಲಿದೆ.
-ಹ್ಯಾಂಡ್ ಶೇಕ್ ಮಾಡೋದು, ಪಕ್ಕದಲ್ಲೇ ಕೂರುವುದು ಮಾಡಬಾರದು.
-ಮಕ್ಕಳಿಗೆ ಕೆಮ್ಮು ನೆಗಡಿ ಲಕ್ಷಣಗಳು ಇದ್ದಾಗ ಶಾಲೆಗೆ ಕಳಿಸದೇ ಇರುವುದು ಒಳಿತು.‌
-ಇದರಿಂದ ಇತರೆ ಮಕ್ಕಳಿಗೆ ಜ್ವರ ಹರಡುವುದನ್ನು ತಪ್ಪಿಸಬಹುದು.
-ಪೌಷ್ಟಿಕ ಆಹಾರ ಸೇವಿಸುವುದು.
-ಮಳೆ ಬಂದಾಗ ಬೆಚ್ಚಗಿನ ಉಡುಪು ಧರಿಸುವುದು.
-ಹೊರಗಿನ ಎಣ್ಣೆಯುಕ್ತ ಪದಾರ್ಥಕ್ಕೆ ಬ್ರೇಕ್
-ಸತತ ಮೂರು ದಿನ 99 ಡಿಗ್ರಿಗಿಂತ ಹೆಚ್ಚು ಜ್ವರ ಇದ್ರೆ ವೈದ್ಯರನ್ನ ಸಂಪರ್ಕ ಮಾಡಿ
– ಜನನಿಬಿಡ ಜಾಗದಲ್ಲಿ ಓಡಾಟ ಕಡಿಮೆ ಮಾಡಬೇಕು.
-ಬೆಚ್ಚಗಿನ ಉದ್ದನೆಯ ಬಟ್ಟೆ ಧರಿಸಬೇಕು

RELATED ARTICLES

Related Articles

TRENDING ARTICLES