Sunday, December 22, 2024

ಮುಸ್ಲಿಂಮರು ಹಟ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು : ಪ್ರಮೋದ್​ ಮುತಾಲಿಕ್

ಕೊಪ್ಪಳ:  ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠ ಇತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ಕೊಪ್ಪಳದ ಗಂಗಾವತಿಯಲ್ಲಿ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ಹೇಳಿದ್ದಾರೆ.

ಮಳಲಿ‌ ಮಸೀದಿ ಜೀರ್ಣೋದ್ಧಾರದ ವೇಳೆ ದೇವಸ್ಥಾನ ಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಶಾಸ್ತ್ರೋಕ್ತವಾಗಿ ಪತ್ತೆ ಮಾಡಿರುವುದು ಸ್ವಾಗತಾರ್ಹ. ಈ ಹಿಂದೆಯೇ ಇದು ದೇವಸ್ಥಾನ ಅಂತಾ ಗೊತ್ತಿತ್ತು. ಇದೀಗ ಅಧಿಕೃತವಾಗಿ ಶಾಸ್ತ್ರೋಕ್ತವಾಗಿ ಇದನ್ನ ಸ್ಪಷ್ಟಪಡಿಸಿದ್ದಾರೆ. ಆ ಮಸೀದಿ ಜಾಗದಲ್ಲಿ ವೀರಶೈವ ಲಿಂಗಾಯತ ಮಠ ಇತ್ತು ಎಂಬುದು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಅಲ್ಲಿನ ಮುಸ್ಲಿಂ ಮುಖಂಡರು ಸೌಹಾರ್ದಯುತವಾಗಿ ಹಿಂದೂಗಳಿಗೆ ಒಪ್ಪಿಸಬೇಕು ಎಂದರು.

ಅದಲ್ಲದೇ. ವಿನಾಕಾರಣ ಗಲಭೆ, ಸಂಘರ್ಷಕ್ಕೆ ಕಾರಣ ಆಗಬಾರದು. ಮಳಲಿಯ ದೇವಸ್ಥಾನವನ್ನ ಹಿಂದೂಗಳಿಗೆ ಒಪ್ಪಿಸಿದ್ರೆ ಸೌಹಾರ್ದತೆ ಉಳಿಯುತ್ತದೆ. ಈ ಮೂಲಕ ಇದು ಇಡೀ‌ ದೇಶಕ್ಕೆ ಮಾದರಿ ಆಗಲಿದೆ. ಇಲ್ಲವಾದರೆ ಮತ್ತೇ ದ್ವೇಷ,‌ ಮತ್ತೇ ಸಂಘರ್ಷ,‌ ಕೋರ್ಟ್ ಅಂತಾ ಶುರುವಾಗುತ್ತೆ. ಇದೆಲ್ಲ ಆಗಬಾರದು ಎಂಬುದು ನಮ್ಮೆಲ್ಲರ ಆಶಯ ಎಂದು ಹೇಳಿದರು.

ಇನ್ನು, ಕಳೆದ 1983ರಲ್ಲಿ ರಾಷ್ಟ್ರಪತಿ ಅವರಿಗೆ ವಿಎಚ್ ಪಿ ರಾಷ್ಟ್ರೀಯ ‌ಅಧ್ಯಕ್ಷರು ಒಂದು ಮನವಿ ಸಲ್ಲಿಸಿದ್ರು. ಅಶೋಕ‌ ಸಿಂಘಲ್ ರಾಷ್ಟ್ರಪತಿಗಳಿಗೆ ದಾಖಲೆ ಸಮತೇ ಮನವಿ ಸಲ್ಲಿಸಿದ್ದರು. ಸುಮಾರು 30 ಸಾವಿರ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದರ ಬಗ್ಗೆ ಮಾಹಿತಿ ನೀಡಿದ್ದರು. ಈ ಪೈಕಿ 3 ದೇವಸ್ಥಾನ ಮಾತ್ರ ನಮಗೆ ಬಿಟ್ಟು ಕೊಡಿ ಎಂದು ಮನವಿ ಮಾಡಿದ್ದರು. ಮಥುರಾ, ಅಯೋಧ್ಯಾ ಮತ್ತು ಕಾಶಿ ಕೊಡುವಂತೆ ಮನವಿ ಮಾಡಿದ್ದರು.ಅಂದು ಆಗಿನ ಸರ್ಕಾರ, ಮುಸ್ಲಿಂಮರು ಒಪ್ಪಿರಲಿಲ್ಲ. ಇದೀಗ ಒಂದೊಂದಾಗಿ ದೇವಸ್ಥಾನ ಪತ್ತೆ ಆಗ್ತಿವೆ. ಪ್ರತಿಯೊಂದನ್ನೂ ಹೋರಾಟ ಮಾಡಿ ನಾವು ವಾಪಾಸ್ ಪಡೆಯುತ್ತೇವೆ ಎಂದರು.

ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇನೆ. ಹಿಂದೂ ಸಮಾಜ ಜಾಗೃತವಾಗಿದ್ದು, ದೇವಸ್ಥಾನ ವಾಪಾಸ್ ಪಡೆಯುತ್ತೇವೆ. ಮುಸ್ಲಿಂಮರು ಹಟ ಮಾಡದೇ ದೇವಸ್ಥಾನ ಬಿಟ್ಟು ಕೊಡಬೇಕು. ದಾಳಿ ಮಾಡಿ, ದೇವಸ್ಥಾನ ಮಸೀದಿ ಮಾಡಿರುವ ದಾಳಿ ಕೋರರಿಗೆ ದೇಶದ ಮುಸ್ಲಿಂರಿಗೆ ಸಂಬಂಧ ಇಲ್ಲ. ಇಲ್ಲಿನ ಹಿಂದೂ ಸಮಾಜಕ್ಕೆ ಗೌರವ ನೀಡಿ, ಮುಸ್ಲಿಂಮರು ದೇವಸ್ಥಾನ ಬಿಟ್ಟು ಕೊಡಬೇಕು. ಗ್ಯಾನವಾಗಿ,‌ ಮಳಲಿ,‌ ವಿಯಪುರ ಸೇರಿ ಎಲ್ಲ ದೇವಸ್ಥಾನ ವಾಪಾಸ್ ಕೊಡುವಂತೆ ಸಲಹೆ ನೀಡಿದರು. ಅದೇರೀತಿ ಮುಸಲ್ಮಾನರು ಸೌಹಾರ್ದತೆಯಿಂದ ಹಿಂದೂಗಳಿಗೆ ತಪ್ಪಿಸಬೇಕು ಎಂದ ಪ್ರಮೋದ್​ ಮುತಾಲಿಕ್ ಹೇಳಿದರು.

RELATED ARTICLES

Related Articles

TRENDING ARTICLES